ದರ್ಶನದ ವ್ಯವಸ್ಥೆಗೆ ಸಂಸದ ಸುನೀಲ್ ಬೋಸ್ ಮೆಚ್ಚುಗೆ

KannadaprabhaNewsNetwork |  
Published : Oct 12, 2025, 01:00 AM IST
11ಎಚ್ಎಸ್ಎನ್9 :  | Kannada Prabha

ಸಾರಾಂಶ

ಸಂಸದ ಸುನೀಲ್ ಬೋಸ್ ಅವರು ಕುಟುಂಬ ಸಮೇತರಾಗಿ ದೇವಿಯ ದರ್ಶನ ಪಡೆದರು. ದೇವಾಲಯದ ಒಳಗೆ ಮತ್ತು ಹೊರಗಿನ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳ ಅಚ್ಚುಕಟ್ಟಾದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಕ್ತರು ಯಾವುದೇ ತೊಂದರೆ ಇಲ್ಲದೆ, ಸುಗಮವಾಗಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ದೇವಾಲಯದ ಆಡಳಿತ ಮಂಡಳಿಯ ಶ್ರಮ ಪ್ರಶಂಸನೀಯ ಎಂದರು. ಹಾಸನಾಂಬೆ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭಕ್ತರ ಭಕ್ತಿ ಪರವಶದ ವಾತಾವರಣ ನಿರ್ಮಾಣವಾಗಿದ್ದು, ಸಾವಿರಾರು ಮಂದಿ ದಿನವೂ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಸಂಸದರು ದೇವಾಲಯದ ಒಳಭಾಗದಲ್ಲಿ ದೇವಿಯ ಪಾದಪೂಜೆ ಸಲ್ಲಿಸಿ, ತಮ್ಮ ಕುಟುಂಬದವರೊಂದಿಗೆ ವಿಶೇಷ ಪೂಜೆ ನೆರವೇರಿಸಿದರು.

ಹಾಸನ: ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬೆ ದೇವಾಲಯದಲ್ಲಿ ಶನಿವಾರ ಸಂಸದ ಸುನೀಲ್ ಬೋಸ್ ಅವರು ಕುಟುಂಬ ಸಮೇತರಾಗಿ ದೇವಿಯ ದರ್ಶನ ಪಡೆದರು. ದೇವಾಲಯದ ಒಳಗೆ ಮತ್ತು ಹೊರಗಿನ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳ ಅಚ್ಚುಕಟ್ಟಾದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದರ್ಶನದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶ್ರೀ ಹಾಸನಾಂಬೆ ದೇವಾಲಯವು ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಬಾಗಿಲು ತೆರೆಯುವ ದೇವಾಲಯವಾಗಿದ್ದು, ಈ ಬಾರಿ ದೇವಿಯ ದರ್ಶನದ ವ್ಯವಸ್ಥೆಯನ್ನು ಅತ್ಯಂತ ಶ್ಲಾಘನೀಯ ರೀತಿಯಲ್ಲಿ ಮಾಡಲಾಗಿದೆ. ಭಕ್ತರು ಯಾವುದೇ ತೊಂದರೆ ಇಲ್ಲದೆ, ಸುಗಮವಾಗಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ದೇವಾಲಯದ ಆಡಳಿತ ಮಂಡಳಿಯ ಶ್ರಮ ಪ್ರಶಂಸನೀಯ ಎಂದರು. ಹಾಸನಾಂಬೆ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭಕ್ತರ ಭಕ್ತಿ ಪರವಶದ ವಾತಾವರಣ ನಿರ್ಮಾಣವಾಗಿದ್ದು, ಸಾವಿರಾರು ಮಂದಿ ದಿನವೂ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಸಂಸದರು ದೇವಾಲಯದ ಒಳಭಾಗದಲ್ಲಿ ದೇವಿಯ ಪಾದಪೂಜೆ ಸಲ್ಲಿಸಿ, ತಮ್ಮ ಕುಟುಂಬದವರೊಂದಿಗೆ ವಿಶೇಷ ಪೂಜೆ ನೆರವೇರಿಸಿದರು.

ಹಾಸನಾಂಬೆ ದೇವಿಯ ಕೃಪೆಯಿಂದ ಹಾಸನ ಜಿಲ್ಲೆಯ ಜನತೆಗೆ ಶಾಂತಿ, ಸಂತೋಷ ಮತ್ತು ಸಮೃದ್ಧಿ ಲಭಿಸಲಿ ಎಂದು ಹಾರೈಸುತ್ತೇನೆ. ಈ ಬಾರಿ ದೇವಾಲಯದ ವ್ಯವಸ್ಥೆ ಹಿಂದೆಂದಿಗಿಂತ ಉತ್ತಮವಾಗಿದೆ. ದೇವಾಲಯದಲ್ಲಿ ಸ್ವಚ್ಛತೆ, ನಿಯಂತ್ರಿತ ಸಾಲು, ಮಹಿಳೆಯರು ಮತ್ತು ವೃದ್ಧರಿಗೆ ನೀಡಿರುವ ಪ್ರತ್ಯೇಕ ವ್ಯವಸ್ಥೆ ಭಕ್ತರ ತೃಪ್ತಿಗೆ ಕಾರಣವಾಗಿದೆ ಎಂದು ಹೇಳಿದರು. ಅವರು ದೇವಾಲಯದ ಹೊರ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರು, ಸ್ವಯಂಸೇವಕರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ಅಭಿನಂದಿಸಿ, ಅವರ ಕಾರ್ಯಪದ್ಧತಿ ಜನರಿಗೆ ಭರವಸೆ ನೀಡುತ್ತಿದೆ ಎಂದು ಶ್ಲಾಘಿಸಿದರು.

ಈ ರೀತಿಯ ಉತ್ತಮ ವ್ಯವಸ್ಥೆ ಮುಂದಿನ ವರ್ಷಗಳಲ್ಲಿಯೂ ಮುಂದುವರಿಯಬೇಕು. ಹಾಸನಾಂಬೆಯ ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತನಿಗೂ ಸಂತೋಷ ಹಾಗೂ ಭಕ್ತಿಭಾವದಿಂದ ದೇವಿಯ ಅನುಗ್ರಹ ದೊರಕಲಿ ಎಂದು ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು
ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ