ಅಭಿವೃದ್ಧಿ, ಪರಿಸರದ ನಡುವೆ ಸಮತೋಲನ: ವಿವೇಕ್ ಆಳ್ವ

KannadaprabhaNewsNetwork |  
Published : Nov 22, 2026, 02:45 AM IST
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಅಗತ್ಯ: ವಿವೇಕ್ ಆಳ್ವ | Kannada Prabha

ಸಾರಾಂಶ

ಬೆಂಗಳೂರು ಚಾಣಕ್ಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ಆಯೋಜಿಸಿದ್ದ ‘ಲೇಕ್ ಕಾನ್ಫರೆನ್ಸ್

ಮೂಡುಬಿದಿರೆ: ಪಶ್ಚಿಮ ಘಟ್ಟಗಳು ಜಾಗತಿಕ ಮಟ್ಟದಲ್ಲಿ ಅತ್ಯಂತ ಸೂಕ್ಷ್ಮ ಪರಿಸರ ವ್ಯವಸ್ಥೆ ಹೊಂದಿರುವ ಪ್ರದೇಶವಾಗಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಬೆಂಗಳೂರು ಚಾಣಕ್ಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ಆಯೋಜಿಸಿದ್ದ ‘ಲೇಕ್ ಕಾನ್ಫರೆನ್ಸ್–2026’ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಬಹುತೇಕ ದೇಶಗಳಲ್ಲಿ ಕೇವಲ 30ರಿಂದ 40 ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಕಂಡುಬರುವ ಪ್ರದೇಶಗಳಿದ್ದರೆ, ಪಶ್ಚಿಮ ಘಟ್ಟಗಳಲ್ಲಿ ಸುಮಾರು 6,800 ಪ್ರಭೇದಗಳ ಜೀವವೈವಿಧ್ಯವಿದೆ ಎಂದರು.

ಮುಂದಿನ ಜ.6 ಹಾಗೂ 7ರಂದು ಹಸಿರು ಸಂವಾದದ ಹಿನ್ನಲೆಯಲ್ಲಿ ಎರಡು ದಿನದ ಸಮ್ಮೇಳನ ಆಳ್ವಾಸ್‌ನಲ್ಲಿ ನಡೆಯಲಿದೆ ಎಂದರು.

ದ್ವೆವಾರ್ಷಿಕ ಲೇಕ್ ಸಿಂಪೋಸಿಯಂ: ‘ವಿಕಸಿತ ಭಾರತಕ್ಕಾಗಿ ಜೌಗು ಪ್ರದೇಶಗಳ ಸಂರಕ್ಷಣೆ, ಸಾಂಪ್ರದಾಯಿಕ ಜ್ಞಾನ ಮತ್ತು ನವೀನ ಪ್ರಕೃತಿ ಆಧಾರಿತ ತಂತ್ರಜ್ಞಾನಗಳು’ ಎಂಬ ವಿಷಯದಡಿ ನಡೆಯುವ ಈ 15ನೇ ದ್ವೆವಾರ್ಷಿಕ ಲೇಕ್ ಸಿಂಪೋಸಿಯಂ 18ರಿಂದ 20ರವರೆಗೆ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಇಕಲಾಜಿಕಲ್ ಸೈನ್ಸಸ್‌ನ ಎನರ್ಜಿ ಆ್ಯಂಡ್ ವೆಟ್‌ಲ್ಯಾಂಡ್ಸ್ ರಿಸರ್ಚ್ ಗ್ರೂಪ್ ಜಂಟಿಯಾಗಿ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಹಾಗೂ ಪರಿಸರ ಹೋರಾಟಗಾರ ಅನಂತ ಹೆಗಡೆ ಆಶಿಸರ, ಚಾಣಕ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಯಶವಂತ ಡೋಂಗ್ರೆ, ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಟಿ.ವಿ. ರಾಮಚಂದ್ರ, ಚಾಣಕ್ಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್‌ನ ಪ್ರಾಧ್ಯಾಪಕ ಡಾ. ಶ್ರೀಶ ಚೊಕ್ಕಾಡಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಇಕಲಾಜಿಕಲ್ ಸೈನ್ಸಸ್‌ನ ಸಲಹೆಗಾರ ಡಾ. ಎಂ.ಡಿ. ಸುಭಾಷ್ ಚಂದ್ರನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನದಲ್ಲಿ ವಸತಿ, ಊಟೋಪಹಾರ ಸಮರ್ಪಕವಾಗಿರಲಿ
ಅಧಿವೇಶನದಲ್ಲಿ ಉಕ ಸಮಸ್ಯೆಗಳ ಚರ್ಚೆಗೆ ಆದ್ಯತೆ