ಮುಧೋಳ: ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರ 76ನೇ ಜನ್ಮದಿನ ನಿಮಿತ್ತ ಜ.25ರ ಬೆಳಗ್ಗೆ 9ಕ್ಕೆ ನಗರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಮುಧೋಳ-ಜಮಖಂಡಿ ರಸ್ತೆಯ ಮಾಲಾಪುರದ ಗೋ ಶಾಲೆಯಲ್ಲಿ ಗೋವುಗಳಿಗೆ ಪೂಜೆ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ, ಬಿಜೆಪಿ ಕಾರ್ಯಕರ್ತರಿಂದ ರಕ್ತದಾನ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 25ರಂದು ಬೆಳಗ್ಗೆ 10.30ಕ್ಕೆ ಮುಧೋಳ-ಕಾತರಕಿ ರಸ್ತೆಯ ಬಸವೇಶ್ವರ ಕಲ್ಯಾಣ ಮಂಟಪದ ಸಭಾಭವನದಲ್ಲಿ ಹುಟ್ಟುಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಹಿರಿಯರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಬಿಜೆಪಿ ಗ್ರಾಮೀಣ ಮತ್ತು ನಗರ ಮಂಡಲದ ಅಧ್ಯಕ್ಷದ ಸಂಗಣ್ಣ ಕಾತರಕಿ ಮತ್ತು ಕೆ.ಎಸ್. ಹಿರೇಮಠ, ಬಿಜೆಪಿ ಹಿರಿಯ ಮುಖಂಡ ಕೆ.ಆರ್. ಮಾಚಪ್ಪನವರ, ಹನುಮಂತ ತುಳಸಿಗೇರಿ, ಸದಪ್ಪ ತೇಲಿ, ಶ್ರೀಕಾಂತ ಗುಜ್ಜನವರ, ಬಸವರಾಜ ಮಳಲಿ ತಿಳಿಸಿದ್ದಾರೆ.