ಇನ್‌ಸ್ಪೆಕ್ಟರ್‌ ಬಂಧಿಸಿ ವಿಚಾರಣೆ ನಡೆಸಿ: ದೂರುದಾರೆ ಆಗ್ರಹ

KannadaprabhaNewsNetwork |  
Published : Mar 21, 2026, 02:15 AM IST
೧೮ಕೆಎಲ್‌ಆರ್-೭ಕೋಲಾರ ಶಾಸಕ ಕೊತ್ತೂರು ಮಂಜುನಾಥ್. | Kannada Prabha

ಸಾರಾಂಶ

ಮೂಡುಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಂದೇಶ್‌ ಅವರು ನನಗೆ, ನನ್ನ ಅಕ್ಕನ ಮಗ ಶೈಲೇಶ್‌ ಹಾಗೂ ನನ್ನ ಮಗ ಅಭಿಷೇಕ್‌ ಅವರಿಗೆ ಮಾನಸಿಕ ಹಿಂಸೆ, ಜೀವ ಬೆದರಿಕೆ, ಮಾನ ಹಾನಿ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಮಾನತುಗೊಂಡಿರುವ ಇನ್ಸ್‌ಪೆಕ್ಟರ್‌ ಸಂದೇಶ್‌ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ದೂರುದಾರೆ ಕಾರ್ಕಳದ ಸುಮತಿ ನಾಯ್ಕ್‌ ಆಗ್ರಹಿಸಿದರು.

ಮಂಗಳೂರು: ಮೂಡುಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಂದೇಶ್‌ ಅವರು ನನಗೆ, ನನ್ನ ಅಕ್ಕನ ಮಗ ಶೈಲೇಶ್‌ ಹಾಗೂ ನನ್ನ ಮಗ ಅಭಿಷೇಕ್‌ ಅವರಿಗೆ ಮಾನಸಿಕ ಹಿಂಸೆ, ಜೀವ ಬೆದರಿಕೆ, ಮಾನ ಹಾನಿ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಮಾನತುಗೊಂಡಿರುವ ಇನ್ಸ್‌ಪೆಕ್ಟರ್‌ ಸಂದೇಶ್‌ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ದೂರುದಾರೆ ಕಾರ್ಕಳದ ಸುಮತಿ ನಾಯ್ಕ್‌ ಆಗ್ರಹಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸಹೋದರಿ ಪ್ರಫುಲ್ಲ ಅವರ ಸಹಕಾರದಿಂದ ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.ಈ ಸಂಬಂಧವಾಗಿ ಅಕ್ಕನ ಮಗ ಶೈಲೇಶ್‌ ತಮಗಾದ ಅನ್ಯಾಯದ ವಿರುದ್ಧ ಕಾನೂನು ಪ್ರಾಧಿಕಾರದಲ್ಲಿ ದೂರು ಸಲ್ಲಿಸಿದ್ದು, ನ್ಯಾಯಾಲಯದ ನ್ಯಾಯಾಧೀಶರು ಇನ್ಸ್‌ಪೆಕ್ಟರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ನಿರ್ದೇಶಿಸಿದ್ದಾರೆ. ಆದರೆ ಇನ್ಸ್‌ಪೆಕ್ಟರ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಪಾದಿಸಿದರು.ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ನನ್ನ ಸಹೋದರಿ ಪ್ರಫುಲ್ಲ ಅವರು ನನ್ನ ಬಗ್ಗೆ ಹೇಳಿದ ಎಲ್ಲ ಮಾತುಗಳು ಸುಳ್ಳು ಹಾಗೂ ತಪ್ಪು ಮಾಹಿತಿಯಾಗಿದೆ. ಇದರ ಬಗ್ಗೆ ದಾಖಲೆಗಳನ್ನು ನಾನು ಒದಗಿಸುತ್ತೇನೆ. ಇನ್ಸ್‌ಪೆಕ್ಟರ್‌ ಜತೆ ಆತ್ಮೀಯ ಸಂಬಂಧ ಹೊಂದಿರುವ ಕಾರಣದಿಂದ ಇನ್ಸ್‌ಪೆಕ್ಟರ್‌ ಪರವಾಗಿ ಆಕೆ ಮಾತನಾಡಿದ್ದಾರೆ ಎಂದು ಹೇಳಿದರು.ಇನ್ಸ್‌ಪೆಕ್ಟರ್‌ ಸಂದೇಶ್‌ ವಿರುದ್ಧ ಪೊಲೀಸ್‌ ಇಲಾಖೆ ಸುಮೋಟೆ ಪ್ರಕರಣ ದಾಖಲಿಸಬೇಕು. ಅವರ ಮೊಬೈಲ್‌ ಪರಿಶೀಲನೆ, ಬ್ಯಾಂಕ್‌ ಸ್ಟೇಟ್‌ಮೆಂಟ್‌ ಹಾಗೂ ಅವರ ಐಬಿ ಗುಂಪಿನಲ್ಲಿ ಇರುವ ಎಲ್ಲ ಸಂಪರ್ಕಗಳ ಮೇಲೂ ತನಿಖೆ ನಡೆಯಬೇಕು. ಪ್ರಫುಲ್ಲ ಅವರ ಮೊಬೈಲ್‌ ಮತ್ತು ಬ್ಯಾಂಕ್‌ ಸ್ಟೇಟ್‌ಮೆಂಟ್‌ಗಳನ್ನೂ ಪರಿಶೀಲಿಸಬೇಕು ಎಂದು ಸುಮತಿ ನಾಯ್ಕ್‌ ಆಗ್ರಹಿಸಿದರು.

-----------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೈಸಿಯಾ ಘೋಷಣೆ ಕ್ರೈಸ್ತ ಬಂಧುಗಳಿಗೆ ವಿಶ್ವಾಸದ ಅಡಿಪಾಯ: ಬಿಷಪ್ ಜೆರಾಲ್ಡ್ ಲೋಬೊ
ಶರಣರ ತತ್ವಗಳು ಬದುಕಿಗೆ ಪ್ರೇರಣೆ: ಡಾ. ಸವಿತಾ ಸಿದ್ದನೂರ