ಉದಯ ನಾಯ್ಕ್‌ಗೆ ಮೋಸ್ಟ್ ಟ್ರಾನ್ಸ್‌ಫರ್ಮೆಡ್ ಲರ್ನ್ಡ್ ಅವಾರ್ಡ್

KannadaprabhaNewsNetwork |  
Published : Jul 28, 2024, 02:06 AM IST
ಉದಯ27 | Kannada Prabha

ಸಾರಾಂಶ

ಉಡುಪಿ ಕಾಪು ಪ್ಯಾಲೇಸ್ ಗಾರ್ಡನ್ ರೆಸಾರ್ಟ್‌ನಲ್ಲಿ ನಡೆದ ಈ ನಾಲ್ಕು ದಿನಗಳ ತರಬೇತಿಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಜೂನಿಯರ್ ಛೇಂಬರ್ ಇಂಟರ್‌ನ್ಯಾಷನಲ್ (ಜೆಸಿಐ) ಇಂಡಿಯಾ ಇದರ ಪಂಚರಾಜ್ಯ ವಲಯಗಳ ತರಬೇತುದಾರರ ಕಾರ್ಯಾಗಾರದಲ್ಲಿ ಕರ್ನಾಟಕ ವಲಯ 15ರ ಜೆಸಿಐ ಉಡುಪಿ ಸಿಟಿಯ ಪೂರ್ವಾಧ್ಯಕ್ಷ, ಪೂರ್ವ ವಲಯಾಧಿಕಾರಿ ಉದಯ ನಾಯ್ಕ್ ಅವರಿಗೆ ಕಾರ್ಯಾಗಾರದ ಮೋಸ್ಟ್ ಟ್ರಾನ್ಸ್‌ಫರ್ಮೆಡ್ ಲರ್ನ್ಡ್ ಅವಾರ್ಡ್- 2024 ನೀಡಿ ಗೌರವಿಸಲಾಯಿತು. ಉಡುಪಿ ಕಾಪು ಪ್ಯಾಲೇಸ್ ಗಾರ್ಡನ್ ರೆಸಾರ್ಟ್‌ನಲ್ಲಿ ನಡೆದ ಈ ನಾಲ್ಕು ದಿನಗಳ ತರಬೇತಿಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಜೆಸಿಐ ವಲಯ 15ರ ವಲಯಾಧ್ಯಕ್ಷ ನ್ಯಾಯವಾದಿ, ಜೆಸಿಐ ಸೆನಟರ್ ಗಿರೀಶ್ ಎಸ್.ಪಿ., ಉಪಾಧ್ಯಕ್ಷ ಜೆಸಿಐ ಸೆನಟರ್ ದೀಪಕ್ ರಾಜ್, ಜೆಸಿಐ ಇಂಡಿಯಾ ಆಥೋರ್ ಪೈಲೋಟ್ ವಿನೋದ್ ಶ್ರೀಧರ್, ಜೆಸಿಐ ಇಂಡಿಯಾ ನ್ಯಾಷನಲ್ ಟ್ರೈನರ್ ಕೋ ಪೈಲೋಟ್ ಎನ್. ಚಂದ್ರಶೇಖರ್ ಹಾಗೂ ಜೆಸಿಐ ಶ್ರೀನಾಥ್ ಡಿ.ವಿ., ವಲಯ ಕಾರ್ಯದರ್ಶಿ ಸೌಮ್ಯ ರಾಕೇಶ್, ಉಪಾಧ್ಯಕ್ಷ ಸನತ್‌ ಕುಮಾರ್, ನಿರ್ದೇಶಕಿ ಹೇಮಲತಾ ಪಿ., ಜೆಸಿಐ ಕಾಪು ಘಟಕ ಅಧ್ಯಕ್ಷೆ ಸುಖಲಾಕ್ಷಿ ಬಂಗೇರ ಹಾಗೂ ಪಂಚರಾಜ್ಯಗಳ (ಕರ್ನಾಟಕ, ಗೋವಾ, ಕೇರಳ, ತಮಿಳುನಾಡು, ಆಂಧ್ರ) ವಲಯಗಳ 20ಕ್ಕೂ ಹೆಚ್ಚು ಮಂದಿ ಪ್ರತಿಭಾವಂತ ತರಬೇತುದಾರರು ಭಾಗವಹಿಸಿದ್ದರು. ಜೆಸಿಐ ವಲಯ 15 ರ ಹಲವಾರು ವಲಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್ಥಿಕ ಪ್ರಗತೀಲಿ ಮಹಿಳೆ ಪಾತ್ರ ಹಿರಿದು: ಮಂಜುಳಾ ಕುಲಕರ್ಣಿ
ಎಸ್ಸೆಸ್ಸೆಲ್ಸಿ ದಾಖಲೆ ಫಲಿತಾಂಶದತ್ತ ಕುದೂರು ಕೆಪಿಎಸ್ ಶಾಲೆ