ದೊಡ್ಡಬಳ್ಳಾಪುರ: ತಾಲೂಕಿನ ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮುನಿ ಆಂಜಿನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಮುನಿಆಂಜನಪ್ಪ ಮಾತನಾಡಿ, ಸಂಘವು ಉತ್ತಮವಾಗಿ ಬೆಳವಣಿಗೆ ಹೊಂದಲು ಎಲ್ಲಾ ನಿರ್ದೇಶಕರು ಪಕ್ಷಾತೀತವಾಗಿ ಸಹಕರಿಸಬೇಕು. ಸಂಘದ ಎಲ್ಲಾ ಸದಸ್ಯರ ಸಹಕಾರ ಹಾಗೂ ಗ್ರಾಮದ ಹಿರಿಯ ಮುಖಂಡರ ಬೆಂಬಲ ಸಲಹೆಯನ್ನು ಅನುಸರಿಸಿ ಸಂಘದ ಸರ್ವತೋಮುಖ ಬೆಳೆವಣಿಗೆಗೆ ಶ್ರಮ ವಹಿಸಲಾಗುವುದು ಎಂದರು.
ಮಾಜಿ ಅಧ್ಯಕ್ಷ ಹನುಮಂತಗೌಡ ಮಾತನಾಡಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಡಾ.ಚಿಕ್ಕಣ್ಣ, ಮಾರಪ್ಪ, ರಾಮಪ್ಪ, ಮುನಿಕೃಷ್ಣ, ಕೃಷ್ಣಪ್ಪ, ನಾರಾಯಣಪ್ಪ, ಭಾಗ್ಯಮ್ಮ, ಅಕ್ಕಯಮ್ಮ, ವೆಂಕಟಲಕ್ಷ್ಮಮ್ಮ, ಅಕ್ಕಯಮ್ಮ ಮತ್ತಿತರರು ಅಭಿನಂದಿಸಿದರು.3ಕೆಡಿಬಿಪಿ2-ದೊಡ್ಡಬಳ್ಳಾಪುರ ತಾಲೂಕಿನ ಮೋಪರಹಳ್ಳಿ ಎಂಪಿಸಿಎಸ್ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು.