ಕನ್ನಡಪ್ರಭ ವಾರ್ತೆ ಕಾಳಗಿ ಬೀದರ್ ಲೋಕಸಭೆ ಮತಕ್ಷೇತ್ರದ ಚುನಾವಣಾ ಕದನದಲ್ಲಿ ಸಾಗರ ಖಂಡ್ರೆ ಅವರು ವಿಜಯದ ಮಾಲೆ ಗಿಟ್ಟಿಸಿಕೊಳ್ಳುವುದರಲ್ಲಿ ನಿಸ್ಸಂದೇಹವೇ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಷ್ ರಾಠೋಡ ಹೇಳಿದರು.
ಇದೆ ಸಂದರ್ಭದಲ್ಲಿ ಕಾಳಗಿ ತಾಲ್ಲೂಕಿನ ಹೊಸಳ್ಳಿ, ಚಿಂದಕೋಟಾ, ನವದಗಿ, ಖಿಂಡಿ ಥಾಂಡಾ, ಕರೆಕಲ್ ಥಾಂಡಾ, ನಾಮುನಾಯಕ ಥಾಂಡಾ, ಲಕ್ಷ್ಮಣ ಥಾಂಡಾದ ಮುಖಂಡರು ವಿವಿಧ ಪಕ್ಷ ತೋರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್ ಹಿರಿಯ ಮುಖಂಡ,ಭೀಮರಾವ ಟಿಟಿ, ಬಸಯ್ಯ ಗಾರಂಪಳಿ, ಬ್ಲಾಕ ಕಾಂಗ್ರೆಸ್ ದೇವಿಂದ್ರಪ್ಪ ಹೆಬ್ಬಾಳ,ಯುವ ಕಾಂಗ್ರೆಸ್ ಅಧ್ಯಕ್ಷ ಶರಣು ಮಜ್ಜಿಗಿ,ರಾಘವೇಂದ್ರ ಗುತ್ತೇದಾರ, ಬಸವರಾಜ ಪಾಟೀಲ ಹೊಸಳ್ಳಿ, ಮಹಮೂದ ಪಟೇಲ ಸಾಸರಗಾವ, ಅನೀಲ ಜಮಾದರ, ಗಣಪತಿ ಹಾಳಕಾಯಿ, ಗಂಗಾರಾಮ ಧಳಪತಿ, ಮಲ್ಲಪ್ಪ ದಿಗ್ಗಾವ, ಮಡಿವಾಳ ಕೊಡದೂರ, ಪ್ರದೀಪ್ ಡೊಣ್ಣೂರ ಶಂಕರ ಹೇರೂರ, ರೇವಣಸಿದ್ದ ಮಳಗಿ, ಅವಿನಾಶ್ ಕೋಡದೂರ ಸೇರಿದಂತೆ ಇತರರಿದ್ದರು.