ಡಂಬಳ: ಸಂಜೀವಿನಿ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಮನೆಗಳಲ್ಲಿಯೇ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಈ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಮಾಸಿಕ ಸಂತೆಯನ್ನು ಆರಂಭಿಸಲು ಸರ್ಕಾರ ಸೂಚಿಸಿದೆ. ಅದರಂತೆ ಮುಂಡರಗಿ ತಾಲ್ಲೂಕಿನಾದ್ಯಂತ ಆರಂಭಿಸಲಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ವಿಶ್ವನಾಥ ಹೊಸಮನಿ ಹೇಳಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ ಮಾತನಾಡಿ, ಸಂತೆಗಳಲ್ಲಿ ಹೆಚ್ಚಿನ ಸಂಘಗಳು ಪಾಲ್ಗೊಳ್ಳಬೇಕು. ತಾವು ತಯಾರಿಸಿದ್ದ ಪರಿಶುದ್ಧವಾದ ಉತ್ಪನ್ನಗಳ ಬಗ್ಗೆ ಪ್ರಚಾರವನ್ನೂ ಮಾಡಬೇಕು. ಸಾಮಾಜಿಕ ಜಾಲತಾಣಗಳು ಹಾಗೂ ವ್ಯಾಟ್ಸಪ್ ಮೂಲಕ ಉತ್ಪನ್ನಗಳ ಪ್ರಚಾರ ನಡೆಸಿ ಆನ್ ಲೈನ್ ಮೂಲಕ ಮಾರಾಟ ಮಾಡಲು ಪ್ರಯತ್ನಿಸಿ ಎಂದು ಹೇಳಿದರು.
ಪಿಡಿಒ ಲತಾ ಮಾನೆ ಮಾತನಾಡಿ, ಸ್ವ ಸಹಾಯ ಸಂಘಗಳ ಮಹಿಳೆಯರಿಗೆ ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳಿಗೆ ಮೌಲ್ಯವರ್ಧನೆ ನೀಡುವುದು, ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸಲು ಮತ್ತು ಸದಸ್ಯರ ಆದಾಯವನ್ನು ಹೆಚ್ಚಿಸಲು ಸೂಕ್ತ ಮಾರುಕಟ್ಟೆ, ಪ್ರದರ್ಶನಕ್ಕೆ ಉತ್ತಮ ಅವಕಾಶ ಕಲ್ಪಿಸುವುದು ಸಂಜೀವಿನಿ ಮಾಸಿಕ ಸಂತೆಯ ಉದ್ದೇಶವಾಗಿದೆ. ಪ್ರತಿಯೊಬ್ಬ ಮಹಿಳೆಯರು ಮನೆಯ ಶೌಚಾಲಯಗಳನ್ನು ಬಳಸಿಕೊಳ್ಳಿ ಮತ್ತು ಸೌಚಾಲಯ ಇಲ್ಲದೆ ಇರುವವರು ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.ಕೆವಿಜಿ ಬ್ಯಾಂಕ್ ಫೀಲ್ಡ್ ಆಫೀಸರ್ ಶ್ರೀಧರ ಮಾತನಾಡಿ, ಸಂಜೀವಿನಿ ಮಾಸಿಕ ಸಂತೆಯು ಗ್ರಾಮ ಮಟ್ಟದ್ದಾಗಿದ್ದು, ಮಹಿಳೆಯರು ಯೋಜನೆಯ ಲಾಭವನ್ನು ಪಡೆದುಕೊಂಡು ಸ್ವಾವಲಂಬಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಂಬಳ ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಂಗಳಾ ಸಣ್ಣಪ್ಯಾಟಿ, ಖಜಾಂಚಿ ವಿಜಯಲಕ್ಷ್ಮಿ ಗುರುವಿನ, ಕ್ಯಾನರಾ ಬ್ಯಾಂಕ್ ಸಂಯೋಜಕ ಸಂದೀಪ ಕಟ್ಟಿ, ಗ್ರಾಪಂ ಸದಸ್ಯರಾದ ಶಂಕ್ರಪ್ಪ ಗಡಗಿ, ಮಾರುತಿ ಬಿಸನಳ್ಳಿ, ಜ್ಯೋತಿ ಬಾವಿ, ಮಹಾದೇವಕ್ಕ ಕೊಳ್ಳಾರ, ಯಲ್ಲಮ್ಮ ಬಂಡಿ, ಶೇಕವ್ವ ಪಲ್ಲೇದ, ಸಂಜೀವಿನಿ ಸಿಬ್ಬಂದಿ ವರ್ಗ ಕಿರಣಕುಮಾರ ಎಂ, ಸಂಗನಾಳ, ವಿವಿಧ ಮಹಿಳಾ ಸಂಘದ ಸ್ವಸಹಾಯ ಗುಂಪುಗಳ ಮಹಿಳೆಯರ ತಯಾರಿಸಿದ ಉತ್ಪನ್ನಗಳ ಸದಸ್ಯೆಯರು, ಸಂಜೀವಿನ ಮಹಿಳಾ ಸದಸ್ಯರು,ಲಲಿತಾ ಜೋಂಡಿ, ಸಿಬ್ಬಂದಿ ವರ್ಗ, ಗ್ರಾಪಂ ಸಿಬ್ಬಂದಿ ವರ್ಗ ಇದ್ದರು.