ವಿಜಯಪುರ: ಇಂದಿರಾ ಕ್ಯಾಂಟಿನ್ ನಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದರ ಜೊತೆಗೆ, ಗುಣಮಟ್ಟದ ಆಹಾರ ತಯಾರಿಕೆಗೆ ಹೆಚ್ಚು ಆಧ್ಯತೆ ನೀಡುವಂತೆ ತಹಸೀಲ್ದಾರ್ ಎಂ.ಅನಿಲ್ ಸೂಚಿಸಿದರು.
ಪ್ರತಿನಿತ್ಯ ಬೆಳಗಿನ ತಿಂಡಿ ಎಷ್ಟು ಮಂದಿ, ಮಧ್ಯಾಹ್ನ ಎಷ್ಟು ಮಂದಿಗೆ ಆಹಾರ ತಯಾರಿಸಲಾಗುತ್ತಿದೆ, ಮೆನುವಿನಲ್ಲಿ ಏನೇನಿದೆ ಎಂದು ಮಾಹಿತಿ ಪಡೆದುಕೊಂಡರು.
ಇಂದಿರಾ ಕ್ಯಾಂಟೀನ್ ಆವರಣ ಮಣ್ಣಿನಿಂದ ಕೂಡಿದ್ದು, ಮಳೆ ಬಿದ್ದರೆ, ನಾಗರಿಕರು ಒಳಗೆ ಬರುಲಾವಾಗುವುದಿಲ್ಲ. ಆದ್ದರಿಂದ ಆವರಣಕ್ಕೆ ಕಾಂಕ್ರೀಟ್ ಹಾಕಿಸಿಕೊಡಬೇಕು. ವಿಕಲಚೇತನರು, ವೃದ್ಧರು, ಸುಲಭವಾಗಿ ಒಳಗೆ ಬರುವುದಕ್ಕೆ ಅವಕಾಶವಾಗುವಂತೆ ರ್ಯಾಂಪ್ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದರು.ನಗರಾಭಿವೃದ್ಧಿ ಕೋಶದ ಕಾರ್ಯಫಾಲಕ ಅಭಿಯಂತರ ಸ್ವಾಮಿ ಪ್ರತಿಕ್ರಿಯಿಸಿ, ಆವರಣದಲ್ಲಿ ಸಿಮೆಂಟ್ ಕಾಂಕ್ರೀಟ್ ಅಳವಡಿಸಲು ಒಂದು ಕ್ರಿಯಾಯೋಜನೆ ತಯಾರಿಸಿ ಕಳುಹಿಸಿಕೊಡಿ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಅವರಿಗೆ ಸೂಚಿಸಿದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಮುತಾಫೀರ್ ಅಫೀಜ್, ಉಪತಹಶೀಲ್ದಾರ್ ಮೋಹನ್ ಕುಮಾರ್, ರಾಜಸ್ವ ನಿರೀಕ್ಷಕ ಹೊನ್ನೇಶ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಗ್ರಾಮ ಆಡಳಿತಾಧಿಕಾರಿಗಳಾದ ಜೀವನ್ ಕುಮಾರ್, ರವಿಕುಮಾರ್, ಮುನಿರಾಜು, ಇಂಜಿನಿಯರ್ ಶೇಖರ್ ರೆಡ್ಡಿ, ಆರೋಗ್ಯ ನಿರೀಕ್ಷಕಿ ಲಾವಣ್ಯ, ಪೃಥ್ವಿ ಮುಂತಾದವರು ಹಾಜರಿದ್ದರು.