ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಉಡಾನ್ ಯೋಜನೆಯಲ್ಲಿ ಇನ್ನೂ ಒಂದೂವರೆ ವರ್ಷ ಅವಧಿ ಬಾಕಿ ಇತ್ತು. ಪ್ಲಾನ್ ಸ್ಕೀಮ್‌ನಲ್ಲಿ ಇದ್ದರೂ ಸ್ಕೈಪ್ ಚೇಂಜ್ ಮಾಡುವ ಅಗತ್ಯವೇನಿತ್ತು? ಇದರ ಬಗ್ಗೆ ಸಂಸದರು ಎಂದಾದರೂ ಮಾಧ್ಯಮಗಳಿಗೆ ಸ್ಪಷ್ಟ ಮಾಹಿತಿ ನೀಡಿದ್ದಾರಾ ಎಂದು ಪ್ರಶ್ನಿಸಿದರು.
ಸಂಸದರು ಕೇವಲ ಕಾಂಗ್ರೆಸ್ ಸರ್ಕಾರವನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದು, ವಿಮಾನ ಸಂಚಾರ ಪುನಾರಂಭಕ್ಕೆ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇಂಡಿಗೋ ಸಂಸ್ಥೆಯಲ್ಲಿ ಪೈಲಟ್ ಕೊರತೆ, ಫೈಯಿಂಗ್ ಅವರ್ಸ್ ಬಿಕ್ಕಟ್ಟು ಇದೆ. ಪೈಲಟ್‌ಗಳನ್ನು ನೇಮಕ ಮಾಡಿಕೊಳ್ಳಲು, ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಈ ವಿಚಾರವಾಗಿ ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರೊಂದಿಗೆ ಸಂಸದರು ಎಂದಾದರೂ ಚರ್ಚೆ ಮಾಡಿದ್ದಾರಾ? ಶಿವಮೊಗ್ಗದಲ್ಲಿ ಆಗಿರುವ ತೊಂದರೆ ಬಗ್ಗೆ ಹೇಳಿದ್ದಾರಾ? ಎಂದು ಟೀಕಿಸಿದರು.ಉಡಾನ್ ಯೋಜನೆಯಡಿ ಕೇಂದ್ರ ಸರ್ಕಾರ ಶೇ.80ರಷ್ಟು, ರಾಜ್ಯ ಸರ್ಕಾರ ಶೇ.20ರಷ್ಟು ವೆಚ್ಚ ಭರಿಸುತ್ತದೆ. ಸ್ಪೈಸ್‌ಜೆಟ್ ಒಂದು ವರ್ಷ ಉಡಾನ್ ಸ್ಕೀಮ್‌ನಲ್ಲಿ ಇದ್ದರೂ ಈ ಹಂಚಿಕೆ ಸರಿಯಾಗಿ ಆಗಿಲ್ಲ. ಇದಕ್ಕೆ ಉತ್ತರ ಯಾರು ನೀಡಬೇಕು ಎಂದು ಯೋಗೀಶ್ ಆಗ್ರಹಿಸಿದರು.
ಬೆಂಗಳೂರು-ಶಿವಮೊಗ್ಗ ವಿಮಾನಯಾನ ಅತ್ಯಂತ ಮುಖ್ಯವಾದದ್ದು. ಇದನ್ನು ಮತ್ತೆ ಸಕ್ರಿಯಗೊಳಿಸಲು ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ನಾವೆಲ್ಲರೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ಶಿವಮೊಗ್ಗ ಜನತೆಯ ಪರವಾಗಿ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಸ್. ಟಿ. ಹಾಲಪ್ಪ, ಮುಖಂಡರಾದ ಪಿ .ಒ. ಶಿವಕುಮಾರ್. ಮಾಜಿ ಕಾರ್ಪೋರೇಟರ್ ಕಾಶಿ ವಿಶ್ವನಾಥ್, ಬಸವ ಕಲ್ಯಾಣ ಅಭಿವೃದ್ಧಿ ಸಮಿತಿ ನಿರ್ದೇಶಕ ಎಚ್. ಪಿ. ಗಿರೀಶ್ ಉಪಸ್ಥಿತರಿದ್ದರು.
ಪೋಟೋ: 13ಎಸ್ಎಂಜಿಕೆಪಿ03