ಕನ್ನಡಪ್ರಭ ವಾರ್ತೆ ಭದ್ರಾವತಿ
ವಿಐಎಲ್ಎಲ್ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆದು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸುವುದು. ಕಾರ್ಖಾನೆ ವಸತಿಗೃಹಗಳನ್ನು ಪುನಃ ದೀರ್ಘಾವಧಿ ಬಾಡಿಗೆ ಆಧಾರದಲ್ಲಿ ನೀಡುವುದು. 1989 ರಿಂದ 1998ರ ನಡುವೆ ನಿವೃತ್ತಿ ಹೊಂದಿರುವ ಕಾರ್ಮಿಕರಿಗೂ ವೈದ್ಯಕೀಯ ಭತ್ಯೆ ಯೋಜನೆ ಜಾರಿಗೊಳಿಸುವುದು ಸೇರಿ ಇತ್ಯಾದಿ ಬೇಡಿಕೆ ಈಡೇರಿಸುವಂತೆ ಸಂಸದರಿಗೆ ಈ ಸಂದರ್ಭದಲ್ಲಿ ಒತ್ತಾಯಿಸಿ ನಿವೃತ್ತ ಕಾರ್ಮಿಕರು ಮನವಿ ಸಲ್ಲಿಸಿದರು.
ಕಲ್ಯಾಣ ಕೇಂದ್ರ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ, ಪ್ರಮುಖರಾದ ಅಡವೀಶಯ್ಯ, ಮಂಜುನಾಥ್, ಹನುಮಂತ ರಾವ್, ನರಸಿಂಹಾಚಾರ್ ಬಸವರಾಜ್, ಶಂಕರ್, ಗಜೇಂದ್ರ ರಾಮಪ್ಪ ಸೇರಿ ಇನ್ನಿತರರಿದ್ದರು.ಅಧಿಕಾರಿಗಳೊಂದಿಗೆ ಚರ್ಚೆ:
ಕಾರ್ಖಾನೆ ಅಭಿವೃದ್ಧಿಪಡಿಸುವ ಸಂಬಂಧ ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರು ಮತ್ತು ಉಕ್ಕು ಪ್ರಾಧಿಕಾರದ ಜೊತೆ ನಿರಂತರವಾಗಿ ಸಹಕರಿಸುವಂತೆ ಮನವಿ ಮಾಡಿದರು. ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ರಾಕೇಶ್, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ, ಅಡವಿಶಯ್ಯ, ಜಿ. ಧರ್ಮಪ್ರಸಾದ್, ಎಸ್.ಎಸ್ ಜ್ಯೋತಿ ಪ್ರಕಾಶ್ ಸೇರಿ ಇತರರಿದ್ದರು.