ಸಾವಯವ ಕೃಷಿಯತ್ತ ಹೆಚ್ಚು ಒಲವಿರಲಿ: ಡಾ.ವೆಂಕಪ್ಪಯ್ಯ

KannadaprabhaNewsNetwork |  
Published : Nov 23, 2024, 01:17 AM IST
22ಬಿಕೆಟಿ3,(11) | Kannada Prabha

ಸಾರಾಂಶ

ತೋವಿವಿ ಪ್ರೇಕ್ಷಾಗೃಹದಲ್ಲಿ ನಡೆದ ತೋವಿವಿ 16ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಧಾರವಾಡದ ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ದೇಸಾಯಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವದರಿಂದ ಇಂದು ನಾವೆಲ್ಲ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು ಧಾರವಾಡದ ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್.ದೇಸಾಯಿ ತಿಳಿಸಿದರು.

ಬಾಗಲಕೋಟೆ ತೋಟಗಾರಿ

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ನಡೆದ ತೋವಿವಿ 16ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿಯೇ ಸರ್ವಾಧಿಕ ಕೃಷಿ ಯೋಗ್ಯ ಭೂಮಿ ಪ್ರಮಾಣ ಕೆಲವೇ ದೇಶಗಳಲ್ಲಿ ನಮ್ಮ ದೇಶ ಒಂದಾಗಿದೆ. ಪ್ರತಿಶತ 40-45ರಷ್ಟು ಕೃಷಿಗೆ ಯೋಗ್ಯವಾದ ಭೂಮಿ ಇದೆ. ಅದನ್ನು ಹಾಗೆಯೇ ಉಳಿಸಿಕೊಂಡು ಹೋಗುವುದು ಸವಾಲಾಗಿ ಪರಿಣಮಿಸಿದೆ. ಕಾರಣ ಇದನ್ನು ಉಳಿಸಿಕೊಂಡು ಹೋಗಲು ಸಣ್ಣ ರೈತರಿಂದ ದೊಡ್ಡ ರೈತರವರೆಗೆ ಉಳಿಸಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಇದ್ದ ಭೂಮಿಯಲ್ಲಿ ಸಾವಯವ ಕೃಷಿ ಪದ್ಧತಿ ಬಳಸಿಕೊಂಡು ಹೆಚ್ಚು ಆರೋಗ್ಯದ ಜೊತೆಗೆ ಹೆಚ್ಚು ಆದಾಯ ಪಡೆಯುವ ಕೆಲಸವಾಗಬೇಕು. ಗೃಹ ಕೃಷಿಯಲ್ಲಿಯೇ ಸಾವಯವ ಕೃಷಿಯಿಂದ ಉತ್ಪಾದಿಸುವುದನ್ನು ಕರಗತ ಮಾಡಿಕೊಳ್ಳಬೇಕು. ಸಾವಯವ ಕೃಷಿ ಪದ್ಧತಿಯಿಂದ ಭೂಮಿ ಫಲವತ್ತತೆ ಉಳಿಸಕೊಳ್ಳಲು ಸಾಧ್ಯ. ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಬಹುದಾಗಿದೆ. ಇದರಿಂದ ಸಾಲಭಾದೆ ಹಾಗೂ ಇತರೆ ಕಷ್ಟಗಳು ಬರದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಾವಯವ ಕೃಷಿ ಪದ್ಧತಿಯಲ್ಲಿ ಪೋಲಾಗುತ್ತಿರುವ ನೀರು ಸಹ ಸಂರಕ್ಷಿಸಬಹುದಾಗಿದೆ. ಹನಿ ಹಾಗೂ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡಾಗ ಪ್ರಾಕೃತಿವಾಗಿ ಬೀಳುವ ಮಳೆಯಂತ ಅನುಭವ ಸಸ್ಯಗಳಿಗೆ ನೀಡುತ್ತಿರುವುದರಿಂದ ಇಳುವರಿ ಹೆಚ್ಚಿಗೆ ಪಡೆಯಲು ಸಾಧ್ಯವಾಗುತ್ತದೆ. ಕೃಷಿಯಲ್ಲಾಗಲಿ, ತೋಟಗಾರಿಕೆಯಲ್ಲಾಗಲಿ ಕೃಷಿಯೇತರ ಚಟುವಟಿಕೆಗಳಾದ ಹೈನುಗಾರಿಕೆ, ಕುರಿ, ಕೋಳಿ ಸಾಗಾಣಿಕೆ ಮಾಡುವುದರಿಂದ ಸಾವಯವ ಕೃಷಿಗೆ ಪೂರಕವಾದ ಪೋಷಕಾಂಶ ಪಡೆದು ಅಬಿವೃದ್ಧಿಯತ್ತ ಸಾಗಲು ಸಾದ್ಯವೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಮಹೇಶ ಶಿರೂರ ಮಾತನಾಡಿ, ಕಲಿತ ವಿದ್ಯೆ ತೋಟಗಾರಿಕೆ ಆಗಿದ್ದರೆ ಕಾರ್ಯನಿರ್ವಹಿಸುವ ಕ್ಷೇತ್ರ ಬೇರೆಯಾಗಿದೆ. ಶೇ.50ರಷ್ಟು ವಿದ್ಯಾರ್ಥಿಗಳು ಉದ್ಯಮ ಪ್ರಾರಂಬಿಸಲು ಮುಂದಾಗಿದ್ದಾರೆ. ಉಳಿದವರು ಏನು ಮಾಡಬೇಕೆಂದು ತಿಳಿಯದೇ ಗೊಂದಲದಲ್ಲಿ ಇದ್ದಾರೆ. ಶಿಕ್ಷಣದಲ್ಲಿ ಅಷ್ಟೇ ಅಲ್ಲ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ. ಇಲ್ಲಿಯ ವಿದ್ಯಾರ್ಥಿಯೊಬ್ಬ ಇಂಡಿಯನ್ ಪಾರೆಸ್ಟ ಸರ್ವಿಸ್‌ (ಐಎಫ್ಎಸ್) ಹುದ್ದೆಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತೋವಿವಿ ಕುಲಪತಿ ಡಾ.ವಿಷ್ಣುವರ್ಧನ ಮಾತನಾಡಿ, ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯ ಪ್ರತಿವರ್ಷ ಒಂದೊಂದು ಯೋಜನೆ ಹಾಕಿಕೊಳ್ಳಲಾಗುತ್ತಿದೆ. 47 ಕೋಟಿ ರು. ವೆಚ್ಚದಲ್ಲಿ ಹವಾಮಾನ ನಿಯಂತ್ರಣ ಬೆಳೆ ಯೋಜನೆ ಎಂಬ ಹೊಸ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಅಲ್ಲದೇ 120 ಕೋಟಿ ರು. ಬೃಹತ್‌ ಯೋಜನೆ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದರಲ್ಲೂ ಕೂಡಾ ಯಶಸ್ವಿಯಾಗುತ್ತೇವೆ ಎಂಬ ನಂಬಿಕೆ ಇರುವುದಾಗಿ ತಿಳಿಸಿದರು.

ತೋವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ.ಎಸ್.ಎನ್.ವಾಸುದೇವನ್, ವಿಶ್ರಾಂತ ಕುಲಪತಿ ಎಸ್.ಬಿ.ದಂಡೀನ ಮಾತನಾಡಿದರು. ತೋವಿವಿ ಕುಲಸಚಿತ ಮಹಾದೇವ ಮುರಗಿ ತೋವಿವಿ ಪ್ರಗತಿ ಪಕ್ಷಿ ನೋಟ ತಿಳಿಸಿದರು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಾಧಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ತೋವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಡಾ.ಅನಿತಾ, ಶಿಕ್ಷಣ ನಿರ್ದೇಶಕ ಡಾ.ಎನ್.ಕೆ.ಹೆಗಡೆ, ಡೀನ್ ತಮ್ಮಯ್ಯ ಎನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ