ರೈತರ ಮಕ್ಕಳು ಮೇಲೆ ಬರಬೇಕು ಎಂದ ಸಂಸದ ಶ್ರೇಯಸ್‌

KannadaprabhaNewsNetwork |  
Published : Jun 08, 2026, 01:45 AM IST
7ಎಚ್ಎಸ್ಎನ್11 : ಹೊಳೆನರಸೀಪುರದ ಶಿಕ್ಷಕರ ಭವನದಲ್ಲಿ ತಾ. ಒಕ್ಕಲಿಗ ನೌಕರರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಜವರೇಗೌಡ, ಮಹೇಶ್, ಸಪ್ನ ಇದ್ದರು. | Kannada Prabha

ಸಾರಾಂಶ

ಮಕ್ಕಳು ಉನ್ನತ ವ್ಯಾಸಂಗ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ರೈತರು ತಮ್ಮಗಳ ಶ್ರಮದ ಜೀವನದಲ್ಲಿ ಮಕ್ಕಳನ್ನು ಚೆನ್ನಾಗಿ ಓದಿಸಿ ಅಧಿಕಾರಗಳನ್ನಾಗಿ ಮಾಡಲು ನೀಡುತ್ತಿರುವ ಪ್ರೋತ್ಸಾಹ ಅಭಿನಂದನೀಯ ಮತ್ತು ಎಲ್ಲಾ ರೈತರು ಮಕ್ಕಳ ಉನ್ನತ ವ್ಯಾಸಂಗಕ್ಕೆ ಉತ್ತೇಜನ ನೀಡಬೇಕಿದೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಸಲಹೆ ನೀಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ವಿದ್ಯಾರ್ಥಿಗಳಿಗೆ ೨೦೦೦ ನಗದು ಬಹುಮಾನ ನೀಡಿ ಸನ್ಮಾನಿಸಿದರು. ಐದು ಜನ ಪ್ರಗತಿಪರ ರೈತರು, ಇಬ್ಬರು ಅಂಗವಿಕಲರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಇತ್ತೀಚಿನ ವರ್ಷಗಳಲ್ಲಿ ಒಕ್ಕಲಿಗರ ಮಕ್ಕಳು ಉನ್ನತ ವ್ಯಾಸಂಗ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ರೈತರು ತಮ್ಮಗಳ ಶ್ರಮದ ಜೀವನದಲ್ಲಿ ಮಕ್ಕಳನ್ನು ಚೆನ್ನಾಗಿ ಓದಿಸಿ ಅಧಿಕಾರಗಳನ್ನಾಗಿ ಮಾಡಲು ನೀಡುತ್ತಿರುವ ಪ್ರೋತ್ಸಾಹ ಅಭಿನಂದನೀಯ ಮತ್ತು ಎಲ್ಲಾ ರೈತರು ಮಕ್ಕಳ ಉನ್ನತ ವ್ಯಾಸಂಗಕ್ಕೆ ಉತ್ತೇಜನ ನೀಡಬೇಕಿದೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಸಲಹೆ ನೀಡಿದರು. ಪಟ್ಟಣದ ಶಿಕ್ಷಕರ ಭವನದಲ್ಲಿ ತಾ. ಒಕ್ಕಲಿಗ ನೌಕರರ ಸಂಘ ಶನಿವಾರ ಸಂಜೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಳುಮೆ ಮಾಡುವವರೆಲ್ಲರೂ ಒಕ್ಕಲಿಗರು ಜತೆಗೆ ಪ್ರಪಂಚಕ್ಕೆ ಅನ್ನ ನೀಡುವ ಅನ್ನದಾತ ರೈತರನ್ನು ನಾವೆಲ್ಲ ಗೌರವವಾಗಿ ನಡೆಸಿಕೊಳ್ಳಬೇಕು ಎಂದರು. ತಾಲೂಕು ಒಕ್ಕಲಿಗರ ನೌಕರರ ಸಂಘ ಒಕ್ಕಲಿಗರ ಪ್ರತಿಭಾವಂತ ಮಕ್ಕಳನ್ನು ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ತಿಳಿಸಿ, ಪ್ರಶಂಸಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸ್ವಪ್ನ ಮಾತನಾಡಿ ವಿದ್ಯೆ ಮತ್ತು ಜ್ಞಾನದಿಂದ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ. ಆದ್ದರಿಂದ ಚೆನ್ನಾಗಿ ವ್ಯಾಸಂಗ ಮಾಡುವ ಮೂಲಕ ನಿಮ್ಮ ಗುರಿ ತಲುಪುವ ಕನಸನ್ನು ನನಸು ಮಾಡಿಕೊಳ್ಳಲು ಶಿಕ್ಷಕರ ಸಲಹೆ ಹಾಗೂ ಮಾರ್ಗದರ್ಶನದಲ್ಲಿ ಚಿನ್ನಾಗಿ ಅಭ್ಯಾಸ ಮಾಡಿ ಎಂದು ಸಲಹೆ ನೀಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ವಿದ್ಯಾರ್ಥಿಗಳಿಗೆ ೨೦೦೦ ನಗದು ಬಹುಮಾನ ನೀಡಿ ಸನ್ಮಾನಿಸಿದರು. ಐದು ಜನ ಪ್ರಗತಿಪರ ರೈತರು, ಇಬ್ಬರು ಅಂಗವಿಕಲರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.ತಾಲೂಕು ಒಕ್ಕಲಿಗ ನೌಕರರ ಸಂಘ ಕಾರ್ಯದರ್ಶಿ ಜವರೇಗೌಡ ಸ್ವಾಗತಿಸಿದರು ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಂಕವಳ್ಳಿ ರಮೇಶ್ ಪ್ರಾಸ್ತಾವಿಕ ನುಡಿಗಳ್ನಾಡಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೃಥ್ವಿರಾಜ್, ಅಂಕವಳ್ಳಿ ಕಾಳೇಗೌಡ, ಹುಚ್ಚೇಗೌಡ, ಮಂಜೇಗೌಡ, ಮಂಜುನಾಥ್, ನೀರಾವರಿ ಇಲಾಖೆಯ ಎಇಇ ಮಹೇಶ, ಕೆಇಬಿ ವಿಜಯ್ ಕುಮಾರ್‌, ಕೆ. ಟಿ. ರವಿ, ಇತರರು ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲ್ವಳ್ಳಿ ಭಾಗದ ಕೆರೆಗಳ ನೀರಿಗಾಗಿ ಬೃಹತ್ ಸಮಾವೇಶ
ರಸ್ತೆ ಅಭಿವೃದ್ಧಿ, ಒಳಚರಂಡಿ ಕಾಮಗಾರಿ ಪರಿಶೀಲಿಸಿದ ಶಾಸಕ ಕೆ.ಎಂ.ಉದಯ್