ಉಚಿತ ದಂತ ಚಿಕಿತ್ಸಾ, ರಕ್ತಗುಂಪು ಗುರುತು ಪತ್ತೆ ಹಚ್ಚುವ ಶಿಬಿರ ಉದ್ಘಾಟಿಸಿ ಅಭಿಪ್ರಾಯ
ಪಾಂಡವಪುರ: ದೇಶದ ಪ್ರತಿಯೊಬ್ಬ ನಾಗರೀಕರು ತಾನು ಹುಟ್ಟಿ ಬೆಳೆದ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದಾಗ ಮಾತ್ರ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಲ.ಕೆ. ದೇವೇಗೌಡ ಹೇಳಿದರು.ತಾಲೂಕಿನ ಟಿ.ಎಸ್.ಛತ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್, ಫ್ರೆಂಚ್‌ರಾಕ್ಸ್ ಲಯನ್ಸ್ ಕ್ಲಬ್ ಆಫ್ ಪಾಂಡವಪುರ ಸಹಯೋಗದಲ್ಲಿ ನಡೆದ ಉಚಿತ ದಂತ ಚಿಕಿತ್ಸಾ ಹಾಗೂ ರಕ್ತಗುಂಪು ಗುರುತು ಪತ್ತೆ ಹಚ್ಚುವುದು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ನಾನು ಹುಟ್ಟಿ ಬೆಳೆದ ಗ್ರಾಮ ಹಾಗೂ ತಾಲೂಕಿಗೆ ಏನಾದರೂ ಸೇವೆ ಮಾಡಬೇಕು ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿದ್ದೇನೆ. ಸರಕಾರಿ ಶಾಲೆಗಳ ಅಭಿವೃದ್ಧಿ ಜೊತೆಗೆ 50ಕ್ಕೂ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನೀಡಿದ್ದೇನೆ ಎಂದರು.
ಶಾಲೆಗಳ ಶಿಕ್ಷಕರು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಕೆಟ್ಟಾಗ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ದುರಸ್ತಿಪಡಿಸಿಕೊಂಡು ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು..ನೇಗಿಲಯೋಗಿ ಟ್ರಸ್ಟ್ ಆಯೋಜಿಸಿರುವ ಉಚಿತ ದಂತ ಚಿಕಿತ್ಸೆ ಹಾಗೂ ರಕ್ತದ ಗುಂಪು ಗುರುತಿಸುವ ಶಿಬಿರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಶಾಲೆ ಅಭಿವೃದ್ಧಿಗೆ ಮುಖಂಡರಾದ ಇ.ಎಸ್.ನಾಗರಾಜು ಹಾಗೂ ಸೀತಾರಾಮಯ್ಯ ಅವರ ಪುತ್ರ ರಾಧಾಕೃಷ್ಣ ಅವರು ತಲಾ 50 ಸಾವಿರ ಹಣವನ್ನು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಮುಖ್ಯಶಿಕ್ಷಕರಿಗೆ ನೀಡಿದರು.ಈ ವೇಳೆ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ರಾಜ್ಯಾಧ್ಯಕ್ಷ ರವಿಕುಮಾರ್, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷ ಬಿ.ಎಸ್.ಜಯರಾಮು, ಎಸ್‌ಡಿಎಂಸಿ ಅಧ್ಯಕ್ಷ ಲಿಂಗರಾಜು, ಮುಖ್ಯಶಿಕ್ಷಕ ನಂದೀಶ್, ಇ.ಎಸ್.ನಾಗರಾಜು, ಡಾ.ವಿಜಿಕುಮಾರ್, ಮಧು ಫೆಥಾಲಜಿ, ಮಂಜುನಾಥ್, ಉಮಾದೇವೇಗೌಡ, ಕೋ.ಪು.ಗುಣಶೇಖರ, ಕೆ.ಕುಬೇರ, ಸಿ.ಆರ್.ರಮೇಶ್, ಚಂದ್ರಶೇಖರಯ್ಯ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.
---------------15ಕೆಎಂಎನ್ ಡಿ20
ಪಾಂಡವಪುರ ತಾಲೂಕಿನ ಟಿ.ಎಸ್.ಛತ್ರ ಗ್ರಾಮದಲ್ಲಿ ನಡೆದ ಉಚಿತವಾಗಿ ದಂತ ಚಿಕಿತ್ಸೆ ಹಾಗೂ ರಕ್ತದ ಗುಂಪು ಗುರುತಿಸುವ ಕಾರ್‍ಯಕ್ರಮವನ್ನು ಲಯನ್ ಕೆ.ದೇವೇಗೌಡ ಉದ್ಘಾಟಿಸಿದರು.