ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೌಡಿಶೀಟರ್ ಮದ್ಯ ಪಾರ್ಟಿ ಮಾಡಿರುವುದು ಅರಣ್ಯ ಇಲಾಖೆ ತಲೆ ತಗ್ಗಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಕಳವಳ ವ್ಯಕ್ತಪಡಿಸಿದರು.
- ಅಧಿಕಾರಿಗಳ ವರ್ಗಾಯಿಸಿದರೆ ಭ್ರಷ್ಟಾಚಾರ ಕಡಿಮೆ ಸಾಧ್ಯ: ಶಿವಪುರ ಮಹದೇವಪ್ಪ । ಕ್ರಮಕ್ಕೆ ಆಗ್ರಹ
---
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೌಡಿಶೀಟರ್ ಮದ್ಯ ಪಾರ್ಟಿ ಮಾಡಿರುವುದು ಅರಣ್ಯ ಇಲಾಖೆ ತಲೆ ತಗ್ಗಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಕಳವಳ ವ್ಯಕ್ತಪಡಿಸಿದರು.
ಅರಣ್ಯಾಧಿಕಾರಿಗಳ ಸಹಕಾರವಿಲ್ಲದೇ ರೌಡಿಶೀಟರ್ ಮದ್ದೂರು ವಲಯದೊಳಗೆ ಹೋಗಿ ಮದ್ಯ ಸೇವಿಸಲು ಸಾಧ್ಯವಿಲ್ಲ. ಹೀಗಾಗ ಕ್ರಮ ಕೈಗೊಳ್ಳಬೇಕೆಂದು. ಅಧಿಕಾರಿಗಳ ಮೇಲೆಯೂ ಕ್ರಮವಾಗದಿದ್ದರೆ ರೈತ ಸಂಘ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು. ಜೊತೆಗೆ ಚೆಕ್‌ಪೋಸ್ಟ್ ಹಾಗೂ ಸಫಾರಿ ಕೇಂದ್ರಗಳಲ್ಲಿರುವ ಸಿಬ್ಬಂದಿಯನ್ನು ವರ್ಗಾಯಿಸಿದರೆ ಮಾತ್ರ ಭ್ರಷ್ಟಾಚಾರ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಬಾಕ್ಸ್,,,)))‘ಫ್ರೆಂಡ್ಸ್ ಆಫ್ ಬಂಡೀಪುರʼಕ್ಕೆ ವಿರೋಧ:
ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರಿಂದ ಹಣ ಪಡೆದು ‘ಫ್ರೆಂಡ್ಸ್ ಆಫ್ ಬಂಡೀಪುರ’ ಹೆಸರಿನಲ್ಲಿ ಕಾಡು ತೋರಿಸುವ ಕೆಲಸವಾಗುತ್ತಿದೆ. ನೂತನ ಡಿಸಿಎಫ್ ಇದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ಇದರ ಬದಲಿಗೆ ಕಾಡಂಚಿನ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ವಹಿಸಬೇಕೆಂದು ತಾಕೀತು ಮಾಡಿದ್ದಾರೆ.
ಇಂದು ಆರ್‌ಎಫ್‌ಒ ಸಸ್ಪೆಂಡ್?
ರೌಡಿಶೀಟರ್ ಪಾರ್ಟಿ ಸಂಬಂಧ ಮದ್ದೂರು ವಲಯ ಅರಣ್ಯಾಧಿಕಾರಿ ಪುನೀತ್ ಕುಮಾರ್ ಸೋಮವಾರ ಅಮಾನತಾಗುವ ಸಾಧ್ಯತೆಯಿದೆ. ಕಳ್ಳಬೇಟೆ ತಡೆ ಶಿಬಿರದ ಬಳಿ ಪಾರ್ಟಿಗೆ ಪುನೀತ್ ಅವರ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಮೇಲ್ನೋಟಕ್ಕೆ ಕಾರಣವೆಂದು ಎಸಿಎಫ್ ಕೆ. ಸುರೇಶ್ ಅವರು ಡಿಸಿಎಫ್ ಎಲ್. ನಂದೀಶ್ ಅವರಿಗೆ ವರದಿ ಕೊಟ್ಟಿರುವುದರಿಂದ ಅವರು ಪಿಸಿಸಿಎಫ್ ಅವರಿಗೆ ಶಿಫಾರಸು ಮಾಡಿದ್ದಾರೆ. ಹೀಗಾಗಿ ಸೋಮವಾರ ಕ್ರಮವಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.