ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಇಲ್ಲಿಗೆ ಸಮೀಪದ ಮೈದೊಳಲಿನಲ್ಲಿ ಶನಿವಾರ ಆಯೋಜಿಸಿದ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತ್ಯುತ್ಸವ ಪ್ರಯುಕ್ತ ಹಮ್ಮಿಕೊಂಡಿದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆಯ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಗಡಿಯಲ್ಲಿ ಕೆಲವರು ಪುಂಡಾಟ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಅವರಿಗೂ ರಾಜ್ಯದಲ್ಲಿ ಬದುಕುತ್ತಿರುವ ಮರಾಠಿಗರಿಗೂ ಯಾವುದೇ ಸಂಬಂಧ ಇಲ್ಲ. ಮರಾಠಿಗರು ರಾಜ್ಯದ ಕನ್ನಡಿಗರೊಂದಿಗೆ ಮತ್ತು ಅನ್ಯ ಧರ್ಮೀಯರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಹಬಾಳ್ವೆ ಜೀವನ ನಡೆಸುತ್ತಿದ್ದಾರೆ. ರಾಜ್ಯದ ಮರಾಠಿಗರು ಕನ್ನಡ ಭಾಷಾಪ್ರೇಮಿ ಸಹೃದಯಿಗಳಾಗಿದ್ದಾರೆ. ಸಣ್ಣಪುಟ್ಟ ವೈಮನಸುಗಳನ್ನು ಮರೆತು ಸಮಾಜ ಬಾಂಧವರು ಒಗ್ಗಟ್ಟಾಗಬೇಕು ಎಂದರು.ಮುಂದಿನ ಪೀಳಿಗೆಗೆ ಸಮಾನತೆ ಸಮಾಜವನ್ನು ಕೊಡುಗೆಯಾಗಿ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಬಹುಮುಖ್ಯವಾಗಿ ಯುವಕರು ಸಮಾಜದ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಭಾಗವಹಿಸಬೇಕು. ವ್ಯಕ್ತಿಗೆ ಸಮಾಜದ ಅವಶ್ಯಕತೆ ಇದೆ. ಸಮಾಜ ಬಿಟ್ಟು ಬಾಳುವುದು ಅಸಾದ್ಯ. ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಕೊಂಡು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದರು.
ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷೆ ವಿನೋದಮ್ಮ, ಮಾಜಿ ತಾಪಂ ಸದಸ್ಯ ಈಶ್ವರ ರಾವ್, ಬಿ.ನಾಗಪ್ಪ, ರಾಮ್‍ರಾಮ್, ಶ್ರೀನಿವಾಸ್ ಬಂಡ್ಗಾರ್, ಶಿವಾಜಿ ರಾವ್, ಹಾಲೋಜಿ ರಾವ್, ಶೇಖರ ರಾವ್, ಯಲ್ಲೋಜಿ ರಾವ್, ಮಹಾದೇವ ರಾವ್, ಕೆ.ಟಿ. ಬಸವರಾಜ್ ರಾವ್, ಚಂದ್ರೋಜಿ ರಾವ್, ವಚನ್ ಮೋರೆ, ರಾಜಶೇಖರ್, ಚಂದನ್, ನಾಗರಾಜ್ ಸೇರಿದಂತೆ ಮೈದೊಳಲು ಮರಾಠ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಮೈದೊಳಲಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ರಾಜಬೀದಿ ಉತ್ಸವಕ್ಕೆ ಭದ್ರಾವತಿ ಮರಾಠ ಸಮಾಜದ ಅಧ್ಯಕ್ಷ ವಕೀಲ ಲೋಕೇಶ ರಾವ್ ದೊಂಬಾಳೆ ಚಾಲನೆ ನೀಡಿದರು.