ಮೂಡುಬಿದಿರೆ: ಶ್ರೀರಾಮ ದಿಗ್ವಿಜಯ ರಥಯಾತ್ರೆ ಆಗಮನ

KannadaprabhaNewsNetwork |  
Published : Nov 15, 2025, 02:45 AM IST
ಮೂಡುಬಿದಿರೆಯಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆ | Kannada Prabha

ಸಾರಾಂಶ

ರಾಷ್ಟ್ರವ್ಯಾಪಿಯಾಗಿ ಬದರಿಯಿಂದ ಆರಂಭಿಸಿ ಶಾಖಾ ಮಠ ಸಹಿತ ಜಪ ಕೇಂದ್ರಗಳಿಗೆ ಸಾಗಿ ಬರುತ್ತಿರುವ ಶ್ರೀ ರಾಮ ದಿಗ್ವಿಜಯ ರಥಯಾತ್ರೆ ತನ್ನ ಯಾತ್ರೆಯ 25ನೇ ದಿನ ಬುಧವಾರ ಮೂಡುಬಿದಿರೆಗೆ ಆಗಮಿಸಿತು.

ಮೂಡುಬಿದಿರೆ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಗೋವಾ ಇದರ 550ನೇ ವರ್ಷಾಚರಣೆಯ ಸಾರ್ಧ ಪಂಚ ಶತಮಾನೋತ್ಸವದ ಅಂಗವಾಗಿ ರಾಷ್ಟ್ರವ್ಯಾಪಿಯಾಗಿ ಬದರಿಯಿಂದ ಆರಂಭಿಸಿ ಶಾಖಾ ಮಠ ಸಹಿತ ಜಪ ಕೇಂದ್ರಗಳಿಗೆ ಸಾಗಿ ಬರುತ್ತಿರುವ ಶ್ರೀ ರಾಮ ದಿಗ್ವಿಜಯ ರಥಯಾತ್ರೆ ತನ್ನ ಯಾತ್ರೆಯ 25ನೇ ದಿನ ಬುಧವಾರ ಮೂಡುಬಿದಿರೆಗೆ ಆಗಮಿಸಿತು.ಮಂಗಳೂರಿನ ಮಂಗಲರಾಮ ಜಪಕೇಂದ್ರದಿಂದ ಬಂದ ರಥವನ್ನು ಮೂಡುವೇಣುಪುರದ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ವಿದ್ಯಾನಿಧಿ ಜಪ ಕೇಂದ್ರದ ವತಿಯಿಂದ ಆಡಳಿತ ಮಂಡಳಿಯವರು ಭಜಕರು ಸ್ವಾಗತಿಸಿದರು.

ಶ್ರೀ ಹನುಮಂತ ದೇವಸ್ಥಾನದ ಎದುರು ಭಜಕರು, ರಥವವನ್ನು ಪೂರ್ಣಕುಂಭ, ಮಂಗಳವಾದ್ಯ, ಭಜನೆ ಸಂಕೀರ್ತನೆ , ಜಯ ಘೋಷದೊಂದಿಗೆ ಇದಿರುಗೊಂಡು ಬಳಿಕ ಶ್ರೀ ವೆಂಕಟರಮಣ ದೇವಳದ ಪ್ರಾಂಗಣಕ್ಕೆ ಬರ ಮಾಡಿಕೊಳ್ಳಲಾಯಿತು. ಅಲ್ಲಿ ರಥಾರೂಢ ಲಕ್ಷ್ಮಣ, ಸೀತಾ ಸಹಿತ ಶ್ರೀ ರಾಮಚಂದ್ರ, ಹನುಮಂತ ದೇವರ ಬಿಂಬಗಳಿಗೆ ಅಪರಾಹ್ನದ ಪೂಜೆ , ಶ್ರೀ ದೇವಳದಲ್ಲಿ ಅಪರಾಹ್ನದ ಮಹಾಪೂಜೆ ನಡೆಯಿತು. ರಥದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ ಹಾಗೂ ಮೊಕ್ತೇಸರರು, ವಿದ್ಯಾನಿಧಿ ಜಪಕೇಂದ್ರದ ಪ್ರಮುಖರು, ಪೊನ್ನೆಚಾರಿ ದೇವಳದ ಉಪ ಕೇಂದ್ರದ ಎಂ.ಪಿ. ಅಶೋಕ್ ಕಾಮತ್ ವೇಣೂರು ಉಪ ಕೇಂದ್ರದ ಭಾಸ್ಕರ್ ಪೈ, ಕೆಸರುಗದ್ದೆ ಉಪ ಜಪ ಕೇಂದ್ರದ ಬಿ. ವಿಠಲ ರಾಯ ಕಾಮತ್ ಹಾಗೂ ಭಾರೀ ಸಂಖ್ಯೆಯಲ್ಲಿ ಭಜಕರು ಉಪಸ್ಥಿತರಿದ್ದರು. ಮೂಡುಬಿದಿರೆ ವಿಧ್ಯಾನಿಧಿ ಜಪಕೇಂದ್ರದಿಂದ ಅಪರಾಹ್ನ ಮಿತ್ತಬೈಲು ಶ್ರೀ ರಾಮ ಮಂದಿರದ ಸತ್ಯ ವಿಕ್ರಮ ಜಪಕೇಂದ್ರಕ್ಕೆ ರಥವನ್ನು ಬೀಳ್ಕೊಡಲಾಯಿತು.

PREV

Recommended Stories

ಬೈಂದೂರು ಕ್ಷೇತ್ರಕ್ಕೆ ಕ್ಯಾನ್‌ಫಿನ್‌ 1 ಕೋಟಿ ರು.ದೇಣಿಗೆ: ಗಂಟಿಹೊಳೆ
ಬುಕ್ಕಾಂಬುದಿಗೆ ಉಜ್ಜಯನಿ ಶ್ರೀ ಪಾದಯಾತ್ರೆ