ಮೂಡುಬಿದಿರೆ: 63ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ, ವೈವಿಧ್ಯಮಯ ಸ್ಪರ್ಧೆಗಳ ಆಯೋಜನೆ

KannadaprabhaNewsNetwork |  
Published : Aug 29, 2026, 02:00 AM IST
ಮೂಡುಬಿದಿರೆ:  63ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವೈವಿಧ್ಯಮಯ ಸ್ಪರ್ಧೆಗಳ ಆಯೋಜನೆ  | Kannada Prabha

ಸಾರಾಂಶ

ಗಣೇಶೋತ್ಸವ ಟ್ರಸ್ಟ್ ವತಿಯಿಂದ 63ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದ ಅಂಗವಾಗಿ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮೂಡುಬಿದಿರೆ: ಗಣೇಶೋತ್ಸವ ಟ್ರಸ್ಟ್ ವತಿಯಿಂದ 63ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದ ಅಂಗವಾಗಿ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಸ್ವರಾಜ್ಯ ಮೈದಾನದ ಬಳಿ ಮೂಡುಬಿದಿರೆ ತಾಲೂಕು ಮಟ್ಟದ ಸಾರ್ವಜನಿಕ ಯುವಕರಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ. ಪ್ರಥಮ ಬಹುಮಾನ 10,000 ರೂಪಾಯಿ ಹಾಗೂ ದ್ವಿತೀಯ ಬಹುಮಾನ 5,000 ರೂಪಾಯಿ ನಿಗದಿಪಡಿಸಲಾಗಿದೆ. ತಂಡದಲ್ಲಿ 8 ಮಂದಿ ಅಥವಾ 640 ಕೆ.ಜಿ. ತೂಕದ ಮಿತಿಯೊಂದಿಗೆ ಶೂ ಮತ್ತು ಚಪ್ಪಲಿ ಧರಿಸಲು ಅವಕಾಶವಿದೆ. ಪ್ರವೇಶ ಪತ್ರ ಸಲ್ಲಿಸಲು ಕೊನೆಯ ದಿನಾಂಕ ಸೆ.3ರಂದು ಹೆಚ್ಚಿನ ಮಾಹಿತಿಗಾಗಿ ಗೋಪಾಲ್ ಎಂ. (ಮೊ: 9880380266) ಅವರನ್ನು ಸಂಪರ್ಕಿಸಬಹುದು.ಸಾಂಸ್ಕೃತಿಕ ಸ್ಪರ್ಧೆಗಳು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿವೆ. ಸೆ.6 ರಂದು ಬೆಳಗ್ಗೆ 9.30ರಿಂದ 5ರಿಂದ 7ನೇ ತರಗತಿ, ಪ್ರೌಢಶಾಲೆ, ಕಾಲೇಜು ಮತ್ತು ಸಾರ್ವಜನಿಕ ವಿಭಾಗಗಳಿಗೆ ಭಾವಗೀತೆ ಸ್ಪರ್ಧೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಯುಕೆಜಿ, ಎಲ್‌ಕೆಜಿ, 1ರಿಂದ 4ನೇ ತರಗತಿ, 5ರಿಂದ 7ನೇ ತರಗತಿ, ಹೈಸ್ಕೂಲ್ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

ಸೆ.8 ರಂದು ಸಂಜೆ 3.30ಕ್ಕೆ ಪ್ರೌಢಶಾಲೆ, ಕಾಲೇಜು ಮತ್ತು ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ.

ಸೆ.9ರಂದು ಬೆಳಗ್ಗೆ 9.30ಕ್ಕೆ ಹೈಸ್ಕೂಲ್ ವಿಭಾಗಕ್ಕೆ ಹಾಗೂ ಸೆ.10ರಂದು ಕಾಲೇಜು ಮತ್ತು ಸಾರ್ವಜನಿಕ ವಿಭಾಗಕ್ಕೆ ಡಿಜಿಟಲೈಸ್ಡ್ ಕ್ವಿಜ್ (ರಸಪ್ರಶ್ನೆ) ಸ್ಪರ್ಧೆ ನಡೆಯಲಿದೆ.ಸೆ.11ರಂದು ಬೆಳಗ್ಗೆ 9.30ರಿಂದ ರಾಷ್ಟ್ರಪ್ರೇಮ ಸಾರುವ ನೃತ್ಯ ಸ್ಪರ್ಧೆ ಹಾಗೂ ಸೆ.12 ಬೆಳಗ್ಗೆ 9ರಿಂದ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿಭಾಗಗಳಿಗೆ ಜನಪದ ನೃತ್ಯ ಸ್ಪರ್ಧೆ ನಡೆಯಲಿದೆ.ಸೆ.16.ರಂದು ಸಂಜೆ 4.30ಕ್ಕೆ ಸಾರ್ವಜನಿಕರಿಗಾಗಿ ಹೂ ನೇಯುವ ಅಥವಾ ಕಟ್ಟುವ ಸ್ಪರ್ಧೆ ನಡೆಯಲಿದೆ.

ಸಾಂಸ್ಕೃತಿಕ ಸ್ಪರ್ಧೆಗಳ ಹೆಚ್ಚಿನ ಮಾಹಿತಿಗಾಗಿ ಸಮಾಜ ಮಂದಿರ ಸಭಾದ 63ನೇ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಸಾಂಸ್ಕೃತಿಕ ವಿಭಾಗದ ಸಂಚಾಲಕ ಯತಿರಾಜ್ ಶೆಟ್ಟಿ ಎಂ. (ದೂರವಾಣಿ: 9448625888, 6366299969, ಇಮೇಲ್: yathimoods@gmail.com) ಅವರನ್ನು ಸಂಪರ್ಕಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಕ್ಕಾಗಿ ಎಲ್ಲ ಭೇದ ಮರೆತು ಒಗ್ಗಟ್ಟಿನ ಹೋರಾಟ ಅವಶ್ಯ
ಹುನಗುಂದ ತಾಲೂಕು ಬರಪೀಡಿತವೆಂದು ಘೋಷಿಸಿ