ಕನ್ನಡಪ್ರಭ ವಾರ್ತೆ ಬೆಂಗಳೂರುವರ್ಷದಿಂದ ವರ್ಷಕ್ಕೆ ರಾಜ್ಯದ ಜಲಾಶಯಗಳಲ್ಲಿ ಹೂಳಿನ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖ 8 ಜಲಾಶಯಗಳಲ್ಲಿ 1 ಟಿಎಂಸಿಗಿಂತ ಹೆಚ್ಚಿನ ಪ್ರಮಾಣದ ಹೂಳು ತುಂಬಿದ್ದು, ಇದು ಜಲಾಶಯಗಳಲ್ಲಿ ನೀರಿನ ಶೇಖರಣೆ ಪ್ರಮಾಣಕ್ಕೆ ಹೊಡೆತ ಬೀಳುವಂತಾಗಿದೆ.
ಉಳಿದಂತೆ ನಾರಾಯಣಪುರ/ಬಸವಸಾಗರದಲ್ಲಿ 2022ರಲ್ಲಿ ನಡೆಸಿದ ಸರ್ವೇಯಂತೆ 10.55 ಟಿಎಂಸಿ, ಆಲಮಟ್ಟಿಯಲ್ಲಿ 2023ರಲ್ಲಿ ನಡೆಸಿದ ಸರ್ವೇಯಂತೆ 7.55, ಕೃಷ್ಣರಾಜ ಸಾಗರದಲ್ಲಿ 2022ರಲ್ಲಿ ನಡೆಸಿದ ಸರ್ವೇಯಂತೆ 2.02, ಘಟಪ್ರಭಾದ ಹಿಡ್ಕಲ್ 2019ರಲ್ಲಿ ನಡೆಸಿದ ಸರ್ವೇಯಂತೆ 4.98 ಟಿಎಂಸಿ ಹೂಳು ಸಂಗ್ರಹವಾಗಿದೆ. ಹಾಗೆಯೇ, ಈ ಹಿಂದಿನ ಸರ್ವೇಗಳಂತೆ ಮಲಪ್ರಭ ಜಲಾಶಯದಲ್ಲಿ 1.08 ಟಿಎಂಸಿ, ಭದ್ರಾದಲ್ಲಿ 0.76, ಹಿಪ್ಪರಗಿ 0.12, ಕಬಿನಿ 1.04, ಹಾರಂಗಿ 1.23, ಹೇಮಾವತಿ 2.68, ವಾಣಿವಿಲಾಸ ಸಾಗರ 0.58, ವಾಟೆಹೊಳೆ 0.23 ಹಾಗೂ ಮಾರ್ಕೋಹಳ್ಳಿ ಜಲಾಶಯದಲ್ಲಿ 0.13 ಟಿಎಂಸಿ ಹೂಳು ಶೇಖರಣೆಯಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ದಾಖಲೆಗಳ ಮೂಲಕ ತಿಳಿದುಬಂದಿದೆ.