ಕನ್ನಡಪ್ರಭ ವಾರ್ತೆ ಕೋಟ
ಅವರು ಡಾ.ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯಿತಿ, ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ, ಉಸಿರು ಕೋಟ, ಅರಿವು - ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕೋಟತಟ್ಟು ಆಶ್ರಯದಲ್ಲಿ ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಮತ್ಸ್ಯೋದ್ಯಮಿ ದಿ. ಕೆ.ಸಿ. ಕುಂದರ್ ಸ್ಮರಣಾರ್ಥವಾಗಿ ೨೪ನೇ ವರ್ಷದ ಬೇಸಿಗೆ ಶಿಬಿರ ವಿಕಸನ-೨೦೨೪ನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಮಾತನಾಡಿ, ಮಕ್ಕಳು ಭವ್ಯ ಭಾರತದ ಅಡಿಪಾಯಗಳು. ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಸರಿಯಾದ ದಾರಿಯಲ್ಲಿ ಮುನ್ನೆಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ವೇದಿಕೆಯಲ್ಲಿ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲಾ ಸೋಮಶೇಖರ್, ಕೋಟತಟ್ಟು ಗ್ರಾ.ಪಂ. ಪಿ.ಡಿ.ಒ. ರವೀಂದ್ರ ರಾವ್, ಕಾರಂತ ಪ್ರತಿಷ್ಠಾನದ ನರೇಂದ್ರ ಕುಮಾರ್, ಸತೀಶ್ ವಡ್ಡರ್ಸೆ, ಪ್ರದೀಪ್ ಬಸ್ರೂರು ಉಪಸ್ಥಿತರಿದ್ದರು.