ಮೂಡುಬಿದಿರೆ ವಿಧಾನಸಭಾ ಕ್ಷೇತ್ರ: ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ

KannadaprabhaNewsNetwork | Published : Apr 24, 2025 12:05 AM

ಸಾರಾಂಶ

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜರುಗಿದ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ತಲುಪಬೇಕು, ಸರ್ಕಾರಿ ಕಚೇರಿ ಕೆಲಸ ಕಾರ್ಯಗಳನ್ನು ವಿಳಂಬ ಮಾಡಬಾರದೆಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜರುಗಿದ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ಇಲಾಖೆಯಲ್ಲಿ ಸಮಸ್ಯೆ ಇದ್ದರೆ ಮಾಹಿತಿ ನೀಡಿ ಸಾಧ್ಯವಾದಷ್ಟು ಸರಿ ಮಾಡುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ಮೂಲ್ಕಿ ತಾಲೂಕಿನಲ್ಲಿ ದಾಮಸ್‌ಕಟ್ಟೆ , ಕೊಲ್ಲೂರು, ಏಳಿಂಜೆ , ಉಳೆಪಾಡಿ ಆರೋಗ್ಯ ಇಲಾಖೆಯ ಆಯುಷ್ ಆರೋಗ್ಯ ಮಂದಿರ ಯೋಜನೆಯಲ್ಲಿ ಆರೋಗ್ಯ ಮಂದಿರ ಮಂಜೂರಾತಿ ಪಡೆದಿದೆ. ಆದರೆ ಸೂಕ್ತ ಸರ್ಕಾರಿ ಸ್ಥಳ ದೊರೆಯದೆ ಸಮಸ್ಯೆಯಾಗಿದೆ ಎಂದು ಇಲಾಖೆಯ ಅಧಿಕಾರಿ ತಿಳಿಸಿದರು.

ಗುತ್ತಕಾಡು ನಮ್ಮ ಕ್ಲಿನಿಕ್‌ನಲ್ಲಿ ಕಳೆದ ಮೂರು ತಿಂಗಳಿನಲ್ಲಿ ವೈದ್ಯರು ಇಲ್ಲ ಎಂಬ ಬಗ್ಗೆ ಶ್ರೀಘ್ರ ಕ್ರಮ ಕೈಗೊಳ್ಳುವಂತೆ ಶಾಸಕರು ತಿಳಿಸಿದರು. ಕಂದಾಯ ಅದಿಕಾರಿಗಳಿಗೆ ಸೂಕ್ತ ಜಾಗದ ವ್ಯವಸ್ಥೆಯ ಬಗ್ಗೆ ಮಾಹಿತಿ ಕೊಡಿ ಎಂದು ಶಾಸಕರು ತಿಳಿಸಿದರು. ಮೂಡುಬಿದಿರೆ ಆಸ್ಪತ್ರೆಯಲ್ಲಿ ಜನರೇಟರ್ ಸಮಸ್ಯೆ ಇದೆ , ಶವಾಗಾರಕ್ಕೆ ಶವ ಇಡಲು ಶೈತ್ಯಾಗಾರ ಬೇಕಾಗಿದೆ ಎಂದು ಸಮಸ್ಯೆ ಹೇಳಿದರು.

ಪಶು ಇಲಾಖೆ:

ಪಶು ಇಲಾಖೆಯಲ್ಲಿ ೧೯ ಹುದ್ದೆಗೆ ೪ ಜನ ಮಾತ್ರ ಇದ್ದಾರೆ. ಮೂಲ್ಕಿ ತಾಲೂಕಿನಲ್ಲಿ ಪಶು ಇಲಾಖೆಯಲ್ಲಿ ೧೯ ಜನ ಸಿಬ್ಬಂದಿ ಬೇಕಾಗಿದ್ದು ಅದರಲ್ಲಿ ನಾಲ್ಕು ಜನ ಮಾತ್ರ ಇದ್ದಾರೆ. ೧೫ ಹುದ್ದೆ ಖಾಲಿ ಇದೆ . ಬಳ್ಕುಂಜೆ , ಕೆಮ್ರಾಲ್ ಆಸ್ಪತ್ರೆಗೆ ವೈದ್ಯರು ಇಲ್ಲ ಎಂದು ಇಲಾಖೆಯ ವೈದ್ಯಾಧಿಕಾರಿ ಡಾ.ವಿಶ್ವರಾಧ್ಯ ಹೇಳಿದರು.

ಮಂಗಳೂರು ತಹಸೀಲ್ದಾರ್‌ ಪ್ರಶಾಂತ್ ಪಾಟೀಲ್, ಮೂಲ್ಕಿ ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ ಮಂಗಳೂರು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ಇಲಾಖೆಯ ಅದಿಕಾರಿಗಳು ಮಾಹಿತಿ ನೀಡಿದರು.

Share this article