ಬಳ್ಳಾರಿ:
ಅಖಂಡ ಬಳ್ಳಾರಿ ಜಿಲ್ಲಾ ಕಸಾಪ ವತಿಯಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ದತ್ತಿ ಮತ್ತು ವಡ್ಡಿನಶೆಟ್ರ ಸಿದ್ದರಾಮಯ್ಯ ಮತ್ತು ಶ್ರೀಮತಿ ಮಹಾಂತಮ್ಮ ದತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಾತೃಭಾಷೆಯು ಬರೀ ಒಂದು ಭಾಷೆಯಷ್ಟೇ ಆಗಿರದೆ ಪ್ರತಿಯೊಂದು ವ್ಯಕ್ತಿಯ ಸಾಂಸ್ಕೃತಿಕ ಸಾಮಾಜಿಕ ವ್ಯಕ್ತಿತ್ವದೊಂದಿಗೆ ಬೆರೆತು ಹೋಗಿರುತ್ತದೆ. ಮಗುವಿನ ಅರಿವಿನ ಬೆಳವಣಿಗೆ ಆಗುವುದೇ ಮಾತೃಭಾಷೆಯಿಂದ ಎಂಬುದು ವೈಜ್ಞಾನಿಕವಾಗಿ ರುಜುವಾತಾಗಿದೆ. ವಿಮರ್ಶಾತ್ಮಕ ಚಿಂತನೆಗಳು ಹಾಗೂ ಕೌಶಲ್ಯಗಳು ಬೆಳೆಯಲು ಸಹ ಹೆಚ್ಚು ಸಹಕಾರಿಯಾಗಿದೆ. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ತಾಯಂದಿರು ಮಕ್ಕಳಿಗೆ ಮಾತೃ ಭಾಷೆಯಲ್ಲಿ ಸಂವಹನ ಮಾಡುವ ಮೂಲಕ ಭಾಷೆಯ ಬೆಳವಣಿಗೆಯ ಹೊಣೆ ಹೊತ್ತುಕೊಳ್ಳಬೇಕು ಎಂದರು.
ಮೇಧಾ ಪದವಿ ಕಾಲೇಜಿನ ಉಪನ್ಯಾಸಕಿ ಡಾ. ವೈ.ಸುಮಾ ಅವರು ಮಾತೃ ಭಾಷೆಯ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಿದರು.ಪ್ರತಿ ಮಗುವಿನ ಸೃಜನಶೀಲತೆ ರೂಪುಗೊಳ್ಳುವುದೇ ಮಾತೃಭಾಷೆಯಿಂದ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಭಾವನೆಗಳು ಹಾಗೂ ಆಲೋಚನೆಗಳು ಸ್ಪಷ್ಟವಾಗಿ ವ್ಯಕ್ತಪಡಿಸಲು ತಾಯಿಭಾಷೆ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದರು.ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಲೇಖಾ ಬಿ., ಹಾಗೂ ದತ್ತಿದಾನಿ ಡಾ. ವಿ.ಎಸ್. ಪ್ರಭಯ್ಯ ಅವರು ಮಾತನಾಡಿದರು.
ಜ್ಯೋತಿ, ಚಾಂದ್ ಪಾಷಾ ಹಾಗೂ ಡಾ. ಎ.ಎನ್. ಸಿದ್ಧೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.