ಮೂಡುಬಿದಿರೆ: ಭಾರಿ ಗಾಳಿ ಮಳೆ ಮನೆಗಳಿಗೆ ಹಾನಿ

KannadaprabhaNewsNetwork |  
Published : Jul 22, 2024, 01:23 AM ISTUpdated : Jul 22, 2024, 01:24 AM IST
ಮೂಡುಬಿದಿರೆ ಭಾರಿ ಗಾಳಿ ಮಳೆ ಹಲವು ಮನೆಗಳಿಗೆ ಹಾನಿ | Kannada Prabha

ಸಾರಾಂಶ

ಮನೆ ಛಾವಣಿ ಹಾನಿಗೊಂಡಿರುವ ಸಂತ್ರಸ್ತರಿಗೆ ಸಮಾಜ ಮಂದಿರದಲ್ಲಿ ತಾತ್ಕಾಲಿಕ ವಾಸ್ತವ್ಯ, ಆಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಒಂಟಿಕಟ್ಟೆ, ಸ್ವರಾಜ್ಯಮೈದಾನ ಪರಿಸರ, ಮಾಸ್ತಿಕಟ್ಟೆ ಪ್ರದೇಶಗಳಲ್ಲಿ ಭಾನುವಾರ ಸಂಜೆ ಸುರಿದ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಗೆ ಹಲವಾರು ಮನೆಗಳಿಗೆ ಹಾನಿಯಾಗಿದೆ. ತೆಂಗು ಸಹಿತ ಮರಗಳು, ೧೫ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಪತ್ರಕರ್ತ ಧನಂಜಯ ಮೂಡುಬಿದಿರೆ ಅವರು ವಾಸಿಸುವ ಶತಮಾನಗಳ ಇತಿಹಾಸವಿರುವ ಪರಂಪರೆಯ ಪುತ್ತಿಗೆ ಮನೆಯ ಮೇಲುಪ್ಪರಿಗೆ ಎದುರು ಭಾಗದ ಹೆಂಚುಗಳು ಬಹುತೇಕ ಹಾರಿ ಹೋಗಿದ್ದು ಮುಂಭಾಗದ ಛಾವಣಿಯ ಪಕ್ಕಾಸು ರೀಪುಗಳಿಗೆ ಭಾರೀ ಹಾನಿಯಾಗಿದೆ. ಮನೆಯ ಪಶ್ಚಿಮ ಭಾಗದಲ್ಲೂ ಮರ ಬಿದ್ದು ಭಾರೀ ಹಾನಿಯಾಗಿದೆ.

ಇದೇ ಪರಿಸರದಲ್ಲಿರುವ ಪ್ರಶಾಂತ್, ತೇಜಸ್, ಮಹೇಶ್ ಎಂಬವರ ಮನೆಗೂ ತೀವ್ರ ಹಾನಿಯಾಗಿದೆ. ಈ ಪರಿಸರದಲ್ಲಿ ಹಲವು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಮಹೇಶ್ ಎಂಬವರ ಮನೆಯ ಹಿಂಬದಿಯಲ್ಲಿದ್ದ ತೆಂಗಿನಮರವೊಂದು ಬುಡ ಸಮೇತ ತುಂಡರಿಸಿ ಸಮೀಪದ ಗದ್ದೆಗೆ ಹಾರಿದ್ದು ಘಟನೆಯ ತೀವ್ರತೆಗೆ ಸಾಕ್ಷಿಯಾಗಿದೆ. ಮಾಸ್ತಿಕಟ್ಟೆಯ ಅಚ್ಚಣ್ಣ ಎಂಬವರ ಮನೆಗೆ ಭಾರೀ ಹಾನಿಯಾಗಿದ್ದು ಲಕ್ಷ್ಮೀ ಅವರ ಮನೆಗೂ ಅಪಾರ ಹಾನಿಯಾಗಿದೆ. ಸಮೀಪದ ಎರಡೂ ಮನೆಗಳ ಹಂಚುಗಳು ಹಾರಿಹೋಗಿವೆ. ಪೇಪರ್‌ಮಿಲ್ ಬಳಿ ಟ್ರಾನ್ಸ್ಫರ್ ಮರ್ ಡಿ.ಪಿ. ಉರುಳಿ ಬಿದ್ದಿದೆ. ಒಂಟಿಕಟ್ಟೆಯಲ್ಲಿ ಶುಭಕರ, ಪದ್ಮನಾಭ ಎಂಬವರ ಮನೆಗೂ ಹಾನಿಯಾಗಿದೆ. ಈ ಪರಿಸರದಲ್ಲೂ ಹಲವು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಮನೆ ಛಾವಣಿ ಹಾನಿಗೊಂಡಿರುವ ಸಂತ್ರಸ್ತರಿಗೆ ಸಮಾಜ ಮಂದಿರದಲ್ಲಿ ತಾತ್ಕಾಲಿಕ ವಾಸ್ತವ್ಯ, ಆಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್‌ ತಿಳಿಸಿದ್ದಾರೆ.

ಕುಮಾರಧಾರ, ನೇತ್ರಾವತಿ ನೀರಿನ ಮಟ್ಟ ಇಳಿಕೆ

ಉಪ್ಪಿನಂಗಡಿ: ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರಿನ ಮಟ್ಟದಲ್ಲಿ ಶನಿವಾರದಿಂದ ಭಾನುವಾರದ ವರೆಗೆ ಸ್ಥಿರತೆ ಕಂಡು ಬಂದಿದ್ದು, ಸಮುದ್ರಮಟ್ಟಕ್ಕಿಂತ ೨೭.೫ ಎತ್ತರ ದಾಖಲಾಗಿದೆ.ಶನಿವಾರ ರಾತ್ರಿಯಿಂದ ಮಳೆ ಪ್ರಮಾಣದಲ್ಲಿ ಚೇತರಿಕೆ ಕಂಡು ಬಂದಿದ್ದು, ನೀರಿನ ಮಟ್ಟದಲ್ಲಿ ಕುಸಿತ ಕಂಡು ಬಂದಿದ್ದದು ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿನ ನೆರೆ ನೀರಿನಿಂದ ಜಲಾವೃತವಾಗಿದ್ದ ಕೃಷಿ ಭೂಮಿಗಳು ನೆರೆ ನೀರಿನಿಂದ ಮುಕ್ತವಾಗಿದೆ.

ಸೊಳ್ಳೆ ಉತ್ಪಾದನಾ ಕೇಂದ್ರಗಳ ತೆರವು: ಹೆದ್ದಾರಿ ಅಗಲೀಕರಣ ಕಾಮಗಾರಿಗಳ ಕಾರಣಕ್ಕೆ ಚರಂಡಿ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿ ಮಾರ್ಪಟ್ಟಿದ್ದವು. ಈ ಬಗ್ಗೆ ಪತ್ರಿಕಾ ವರದಿಯಿಂದ ಎಚ್ಚೆತ್ತ ಹೆದ್ದಾರಿ ಅಗಲೀಕರಣ ಕಾಮಗಾರಿ ಸಂಸ್ಥೆಯು ಭಾನುವಾರ ಜೆಸಿಬಿ ಬಳಸಿ ಉಪ್ಪಿನಂಗಡಿ ಪರಿಸರದ ಕೆಲವೆಡೆ ನೀರು ನಿಂತ ಸ್ಥಳದಿಂದ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ಮಾಡುವ ಮೂಲಕ ಜನರ ಭೀತಿಗೆ ಸ್ಪಂದಿಸಿದರು.

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌