ಪರಿಶ್ರಮದ ಸಮಾಜಕ್ಕೆ ಮುಂದೆ ಹೆಚ್ಚಿನ ಸಹಕಾರ

KannadaprabhaNewsNetwork |  
Published : Feb 06, 2026, 04:15 AM IST
ಕೌಚಲಗಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲನಾಮದೇವ ಶಿಂಪಿ ಸಮಾಜ ಚಿಕ್ಕ ಸಮಾಜವಾಗಿದ್ದರೂ ಸಹ ಸರಕಾರದ ಸಹಾಯ ಧನ, ದಾನಿಗಳ ಸಹಕಾರ ಪಡೆದುಕೊಂಡು ವಿಠ್ಠಲ ರುಕ್ಮಿಣಿ ಹೆಸರಿನಲ್ಲಿ ಬೃಹತಾಕಾರದ ಸಮುದಾಯ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿರುವುದು ಸಂತಸವಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲನಾಮದೇವ ಶಿಂಪಿ ಸಮಾಜ ಚಿಕ್ಕ ಸಮಾಜವಾಗಿದ್ದರೂ ಸಹ ಸರಕಾರದ ಸಹಾಯ ಧನ, ದಾನಿಗಳ ಸಹಕಾರ ಪಡೆದುಕೊಂಡು ವಿಠ್ಠಲ ರುಕ್ಮಿಣಿ ಹೆಸರಿನಲ್ಲಿ ಬೃಹತಾಕಾರದ ಸಮುದಾಯ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿರುವುದು ಸಂತಸವಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ನಗರದ ಹೊಸೂರ ರಸ್ತೆಯಲ್ಲಿನ ಮಹಾದೇವ ಸ್ವಾಮಿ ಮಠದ ಹಿಂದಗಡೆ ಇರುವ ವಿಠ್ಠಲ ರುಕ್ಮೀಣಿ ಸಮುದಾಯ ಭವನನದ ಉದ್ಘಾಟಿಸಿ ಮಾತನಾಡಿ, ಸಮಾಜ ಬಾಂಧವರು ರಾಜ್ಯಾದ್ಯಂತ ಸಂಚರಿಸಿ ದಾನಿಗಳಿಂದ ಧನಸಹಾಯ ಪಡೆದು ಕಟ್ಟಡ ನಿರ್ಮಿಸಿದ್ದು ಸದ್ವಿನಿಯೋಗ ಆಗಬೇಕು. ಈ ಸಮಾಜದ ಅಧ್ಯಕ್ಷ ಅಣ್ಣಪ್ಪ ಜೊಂಜಾಳೆ ಆಡಳಿತ ಮಂಡಳಿಯ ಸೇವಾ ಕಾರ್ಯ ಅನನ್ಯವಾಗಿದೆ. ಇಂತಹ ಪರಿಶ್ರಮದ ಸಮಾಜಕ್ಕೆ ಬರುವ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡುವದಾಗಿ ಭರವಸೆ ನೀಡಿದರು.

ಸಾನಿಧ್ಯವನ್ನು ಪಂಢರಪೂರದ ಗುರು ಹರಿಭಾವ ರಾಮಭಾವು ಬೋರಾಟೆ, ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಬಗಳಾಂಭದೇವಿ ದೇವಸ್ಥಾನದ ಧರ್ಮಾಧಿಕಾರಿ ಡಾ.ವೀರಯ್ಯ ಹಿರೇಮಠ ಸ್ವಾಮೀಜಿ ಮಾತನಾಡಿ, ವಿಠ್ಠಲನ ಹೆಸರಿನಲ್ಲಿ ಆಗಾಧ ಶಕ್ತಿ ಹೊಂದಿದೆ. ಸರ್ವ ಧರ್ಮಿಯರು ಇವರ ಭಕ್ತರಾಗಿದ್ದು ವಿಶೇಷವಾಗಿದೆ. ಪ್ರತಿಯೊಬ್ಬ ಮನುಷ್ಯನು ಧಾರ್ಮಿಕ ಭಾವನೆಗಳನ್ನು ಅರಿತು ನಡೆದಾಗ ಬದುಕು ಪಾವನವಾಗಲಿದೆ. ವಿಠ್ಠಲ ರುಕ್ಮೀಣಿ ಹೆಸರಿನಲ್ಲಿ ಬೃಹತ ಸಮುದಾಯ ಭವನದ ಕಟ್ಟಡ ನಿರ್ಮಾಣದ ಕಾರ್ಯ ಮೆಚ್ಚುವಂತದ್ದಾಗಿದೆ ಎಂದರು.ರಾಜ್ಯ ನಾಮದೇವ ಶಿಂಪಿ ಸಮಾಜದ ಅಧ್ಯಕ್ಷ ನಾರಾಯಣ ಕೋಪರ್ಡೆ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ನಯನಾ ಭಸ್ಮೆ ಮಾತನಾಡಿ, ನಾಮದೇವ ಸಮಾಜ ಚಿಕ್ಕ ಸಮಾಜವಾಗಿದ್ದರೂ ದಾನಿಗಳ ಸಹಕಾರದಿಂದ ಬೃಹತ ಸಮುದಾಯ ಭವನ ನಿರ್ಮಿಸಿದೆ. ಸಮಾಜ ಸಂಘಟಣೆಯಲ್ಲಿ ಯುವಕರ ಪಾತ್ರ ಅತ್ಯಂತ ಹಿರಿದ್ದಾಗಿದೆ ಎಂದು ಹೇಳಿದರು.ಅತಿಥಿಗಳಾದ ಉದ್ಯಮಿ ವಿಜಯ ಮೆಟಗುಡ್ಡ, ಪತ್ರಕರ್ತ ಈಶ್ವರ ಹೋಟಿ ಮಾತನಾಡಿದರು. ವೇದಿಕೆ ಮೇಲೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಕೀರ್ತನಕಾರ ಸುರೇಶ ಕಾಮಕರ, ಮಹಾಂತೇಶ ಶಾಸ್ತ್ರೀ ಆರಾದ್ರಿಮಠ, ನಾಮದೇವ ಶಿಂಪಿ ಸಮಾಜದ ಅಧ್ಯಕ್ಷ ಅಣ್ಣಪ್ಪ ಜೊಂಜಾಳೆ, ಪುರಸಭೆ ಮಾಜಿ ಅಧ್ಯಕ್ಷ ರಾಜಶೇಖರ ಮೂಗಿ, ಬಸವರಾಜ ಜನ್ಮಟ್ಟಿ, ವಿಜಯ ಬೋಳಣ್ಣವರ, ಅಕ್ಷತಾ ಮಾಡಲಗಿ, ಪುರಸಭೆ ಮಾಜಿ ಸದಸ್ಯ ಅಂಜನಾ ಬೊಂಗಾಳೆ, ರತ್ನಮಾಲಾ ಮೂಳೆ ಮುಂತಾದವರು ಇದ್ದರು.ಈ ವೇಳೆ ಶಾಸಕ ಮಾಹಾಂತೇಶ ಕೌಜಲಗಿ ಮತ್ತು ಶ್ರೀಗಳನ್ನು ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಸಮಾಜದ ಕಮೀಟಿಯ ಸದಸ್ಯರು, ಮಹಿಳಾ ಘಟಕದ ಸದಸ್ಯರು, ಮಿತ್ರ ಮಂಡಳಿಯ ಸದಸ್ಯರು ಹಾಗೂ ಸಮಾಜದ ಬಾಂಧವರು, ಸಾರ್ವಜನಿಕರು ಇದ್ದರು. ನಿವೃತ ಶಿಕ್ಷಕ ಅರುಣ ಹೋಮಕರ, ಸ್ವಾಗತಿಸಿದರು. ಮೀನಾಕ್ಷಿ ಕಾಮಕರ ನಿರೂಪಿಸಿದರು. ವಿಶ್ವನಾಥ ಮಹೇಂದ್ರಕರ ವಂದಿಸಿದರು. ನಂತರ ಮಹಾ ಪ್ರಸಾದ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭತ್ತದ ನಾಡಿನಿಂದ ಅಕ್ಕಿಯ ರಫ್ತು ಬಂದ್
ವಿಜ್ಞಾನದ ಭರಾಟೆಯಲ್ಲಿ ಸಾಗುತ್ತಿದೆ ಜಗತ್ತು