ಡಾ. ಜಯಗೋಪಾಲ ತೋಳ್ಪಾಡಿಗೆ ಶ್ರೀ ಕೃಷ್ಣ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Sep 10, 2026, 02:45 AM IST
ಮೂಡುಬಿದಿರೆ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ 40ನೇ ವರ್ಷದ ಮೊಸರುಕುಡಿಕೆ ಉತ್ಸವಡಾ. ಜಯಗೋಪಾಲ ತೋಳ್ಪಾಡಿ ಅವರಿಗೆ ‘ಶ್ರೀ ಕೃಷ್ಣ ಪ್ರಶಸ್ತಿ‘ ಪ್ರದಾನ | Kannada Prabha

ಸಾರಾಂಶ

ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಯಕ್ಷಗಾನೀಯ ಮೊಸರುಕುಡಿಕೆ ಉತ್ಸವದ ಸಂದರ್ಭ ಮೂಡುಬಿದಿರೆ ಪೇಟೆಯ ಶ್ರೀ ಕೃಷ್ಣ ಕಟ್ಟೆಯಲ್ಲಿ ಶನಿವಾರ ನಡೆದ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನ 40ನೇ ವರ್ಷದ ಸಾಂಸ್ಕೃತಿಕ ಕಲಾಪಗಳ ಸಭಾ ಕಾರ್ಯಕ್ರಮದಲ್ಲಿ ಜಿ.ವಿ. ಪೈ ಸ್ಮಾರಕ ಆಸ್ಪತ್ರೆಯ ಡಾ. ಜಯಗೋಪಾಲ ತೋಳ್ಪಾಡಿ ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಅಭಿನಂದನೆಯ ನುಡಿ ಸಹಿತ 2026ನೇ ಸಾಲಿನ ಶ್ರೀಕೃಷ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೂಡುಬಿದಿರೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಯಕ್ಷಗಾನೀಯ ಮೊಸರುಕುಡಿಕೆ ಉತ್ಸವದ ಸಂದರ್ಭ ಮೂಡುಬಿದಿರೆ ಪೇಟೆಯ ಶ್ರೀ ಕೃಷ್ಣ ಕಟ್ಟೆಯಲ್ಲಿ ಶನಿವಾರ ನಡೆದ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನ 40ನೇ ವರ್ಷದ ಸಾಂಸ್ಕೃತಿಕ ಕಲಾಪಗಳ ಸಭಾ ಕಾರ್ಯಕ್ರಮದಲ್ಲಿ ಜಿ.ವಿ. ಪೈ ಸ್ಮಾರಕ ಆಸ್ಪತ್ರೆಯ ಡಾ. ಜಯಗೋಪಾಲ ತೋಳ್ಪಾಡಿ ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಅಭಿನಂದನೆಯ ನುಡಿ ಸಹಿತ 2026ನೇ ಸಾಲಿನ ಶ್ರೀಕೃಷ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ, ಬಿಜೆಪಿ ದ.ಕ. ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ ಎಂ., ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಇರುವೈಲು ತಾರಾನಾಥ ಪೂಜಾರಿ, ಉದ್ಯಮಿಗಳಾದ ಕೆ. ಶ್ರೀಪತಿ ಭಟ್, ಅನಂತಕೃಷ್ಣ ರಾವ್, ಸುಗಂಧಿ ಹರೀಶ್ ಅಮೀನ್ ಮುಂಬೈ, ಪ್ರಭಾಚಂದ್ರ ಜೈನ್, ರಾಜೇಂದ್ರ ಕುಮಾರ್ ಜೈನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಪುರಸಭೆ ನಿಕಟಪೂರ್ವ ಸದಸ್ಯ ಪುರಂದರ ದೇವಾಡಿಗ, ದೇವಳದ ಮೊಕ್ತೇಸರ ಗುರಪ್ರಸಾದ್ ಹೊಳ್ಳ ಭಾಗವಹಿಸಿದ್ದರು. ಮುದ್ದುಕೃಷ್ಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಾಧಕ ಪ್ರಶಸ್ತಿ: ದ್ವಿ.ಪಿ.ಯು. ಪರೀಕ್ಷೆಯಲ್ಲಿ 600ರಲ್ಲಿ 600 ಅಂಕ ಗಳಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದ ಆಳ್ವಾಸ್ ನ ದಿಶಾ ಪೂಜಾರಿ, ಬಹುಮುಖ ಪ್ರತಿಭೆ ಆಳ್ವಾಸ್ ನ ಸ್ನೇಹಾ ಎಂ. ಕಾರ್ಕಳ ಇವರಿಗೆ ವಿಶೇಷ ಪುರಸ್ಕಾರ ನೀಡಲಾಯತು. ಸಾಧಕರ ನೆಲೆಯಲ್ಲಿ ಇರುವೈಲು ತಾರಾನಾಥ ಪೂಜಾರಿ, ಪಾಂಡುರಾಜ ಜೈನ್(ಗೃಹರಕ್ಷಕ), ಜೀವನ್ ರಾಂ ಸುಳ್ಯ (ರಂಗಭೂಮಿ), ಡಾ. ಯೋಗಿ ಸುಧಾಕರ ತಂತ್ರಿ ಸಂಪಿಗೆ, ಪ್ರಕಾಶ್ ಜೆ. (ಮೆಸ್ಕಾಂ), ಸುಬ್ರಹ್ಮಣ್ಯ ತಂತ್ರಿ ಏದಾಡಿ (ಪೌರೋಹಿತ್ಯ), ಪ್ರಫುಲ್ಲ ಶೆಟ್ಟಿ (ಯೋಗ), ಸದಾನಂದ ನಾರಾವಿ (ಸಾಹಿತ್ಯ), ಸುರೇಶ್ ಅಂಚನ್ (ಸಿನಿಮಾ), ಎನ್.ಕೆ.ಸಾಲಿಯಾನ್ ಮಾರೂರು (ದೈವನರ್ತನ) ಅಣ್ಣಿ ದೇವಾಡಿಗ ಅಶ್ವತ್ಥಪುರ (ನಾಗಸ್ವರ), ಸಚಿನ್ ಭಂಡಾರಿ ಪ್ರಾಂತ್ಯ, ರವಿ ಪೂಜಾರಿ ಒಂಟಿಕಟ್ಟೆ (ಸಮಾಜ ಸೇವೆ) ಶ್ರೀಶ ಜೈನ್ (ಹೋಟೆಲ್) ಅವರಿಗೆ ಸಾಧಕ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಸದಸ್ಯರ ಪ್ರತಿಭಾವಂತ ಮಕ್ಕಳು, ಇಬ್ಬರು ಕ್ರೀಡಾ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಬಿ. ಬಾಲಕೃಷ್ಣ ಮಂಜೇಶ್ವರ ತಂಡದವರು ನರ್ತನ ಕೃಷ್ಣ ಶಾಸ್ತ್ರೀಯ, ಜನಪದ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಸಂಘಟನೆಯ ಅಧ್ಯಕ್ಷ ಸಂತೋಷ್ ಕುಮಾರ್, ಸಂಚಾಲಕ ಬಿ, ಸುರೇಶ್ ರಾವ್ , ಕಾರ್ಯದರ್ಶಿ ಸುಶಾಂತ ಕರ್ಕೇರ, ಕೋಶಾಧಿಕಾರಿ ಶಿವಾನಂದ ಶಾಂತಿ ಸಹಿತ ಪದಾಧಿಕಾರಿಗಳಿದ್ದರು. ಎನ್. ಆರ್. ದಾಮೋದರ ಶರ್ಮ ಬಾರ್ಕೂರು ನಿರೂಪಿಸಿದರು. ಬಳಿಕ ಮೊಸರುಕುಡಿಕೆ ಉತ್ಸವ ಜರಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಕ್ರೀಡಾಪಟುಗಳಲ್ಲಿ ಅಪ್ರತಿಮ ಪ್ರತಿಭೆ
ಸಮಾಜದಲ್ಲಿ ಅಸಮಾನತೆ, ಅಂಧಕಾರ ದೂರವಾಗಲಿ