ಕುಂಕುಮ ಹಚ್ಚಿ, ಉಡಿತುಂಬಿ ಹರಸಿದ ಮಾತೆಯರು

KannadaprabhaNewsNetwork |  
Published : Apr 29, 2024, 01:35 AM IST
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು ಭಾನುವಾರ ಬಾಗಲಕೋಟೆಯಲ್ಲಿ ಪಾದಯಾತ್ರೆ ಮಾಡಿ ಮತ ಯಾಚಿಸಿದರು. ಯುವ ಮುಖಂಡ ಸಂತೋಷ ಹೊಕ್ರಾಣಿ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಇದ್ದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಭಾನುವಾರ ಬೆಳಗ್ಗೆ ಬಾಗಲಕೋಟೆಯ ಹಲವು ಪ್ರದೇಶಗಳಲ್ಲಿ ಮತಯಾಚನೆಗೆ ಹೋಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲರಿಗೆ ಮಹಿಳೆಯರು ಕುಂಕುಮ ಉಡಿ ಕೊಟ್ಟು ಪ್ರೀತಿ ತೋರಿಸಿದರು. ಒಂದು ಕ್ಷಣ ಮನೆಯೊಳಗೆ ಬಾರಮ್ಮ ಎಂದು ಕರೆದು ಅರಿಶಿಣ ಕುಂಕುಮ ಕೊಟ್ಟರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾನುವಾರ ಬೆಳಗ್ಗೆ ಬಾಗಲಕೋಟೆಯ ಹಲವು ಪ್ರದೇಶಗಳಲ್ಲಿ ಮತಯಾಚನೆಗೆ ಹೋಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲರಿಗೆ ಮಹಿಳೆಯರು ಕುಂಕುಮ ಉಡಿ ಕೊಟ್ಟು ಪ್ರೀತಿ ತೋರಿಸಿದರು. ಒಂದು ಕ್ಷಣ ಮನೆಯೊಳಗೆ ಬಾರಮ್ಮ ಎಂದು ಕರೆದು ಅರಿಶಿಣ ಕುಂಕುಮ ಕೊಟ್ಟರು. ಕೆಲವರು ಉಡಿ ತುಂಬಿದರು. ಕೆಲವರು ಶಾಲು ಹೊದಿಸಿ ಗೌರವಿಸಿದರು.ಪಾದಯಾತ್ರೆ ವೇಳೆ ಅಲ್ಲಲ್ಲಿ ಮಾತನಾಡಿದ ಸಂಯುಕ್ತಾ ಪಾಟೀಲ, ರಾಜ್ಯದಂತೆ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇಂದ್ರದಿಂದಲೂ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ಹತ್ತು ವರ್ಷ ಮೋದಿ ಅವರ ಆಡಳಿತ ನೋಡಿದ್ದೀರಿ. ಈ ಹತ್ತು ವರ್ಷಗಳಲ್ಲಿ ಬೆಲೆ ಏರಿಕೆ ಯಾವ ಮಟ್ಟದಲ್ಲಿ ಆಗಿದೆ ಎಂಬುದು ನಿಮಗೆ ಗೊತ್ತಿದೆ ಎಂದು ಹೇಳಿದರು.

ಅಡುಗೆ ಎಣ್ಣೆ ಬೆಲೆ ಎಷ್ಟಾಗಿದೆ? ಸಿಲಿಂಡರ್ ಗ್ಯಾಸ್ ಬೆಲೆ ಎಷ್ಟಿದೆ? ಎಂದು ಮಹಿಳೆಯರನ್ನು ಪ್ರಶ್ನೆ ಮಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬೆಲೆ ಎಷ್ಟಿತ್ತು ಎಂಬುದನ್ನು ಮನವರಿಕೆ ಮಾಡಲು ಪ್ರಯತ್ನಿಸಿದರು.

ಅಲ್ಲೇ ಇದ್ದ ಯುವಕರತ್ತ ನೋಡುತ್ತ ಪೆಟ್ರೋಲ್ ಬೆಲೆ ಎಷ್ಟಾಗಿದೆ ? ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿದ್ದ ಮೋದಿಯವರು ಹತ್ತು ವರ್ಷಗಳಲ್ಲಿ ಎಷ್ಟು ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಸಾಮರಸ್ಯದ ಬದುಕು ಕಾಂಗ್ರೆಸ್ ಪಕ್ಷದ ಆಶಯ. ಆದರೆ ಯುವಕರಲ್ಲಿ ಧರ್ಮದ ವಿಷ ಬೀಜ ಬಿತ್ತುವ ಪ್ರಯತ್ನ ನಡೆದಿದೆ. ಯುವಕರಿಗೆ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡುವ ಬದಲಿಗೆ ಅವರಲ್ಲಿ ಧರ್ಮದ ಅಫೀಮು ಕೊಡುತ್ತಿದ್ದಾರೆ. ಸ್ವಾಸ್ಥ್ಯ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕಾದವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಯುವಕರು ಇದನ್ನು ಗಂಭೀರವಾಗಿ ಆಲೋಚಿಸಿ ದೇಶದ ಭವಿಷ್ಯಕ್ಕಾಗಿ ಯಾರಿಗೆ ಅಧಿಕಾರ ಕೊಡಬೇಕು ಎಂಬುದನ್ನುನಿರ್ಧರಿಸಬೇಕು ಎಂದು ಮನವಿ ಮಾಡಿದರು.

ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಸಂತೋಷ ಹೊಕ್ರಾಣಿ ಮತ್ತಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ