ಕನ್ನಡಪ್ರಭ ವಾರ್ತೆ ಲೋಕಾಪುರ ಡೆಂಘೀ ಜ್ವರ ಸೊಳ್ಳೆಯಿಂದ ಹರಡುವ ಖಾಯಿಲೆಯಾಗಿದ್ದು, ಇದು ಪ್ರಪಂಚದ ಉಷ್ಣವಲಯದಲ್ಲಿ ಕಂಡು ಬರುತ್ತದೆ ಎಂದು ವಿಜ್ಞಾನ ಶಿಕ್ಷಕಿ ರೇಷ್ಮಾ ಎಸ್ ಕಲಹಾಳ ಹೇಳಿದರು. ಹೆಬ್ಬಾಳದ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದ ಡೆಂಘೀ ಜ್ವರದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಪ್ರಕರಣಗಳು ಸಂಭವಿಸುತ್ತವೆ, ಡೆಂಘೀ ಲಸಿಕೆಗಳ ಮೇಲೆ ಸಂಶೋಧನೆ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಲೋಕಾಪುರ
ಡೆಂಘೀ ಜ್ವರ ಸೊಳ್ಳೆಯಿಂದ ಹರಡುವ ಖಾಯಿಲೆಯಾಗಿದ್ದು ಇದು ಪ್ರಪಂಚದ ಉಷ್ಣವಲಯದಲ್ಲಿ ಕಂಡು ಬರುತ್ತದೆ ಎಂದು ವಿಜ್ಞಾನ ಶಿಕ್ಷಕಿ ರೇಷ್ಮಾ ಎಸ್ ಕಲಹಾಳ ಹೇಳಿದರು. ಹೆಬ್ಬಾಳದ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದ ಡೆಂಘೀ ಜ್ವರದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಪ್ರಕರಣಗಳು ಸಂಭವಿಸುತ್ತವೆ, ಡೆಂಘೀ ಲಸಿಕೆಗಳ ಮೇಲೆ ಸಂಶೋಧನೆ ಮಾಡುತ್ತಿದ್ದಾರೆ, ಸದ್ಯಕ್ಕೆ ಡೆಂಘೀ ಜ್ವರ ಸಾಮಾನ್ಯವಾಗಿರುವ ಪ್ರದೇಶಗಳಲ್ಲಿ ಸೊಳ್ಳೆ ಕಚ್ಚುವುದನ್ನು ತಪ್ಪಿಸುವುದು ಮತ್ತು ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವುದಷ್ಟೆ ಸೋಂಕನ್ನು ತಡೆಯುವ ಉತ್ತಮ ಮಾರ್ಗವಾಗಿದೆ ಎಂದರು.
ಪ್ರಾಚಾರ್ಯ ವ್ಹಿ.ವ್ಹಿ.ಬಿರಾದಾರ ಮಾತನಾಡಿ ಡೆಂಘೀ ಸಾಮಾನ್ಯವಾಗಿ ಸೋಂಕಿತ ಸೊಳ್ಳೆಯಿಂದ ಕಚ್ಚಿದ ೪-೧೦ ದಿನಗಳ ನಂತರ ಲಕ್ಷಣ ಪ್ರಾರಂಭವಾಗುತ್ತದೆ. ಡೆಂಘೀ ಜ್ವರವು ೧೦೪ಎಫ್ ತಲೆನೋವು, ಸ್ನಾಯು, ಮೂತ್ರದಲ್ಲಿ ರಕ್ತ ಮಲ ಅಥವಾ ವಾಂತಿ ಆಯಾತ ಕಫಾ ಅಥವಾ ತ್ವರಿತ ಉಸಿರಾಟ ಕಿರಿಕಿರಿ ಚಡಪಡಿಕೆ ಮನುಷ್ಯನಲ್ಲಿ ಕಂಡು ಬರುತ್ತವೆ. ಈ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ಡೆಂಘೀ ಜ್ವರದ ಬಗ್ಗೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ, ವಿವಿಧ ಬಹುಮಾನಗಳನ್ನು ವಿತರಿಸಲಾಯಿತು.ಈ ವೇಳೆ ಎಲ್.ಎ.ಗುರಡ್ಡಿ, ಬಿ.ಕೆ.ಡೊಳ್ಳಿನ, ಎಸ್.ಪಿ.ಮಾಗಿ, ರಮೇಶ ಲಮಾಣಿ, ಎಫ್.ಡಿ.ಎ ಗೋವಿಂದಪ್ಪ ಮಲಘಾನ, ಕೋಟೆಪ್ಪಗೋಳ ಹಾಗೂ ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.