ಆ್ಯಂಟಿ ಕಮ್ಯುನಲ್ ಫೋರ್ಸ್ ಸ್ಥಾಪಿಸಲು ಇನ್ನೆಷ್ಟು ಬಲಿ ಬೇಕು : ಅನ್ಸಾರ್ ಅಹಮದ್

KannadaprabhaNewsNetwork |  
Published : Jun 02, 2025, 01:49 AM ISTUpdated : Jun 02, 2025, 01:17 PM IST
ಅನ್ಸರ್ | Kannada Prabha

ಸಾರಾಂಶ

ಕರಾವಳಿ ಜಿಲ್ಲೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕೋಮುಗಲಭೆ ನಡೆಯುತ್ತಿದ್ದು, ಅದೆಷ್ಟೋ ಅಮಾಯಕರು ಜೀವ ತೆತ್ತಿರುತ್ತಾರೆ.

 ಉಡುಪಿ :   ಕರಾವಳಿ ಜಿಲ್ಲೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕೋಮುಗಲಭೆ ನಡೆಯುತ್ತಿದ್ದು, ಅದೆಷ್ಟೋ ಅಮಾಯಕರು ಜೀವ ತೆತ್ತಿರುತ್ತಾರೆ. ಮೊನ್ನೆಯಷ್ಟೇ ಸುಹಾಸ್ ಶೆಟ್ಟಿಯವರ ಕೊಲೆ ನಡೆದಾಗ ರಾಜ್ಯದ ಗೃಹ ಮಂತ್ರಿಗಳು ಇಂತಹ ಪ್ರಕರಣಗಳು ಮರುಕಳಿಸದಂತೆ ಆಂಟಿ ಕಮ್ಯುನಲ್ ಫೋರ್ಸ್ ರಚಿಸಲಾಗುವುದು ಎಂದು ಭರವಸೆ ನೀಡಿದ್ದರು. 

ಆ ಘಟನೆ ನಡೆದ ನಂತರ ಈಗ ಇನ್ನೊಬ್ಬ ಅಮಾಯಕನ ಕೊಲೆ ನಡೆದಿದೆ. ಗೃಹ ಮಂತ್ರಿಗಳೇ ತಾವು ಹೇಳಿರುವ ಆಂಟಿ ಕಮ್ಯುನಲ್ ಫೋರ್ಸ್ ರಚಿಸಲು ಇನ್ನೆಷ್ಟು ಅಮಾಯಕ ಬಡವರ ಮನೆಯ ಮಕ್ಕಳ ಜೀವ ಬಲಿ ಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ಉಡುಪಿ ಅವರು ಪ್ರಶ್ನಿಸಿರುತ್ತಾರೆ.

ಗೃಹ ಮಂತ್ರಿಗಳು ಕೂಡಲೇ ತಮ್ಮ ರಾಜಕೀಯ ಲೆಕ್ಕಾಚಾರವನ್ನು ಬದಿಗಿಟ್ಟು ಸಾರ್ವಜನಿಕರ ರಕ್ಷಣೆಗೆ ಮೊದಲ ಪ್ರಾತಿನಿಧ್ಯ ನೀಡಿ ಆಂಟಿ ಕಮ್ಯುನಲ್ ಫೋರ್ಸ್ ರಚನೆಯ ಬಗ್ಗೆ ಕ್ರಮ ಕೈಗೊಂಡು ಕರಾವಳಿ ಜಿಲ್ಲೆಗಳಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು