ಮಹಾನ್ ಪುರುಷರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ: ಸಿದ್ದರಾಮಯ್ಯ

KannadaprabhaNewsNetwork |  
Published : Feb 04, 2024, 01:36 AM IST
ಹೊನ್ನಾಳಿ ಫೋಟೋ 3ಎಚ್.ಎಲ್.ಐ2ಃ- ಪಟ್ಟಣದ ಟಿ.ಬಿ. ವೃತ್ತದಲ್ಲಿ ಕುರುಬ ಸಮಾಜದದಿಂದ ಪ್ರತಿಷ್ಠಾಪಿಸಿದ ದಾಸಶ್ರೇಷ್ಠ ಭಕ್ತ ಕನಕದಾಸರ ಕಂಚಿನ ಪ್ರತಿಮೆಯನ್ನು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಅನಾವರಣಗೊಳಿಸಿ ಲೋಕಾರ್ಪಣೆ ಮಾಡಿದರು.ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಕುರುಬ ಸಮಾಜದ ಮುಖಂಡ ಬಿ.ಸಿದ್ದಪ್ಪ, ಎಚ್.ಬಿ. ಶಿವಯೋಗಿ ಸೇರಿದಂತೆ ಅನೇಕ ಗಣ್ಯರು ಇದ್ದರು.  | Kannada Prabha

ಸಾರಾಂಶ

ಕುವೆಂಪು ವಿಶ್ವಮಾನವ ತತ್ವ ಬೋಧಿಸಿದರೆ ಕನಕದಾಸರು ಜಾತಿ, ವರ್ಗ ಬೇಧ ರಹಿತ ಸಮಾಜವನ್ನು ಪ್ರತಿಪಾದಿಸಿದ ಮಹಾನ್ ಸಂತರು. ಕನಕದಾಸರಂತೆ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಗಾಂಧೀಜಿ ಸೇರಿ ಅನೇಕ ಮಹಾನೀಯರು ಜಾತ್ಯಾತೀತ ಮನೋಭಾವನೆಗಳಿಂದ ಸಮಸಮಾಜ ನಿರ್ಮಾಣ ಮಾಡಬಹುದು ಎಂದು ಕನಕದಾಸರ ಕುಲ ಕುಲ ಎಂದು ಹೊಡೆದಾಡದಿರಿ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕನಕದಾಸರು ಕುರುಬ ಜಾತಿಯಲ್ಲಿ ಹುಟ್ಟಿದ್ದರೂ ನಂತರ ವಿಶ್ವಮಾನವರಾಗಿ ಆದರ್ಶ ಪುರುಷರಾದರು, ಅಂತಹ ಮಹಾನ್ ಪುರುಷರ ಆದರ್ಶಗಳ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ಹೊನ್ನಾಳಿ ಪಟ್ಟಣದ ಟಿ.ಬಿ.ವೃತ್ತದಲ್ಲಿ ಅವಳಿ ತಾಲೂಕಿನ ಕುರುಬ ಸಂಘದಿಂದ ಆಯೋಜಿಸಿದ್ದ ದಾಸಶ್ರೇಷ್ಠ ಭಕ್ತ ಕನಕದಾಸರ ಕಂಚಿನ ಪ್ರತಿಮೆ ಅನಾವರಣ ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನಕದಾಸರು ಕೇವಲ ಸಂತರು, ದಾಸರು, ಸಾಹಿತಿಯಾಗಿರದೇ ಸಮಾಜ ಸುಧಾರಕರಾಗಿ ಜೀವನ ಮೌಲ್ಯಗಳ ಸಾರುವ ಮೂಲಕ ವಿಶ್ವಮಾನವರಾಗಿದ್ದಾರೆ ಎಂದರು.

ಕುವೆಂಪು ವಿಶ್ವಮಾನವ ತತ್ವ ಬೋಧಿಸಿದರೆ ಕನಕದಾಸರು ಜಾತಿ, ವರ್ಗ ಬೇಧ ರಹಿತ ಸಮಾಜವನ್ನು ಪ್ರತಿಪಾದಿಸಿದ ಮಹಾನ್ ಸಂತರು. ಕನಕದಾಸರಂತೆ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಗಾಂಧೀಜಿ ಸೇರಿ ಅನೇಕ ಮಹಾನೀಯರು ಜಾತ್ಯಾತೀತ ಮನೋಭಾವನೆಗಳಿಂದ ಸಮಸಮಾಜ ನಿರ್ಮಾಣ ಮಾಡಬಹುದು ಎಂದು ಕನಕದಾಸರ ಕುಲ ಕುಲ ಎಂದು ಹೊಡೆದಾಡದಿರಿ ಎಂಬ ವಚನವನ್ನು ಉಲ್ಲೇಖಿಸಿದರು.

ಇತಿಹಾಸದಲ್ಲಿ ಬಂದು ಹೋಗಿರುವ ಬಹುಪಾಲು ಸಂತರು,ದಾರ್ಶನಿಕರು, ಮಹಾತ್ಮರು ಹುಟ್ಟಿನಿಂದ ವಿಶ್ವಮಾನವರಾಗಿ, ಬದುಕಿದ್ದರು. ಆದರೆ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಮಕ್ಕಳು ಹುಟ್ಟುವಾಗ ವಿಶ್ವಮಾನವರಾಗಿ ಬೆಳೆಯುತ್ತಾ ಜಾತಿ ವ್ಯವಸ್ಥೆಗಳ ಪ್ರಭಾವಗಳಿಂದ ಅಲ್ಪ ಮಾನವರಾಗುತ್ತಿದ್ದಾರೆ, ಆದ್ದರಿಂದ ನಾವುಗಳು ವಿಶ್ವಮಾನವರಾಗುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಕುರುಬ ಸಮಾಜದ ಮುಖಂಡ ಬಿ.ಸಿದ್ದಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬೆಳ್ಳಿಗಧೆ ನೀಡಿ, ಕಂಬಳಿ ಹೊದಿಸಿ ಸನ್ಮಾನಿಸಲಾಯಿತು. ನಂತರ ಮುಖ್ಯಮಂತ್ರಿಯವರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಶಾಸಕ ಡಿ.ಜಿ.ಶಾಂತನಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಬಸವಂತಪ್ಪ, ಅಬ್ದುಲ್ ಜಬ್ಬಾರ್ ಸಾಬ್, ಡಾ.ಡಿ.ಬಿ.ಗಂಗಪ್ಪ, ಆರ್ ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಇನ್‌ಸೈಟ್ ಸಂಸ್ಥೆ ಅಧ್ಯಕ್ಷ ವಿನಯಕುಮಾರ್, ಹೊದಿಗೆರೆ ರಮೇಶ್, ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್.ಪಾಲಾಕ್ಷಪ್ಪ, ಎಚ್.ಎ.ಉಮಾಪತಿ, ಎಚ್.ಬಿ.ಶಿವಯೋಗಿ, ದಿಡಗೂರು ಪಾಲಾಕ್ಷಪ್ಪ, ಕರವೇ ಶ್ರೀನಿವಾಸ್, ಎಚ್.ಎಸ್.ರಂಜಿತ್ ಇತರ ಮುಖಂಡರಿದ್ದರು.

ಮನುಷ್ಯರ ಪ್ರೀತಿಸುವುದು ಕಲಿಯಿರಿ

ನಾವು ಕುರುಬರು, ನಮ್ಮವರು ಕನಕರು ಎಂಬುದು ಹೆಮ್ಮೆಯಿಂದ ಹೇಳಿಕೊಳ್ಳುವ ಹಾಗೆ ಕನಕದಾಸರು ರಚಿಸಿರುವ ನಳ ಚರಿತೆ, ಹರಿಭಕ್ತಸಾರ, ರಾಮಧಾನ್ಯ ಚರಿತೆಯಂತಹ ಮಹಾನ್ ಕಾವ್ಯಗಳ ನೀವು ಓದಿ, ಮಕ್ಕಳಿಗೂ ಓದಲು ತಿಳಿಸಿ. ಮನುಷ್ಯ, ಮನುಷ್ಯರನ್ನು ಪ್ರೀತಿಸುವುದು ಕಲಿಯಬೇಕು, ಇವನ್ಯಾರವ ಇವನ್ಯಾರವ ಎನ್ನದೆ ಇವ ನಮ್ಮವ ಇವ ನಮ್ಮವ ಎಂದೆಣಿಸಿದರಯ್ಯ ಎನ್ನುವ ಬಸವಣ್ಣನವರ ವಚನದಂತೆ ನಾವು ಮನುಷ್ಯರ ಪ್ರೀತಿಸುವುದು ಕಲಿಯಬೇಕೆ ಹೊರತು ಪರಸ್ಪರ ದ್ವೇಷ ಸಾಧಿಸಬಾರದು.

ಸಿದ್ದರಾಮಯ್ಯ, ಮುಖ್ಯಮಂತ್ರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ