ತಾಯಿಯ ನಿಸ್ವಾರ್ಥ ಪ್ರೀತಿಯನ್ನು ಸಂಭ್ರಮಿಸಬೇಕು: ಟಿ ಜಿ ಶಶಾಂಕ್

KannadaprabhaNewsNetwork |  
Published : Apr 17, 2026, 01:15 AM IST
ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಾಲೆಯ ಮಕ್ಕಳಿಗಾಗಿ ಆಯೋಜಿಸಿದ್ದ ಮಾತೃ ಭೋಜನ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆತಾಯಿಯ ನಿಸ್ವಾರ್ಥ ಪ್ರೀತಿಯನ್ನು ಸಂಭ್ರಮಿಸಬೇಕು. ಆಕೆ ಮಾಡಿದ ಭೋಜನವನ್ನು ಒಟ್ಟಾಗಿ ಮಕ್ಕಳ ಜೊತೆ ಹಂಚಿ ಕೊಂಡು ತಿನ್ನುವ ಉತ್ತಮ ಗುಣವನ್ನು ಬೆಳೆಸುವ ಒಂದು ಅದ್ಭುತ ಪರಿಕಲ್ಪನೆಯೇ ಮಾತೃ ಭೋಜನ ಎಂದು ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಯ ಕಾರ್ಯದರ್ಶಿ ಟಿ.ಜಿ. ಶಶಾಂಕ್ ಹೇಳಿದ್ದಾರೆ.

ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಮಕ್ಕಳಿಗಾಗಿ ಮಾತೃ ಭೋಜನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ತಾಯಿಯ ನಿಸ್ವಾರ್ಥ ಪ್ರೀತಿಯನ್ನು ಸಂಭ್ರಮಿಸಬೇಕು. ಆಕೆ ಮಾಡಿದ ಭೋಜನವನ್ನು ಒಟ್ಟಾಗಿ ಮಕ್ಕಳ ಜೊತೆ ಹಂಚಿ ಕೊಂಡು ತಿನ್ನುವ ಉತ್ತಮ ಗುಣವನ್ನು ಬೆಳೆಸುವ ಒಂದು ಅದ್ಭುತ ಪರಿಕಲ್ಪನೆಯೇ ಮಾತೃ ಭೋಜನ ಎಂದು ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಯ ಕಾರ್ಯದರ್ಶಿ ಟಿ.ಜಿ. ಶಶಾಂಕ್ ಹೇಳಿದ್ದಾರೆ.

ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿನ ಸ್ವಾಮಿ ವಿವೇಕಾನಂದ ಸ್ಕೌಟ್ ಮತ್ತು ಸುನಿತಾ ವಿಲಿಯಂ ಗೈಡ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶಾಲೆ ಮಕ್ಕಳಿಗಾಗಿ ಆಯೋಜಿಸಿದ್ದ ಮಾತೃ ಭೋಜನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾತೃ ಭೋಜನ ಎಂದರೆ ಇದು ಕೇವಲ ಒಂದು ಊಟವಲ್ಲ ತಾಯಿಯ ಪ್ರೀತಿ, ವಾತ್ಸಲ್ಯ ಮತ್ತು ಆರೈಕೆಯ ಪ್ರತೀಕ. ತಾಯಂದಿರು ತಮ್ಮ ಮಕ್ಕಳಿಗೆ ಪ್ರೀತಿಯಿಂದ ತಯಾರಿಸಿದ ಮನೆ ಊಟವನ್ನು ಎಲ್ಲರೂ ಒಟ್ಟಾಗಿ ಕುಳಿತು ಸವಿಯುವ ಒಂದು ಸುಂದರ ಹಾಗೂ ಅರ್ಥಪೂರ್ಣ ಸಂಪ್ರದಾಯ ಎಂದು ಹೇಳಿದರು.

ಭಾರತ್ ಸ್ಕೌಟ್ ಮತ್ತು ಗೈಡ್‌ನ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ನೀಲಕಂಠಚಾರ್ಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಕ್ಕಳ ಹಾಗೂ ಪೋಷಕರ ನಡುವಿನ ಭಾಂದವ್ಯ, ಆತ್ಮೀಯತೆ ಹಾಗೂ ತಾಯಿ ಮಗುವಿನ ಸಂಬಂಧ, ಮಾತೃ ಭೋಜನದ ಘನತೆ ಹೆಚ್ಚಿಸಿದೆ ಜಂಕ್ ಫುಡ್‌ಗಳತ್ತ ಆಕರ್ಷಿತರಾಗುವ ಇಂದಿನ ದಿನಗಳಲ್ಲಿ, ಮನೆಯಲ್ಲಿ ತಯಾರಿಸಿದ ಶುದ್ಧ ಹಾಗೂ ಪೌಷ್ಟಿಕ ಆಹಾರದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಲು ಇದೊಂದು ಉತ್ತಮ ವೇದಿಕೆ ಯಾಗಿದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಧಮ್ಮ ಗೋಪಿನಾಥ್, ಅಶ್ವಿನಿ ಶಶಾಂಕ್ ಹಾಗೂ ಗೈಡ್ ಕ್ಯಾಪ್ಟನ್ ರಮ್ಯಾ ಇವರುಗಳು ಮತ್ತು ಪೋಷಕರು ಮಕ್ಕಳಿಗೆ ಕೈತುತ್ತು ನೀಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.ಶಾಲೆಯ ಪ್ರಾಂಶುಪಾಲ ಡಾ. ಕಾರ್ತಿಕೇಯನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಶಾಲೆ ಗೈಡ್ ಕ್ಯಾಪ್ಟನ್ ಶಬಾನ ಸುಲ್ತಾನ, ಸ್ಕೌಟ್ ಮಾಸ್ಟರ್ ವಸಂತಕುಮಾರ ಬಿ.ಎಸ್. ಶಾಲಾ ಮಕ್ಕಳ ಪೋಷಕರು ಶಾಲಾ ಶಿಕ್ಷಕರು ಉಪಸ್ಥಿತರಿದ್ದುರು. ಶಾಲೆ ಸ್ಕೌಟ್ ಮತ್ತು ಗೈಡ್ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೇಯ, ಲೇಖನ ಹಾಗೂ ತನ್ವಿ, ಆದಿತ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

--

16ಕೆಟಿಆರ್.ಕೆ.10ಃ ತರೀಕೆರೆಯಲ್ಲಿ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿನ ಸ್ವಾಮಿ ವಿವೇಕಾನಂದ ಸ್ಕಾಟ್ ಮತ್ತು ಸುನಿತಾ ವಿಲಿಯಂ ಗೈಡ್ ಘಟಕ ಇವರಗಳ ಸಂಯುಕ್ತ ಆಶ್ರಯದಲ್ಲಿ ಶಾಲೆ ಮಕ್ಕಳಿಗೆ ಆಯೋಜಿಸಿದ್ದ ಮಾತೃ ಭೋಜನ ಕಾರ್ಯಕ್ರಮದಲ್ಲಿ ಶಾಲೆ ಕಾರ್ಯದರ್ಶಿ ಟಿ.ಜಿ. ಶಶಾಂಕ್ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ
ಪಿಪಿ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪನೆಗೆ ಮುನ್ನುಡಿ