ಮುದರಂಗಡಿ ಶೂಟೌಟ್: ಬೈಕ್‌ ನೀಡಿದ ಆರೋಪಿ ಬಂಧನ

KannadaprabhaNewsNetwork |  
Published : Aug 22, 2026, 02:15 AM IST
21ಲೋಕೇಶ್‌ | Kannada Prabha

ಸಾರಾಂಶ

ಇಲ್ಲಿನ ಮುದರಂಗಡಿಯಲ್ಲಿ ಉದ್ಯಮಿ, ಕಾಂಗ್ರೆಸ್ ನಾಯಕ ಡೇವಿಡ್ ಡಿಸೋಜ ಎಂಬವರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣದ 9ನೇ ಆರೋಪಿಯನ್ನು ಕಾರ್ಕಳ ಮತ್ತು ಪಡುಬಿದ್ರೆ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಕಾಪು: ಇಲ್ಲಿನ ಮುದರಂಗಡಿಯಲ್ಲಿ ಉದ್ಯಮಿ, ಕಾಂಗ್ರೆಸ್ ನಾಯಕ ಡೇವಿಡ್ ಡಿಸೋಜ ಎಂಬವರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣದ 9ನೇ ಆರೋಪಿಯನ್ನು ಕಾರ್ಕಳ ಮತ್ತು ಪಡುಬಿದ್ರೆ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಬೈಂದೂರು ತಾಲೂಕಿನ ಯಡ್ತೆರೆ ಗ್ರಾಮದ ಬಾಳಿಹಿತ್ಲು ನಿವಾಸಿ ಲೋಕೇಶ್ ತೇಜ ಕೊಠಾರಿ (42) ಎಂದು ಗುರುತಿಸಲಾಗಿದೆ. ಡೇವಿಡ್ ಡಿಸೋಜರನ್ನು ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಬಳಸಿದ್ದ ಬೈಕ್‌ನ್ನು ಪೂರೈಕೆ ಮಾಡಿದ ಆರೋಪಿಯಾಗಿದ್ದಾನೆ.

ಈತ ಮೊದಲು ಬಾಂಬೆಯ ಕೆಲಸ ಮಾಡಿಕೊಂಡಿದ್ದು, ಇಲ್ಲಿ ನಡೆದ ಅಪರಾಧಿ ಪ್ರಕರಣವೊಂದರಲ್ಲಿ ಇನ್ನೊಬ್ಬ ಆರೋಪಿ ಕಿಶೋರ್ ರಾಮ ಪೂಜಾರಿ ಸ್ನೇಹಿತನಾಗಿದ್ದ. ಈತನ ಪತ್ತೆಗಾಗಿ ಕಾರ್ಕಳ-ಪಡುಬಿದ್ರೆ ಪೊಲೀಸರ ತಂಡ ರಚಿಸಲಾಗಿದ್ದು, ಆತನನ್ನು ಮನೆಯಲ್ಲೇ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಅಲ್ಲದೆ ಈತ ಪೂರೈಕೆ ಮಾಡಿದ್ದ ಬೈಕ್‌ನ ಇಂಜಿನ್ ಸಂಖ್ಯೆ ಹಾಗೂ ಚಾಸೀಸ್ ಸಂಖ್ಯೆಯನ್ನು ಅಳಿಸಲಾಗಿದ್ದು, ಅದಕ್ಕೆ ಬಳಸಿದ್ದ ಮಿಶಿನ್‌ನ್ನು ಕೂಡ ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಜಿಟಲ್ ಸೇವಾ ಕೇಂದ್ರದಲ್ಲಿ ಘರ್ಷಣೆ: ಇತ್ತಂಡ ದೂರು
ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೇಕು: ಹರಿಶಂಕರ್