ಪಣಂಬೂರು ಬೀಚ್‌ನಲ್ಲಿ ನೈತಿಕ ಪೊಲೀಸ್‌: ನಾಲ್ವರು ಆರೋಪಿಗಳ ದಸ್ತಗಿರಿ

KannadaprabhaNewsNetwork |  
Published : Feb 06, 2024, 01:40 AM ISTUpdated : Feb 06, 2024, 04:48 PM IST
moral police

ಸಾರಾಂಶ

ನಗರದ ಹೊರವಲಯದ ಪಣಂಬೂರು ಬೀಚ್‌ನಲ್ಲಿ ಯುವಕ- ಯುವತಿ ಮೇಲೆ ನೈತಿಕ ಪೊಲೀಸ್‌ಗಿರಿ ನಡೆದಿದೆ. ಯುವತಿ ನೀಡಿದ ದೂರಿನಂತೆ ಹಿಂದೂ ಸಂಘಟನೆಯ ಮೂವರು ಕಾರ್ಯಕರ್ತರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಹೊರವಲಯದ ಪಣಂಬೂರು ಬೀಚ್‌ನಲ್ಲಿ ಯುವಕ- ಯುವತಿ ಮೇಲೆ ನೈತಿಕ ಪೊಲೀಸ್‌ಗಿರಿ ನಡೆದಿದೆ. ಯುವತಿ ನೀಡಿದ ದೂರಿನಂತೆ ಹಿಂದೂ ಸಂಘಟನೆಯ ಮೂವರು ಕಾರ್ಯಕರ್ತರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬಂಟ್ವಾಳ ಪಿಲಾತಬೆಟ್ಟು ಗ್ರಾಮದ ಪ್ರಶಾಂತ್ ಭಂಡಾರಿ (38), ಬೆಳ್ತಂಗಡಿ ಕರಾಯ ಗ್ರಾಮದ ಉಮೇಶ್ ಪಿ. (23), ಬೆಳ್ತಂಗಡಿ ಪುತ್ತಿಲ ಗ್ರಾಮದ ಸುಧೀರ್ (26), ಬೆಳ್ತಂಗಡಿ ಮಚ್ಚಿನ ಗ್ರಾಮದ ಕೀರ್ತನ್ ಪೂಜಾರಿ (20) ಆರೋಪಿಗಳು. ಇವರನ್ನು ದಸ್ತಗಿರಿ ಮಾಡಿದ ಪೊಲೀಸರು ಐಪಿಸಿ ಕಲಂ 143, 341, 504, 149 ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಬಳಿಕ ನೋಟೀಸ್ ನೀಡಿ ವಿಚಾರಣೆಗೆ ಕರೆದಾಗ ಠಾಣೆಗೆ ಬರುವಂತೆ ಸೂಚಿಸಿ ಕಳುಹಿಸಲಾಗಿದೆ.

ದೂರು ನೀಡಿದ ಯುವತಿ:ಭಾನುವಾರ ಸಂಜೆ ಸುಮಾರು 4.50 ಗಂಟೆಗೆ ಯುವಕ- ಯುವತಿ ಪಣಂಬೂರು ಬೀಚ್‌ನಲ್ಲಿದ್ದಾಗ ಹಿಂದೂ ಸಂಘಟನೆಯ ಯುವಕರ ಗುಂಪು ಅವರನ್ನು ಅಡ್ಡಗಟ್ಟಿ ಆಕ್ಷೇಪಿಸಿದೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. 

ತನ್ನ ಖಾಸಗಿತನಕ್ಕೆ ಧಕ್ಕೆ ಮಾಡಿದ ಯುವಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಣಂಬೂರು ಪೊಲೀಸ್‌ ಠಾಣೆಗೆ ಯುವತಿ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.ತಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕೆಲಸದ ನಿಮಿತ್ತ ಮಲ್ಪೆಗೆ ಆಗಮಿಸಿದ್ದೆ. ತನಗೆ ಪರಿಚಯವಿದ್ದ ಯುವಕನಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ದೊರೆತಿರುವುದರಿಂದ ಅವರನ್ನು ಅಭಿನಂದಿಸಲು, ಪಣಂಬೂರು ಬೀಚಿನಲ್ಲಿ ಭೇಟಿಯಾಗಿದ್ದೆವು. 

ಆದರೆ ಆರೋಪಿಗಳು ನಮ್ಮಿಬ್ಬರನ್ನು ಅಡ್ಡಗಟ್ಟಿ ಆಕ್ಷೇಪಿಸಿದ್ದು, ಕೆಲವರು ವಿಡಿಯೋ ಮಾಡಿದ್ದಾರೆ. ತನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.ಹೆಚ್ಚುವರಿ ಪೊಲೀಸ್ ಸಿಬ್ಬಂದಿನೈತಿಕ ಪೊಲೀಸ್‌ಗಿರಿ ಘಟನೆಗಳು ಮರುಕಳಿಸದಂತೆ ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್ ಮತ್ತು ಟ್ರೀ ಪಾರ್ಕ್‌ಗಳಿಗೆ ಪ್ರತಿನಿತ್ಯ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ನಿಗಾ ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ