ಕನ್ನಡಪ್ರಭ ವಾರ್ತೆ ಕೊಪ್ಪಳ
ನಾನು ಬಿಜೆಪಿಯಲ್ಲಿಯೇ ಇರುತ್ತೇನೆ, ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಕರಡಿ ಹೇಳಿದ ಮೇಲೆಯೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವ ಅವರ ಬೆಂಬಲಿಗರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.
ನಗರದ ವೈಜನಾಥ ದಿವಟರ ಅವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಬರೋಬ್ಬರಿ ನೂರಕ್ಕೂ ಹೆಚ್ಚು ಬಿಜೆಪಿ ಮುಖಂಡರು ಶಾಸಕ ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.ಸಂಗಣ್ಣರೊಂದಿಗೆ ಸುಮಾರು 15-20 ವರ್ಷಗಳಿಂದ ಜೊತೆಯಲ್ಲಿಯೇ ಇದ್ದ ವೀರಣ್ಣ ಗಾಣಿಗೇರ, ವೈಜನಾಥ ದಿವಟರ ಹಾಗೂ ಅಂದಪ್ಪ ಬೆಣಕಲ್ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಜುಲ್ಲು ಖಾದ್ರಿ, ಎಸ್.ಬಿ. ನಾಗರಳ್ಳಿ, ಪ್ರಸನ್ ಗಡಾದ, ಕೃಷ್ಣಾರಡ್ಡಿ ಗಲಬಿ ಸೇರಿದಂತೆ ಅನೇಕರು ಇದ್ದರು.
ಹುಲಗಿ ಗ್ರಾಮದಲ್ಲಿ ಬಿಜೆಪಿ ತೊರೆದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಭಿವೃದ್ಧಿ ಕಾರ್ಯ ಹಾಗೂ ಕಾಂಗ್ರೆಸ್ ತತ್ವ ಮೆಚ್ಚಿ ಅನೇಕ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ, ಲೋಕಸಭಾ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಎಸ್.ಬಿ. ನಾಗರಳ್ಳಿ, ಪ್ರಸನ್ನ ಗಡದ, ಜನಾರ್ದನ, ಹುಲಗಿ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ ಪಾಷ ಪಲ್ಟನ್, ಬಾಷುಸಾಬ ಖತ್ತಿಬ, ಅಮರೇಶ ಉಪಲಾಪುರ, ಬಾಲಚಂದ್ರನ್ ಕಾಟನ್ ಪಾಷ, ತೋಟಪ್ಪ ಕಾಮನೂರು, ಈರಣ್ಣ ಹುಲಗಿ, ತಾಲೂಕು ಕೆಡಿಪಿ ಸದಸ್ಯ ನಾಗರತ್ನ ಪೂಜಾರ, ಜ್ಯೋತಿ ಗೊಂಡಬಾಳ, ಸುಮಾ ನಾಯಕ, ವಿಜಯಕುಮಾರ ಹುಲಗಿ, ಅಶೋಕ ಈಳಗೇರ, ಶರಣಪ್ಪ ಸಜ್ಜನ, ಶಿವಕುಮಾರ ಪೌಲಿ ಶೆಟ್ರ, ವೈಜುನಾಥ ದಿವಟರ, ಈರಣ್ಣ ಗಾಣಿಗೇರ, ಅಂದಪ್ಪ ಬಣಕಾರ ಇನ್ನೂ ಅನೇಕ ಮುಖಂಡರು ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.