ಮುದ್ದಂಡ ಕಪ್ ಹಾಕಿ: ಚಂಗುಲಂಡ, ಕಳ್ಳಿಚಂಡ, ಕಂಬೀರಂಡ ತಂಡಕ್ಕೆ ಗೆಲವು

KannadaprabhaNewsNetwork |  
Published : Apr 17, 2025, 12:06 AM IST
ಚಿತ್ರ: 16ಎಂಡಿಕೆ4 : ಬುಧವಾರ ನಡೆದ ಹಾಕಿ ಪಂದ್ಯ.  | Kannada Prabha

ಸಾರಾಂಶ

ಮಂಡೇಟಿರ ಮತ್ತು ಚಂಗುಲಂಡ ನಡುವಿನ ಪಂದ್ಯದಲ್ಲಿ ಎರಡೂ ತಂಗಳು ನಿಗದಿತ ಅವಧಿಯಲ್ಲಿ ತಲಾ 2 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 5-4 ಗೋಲುಗಳ ಅಂತರದಲ್ಲಿ ಚಂಗುಲಂಡ ತಂಡ ಗೆಲವು ದಾಖಲಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್‌ನ ಬುಧವಾರ ನಡೆದ ಪಂದ್ಯದಲ್ಲಿ ಚಂಗುಲಂಡ, ಕಳ್ಳಿಚಂಡ, ಕಂಬೀರಂಡ ತಂಡಗಳು ಗೆಲವು ಸಾಧಿಸಿವೆ.

ಮಂಡೇಟಿರ ಮತ್ತು ಚಂಗುಲಂಡ ನಡುವಿನ ಪಂದ್ಯದಲ್ಲಿ ಎರಡೂ ತಂಗಳು ನಿಗದಿತ ಅವಧಿಯಲ್ಲಿ ತಲಾ 2 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 5-4 ಗೋಲುಗಳ ಅಂತರದಲ್ಲಿ ಚಂಗುಲಂಡ ತಂಡ ಗೆಲವು ದಾಖಲಿಸಿತು.

ಕಳ್ಳಿಚಂಡ ಮತ್ತು ಮಚ್ಚಾರಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ 1 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಕಳ್ಳಿಚಂಡ ತಂಡ ಜಯ ಸಾಧಿಸಿತು.ಕೊಂಗಂಡ ಮತ್ತು ಕಂಬೀರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕಂಬೀರಂಡ ತಂಡ ಗೆಲುವು ಸಾಧಿಸಿತು. ಕಂಬೀರಂಡ ತಂಡದ ಪರ ಮಯ್ಯುರ್ ಬೋಪಯ್ಯ ಹಾಗೂ ಮೊಣ್ಣಪ್ಪ ತಲಾ 1 ಗೋಲು ದಾಖಲಿಸಿದರು. ಕೊಂಗಂಡ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಬಾಳೆಯಡ ಮತ್ತು ಕೋಣೇರಿರ ತಂಡಗಳ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಕೋಣೇರಿರ ಗೆಲವು ದಾಖಲಿಸಿತು. ಇಟ್ಟಿರ ಮತ್ತು ಕಂಬೆಯಂಡ ನಡುವಿನ ಪಂದ್ಯದಲ್ಲಿ 4-2 ಗೋಲುಗಳ ಅಂತರದಲ್ಲಿ ಇಟ್ಟಿರ ತಂಡ ಜಯ ಸಾಧಿಸಿತು.

ಕಾಂಡಂಡ ಮತ್ತು ನುಚ್ಚಿಮಣಿಯಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಾಂಡಂಡ ಗೆಲುವು ಸಾಧಿಸಿತು. ಕಾಂಡಂಡ ಪರ ಆದಿತ್ಯ ಅಪ್ಪಣ್ಣ 1 ಗೋಲು ದಾಖಲಿಸಿದರು. ನುಚ್ಚಿಮಣಿಯಂಡ ಪೂವಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮಲ್ಲಂಡ ಮತ್ತು ಕುಲ್ಲೇಟಿರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಕುಲ್ಲೇಟಿರ ಜಯ ಸಾಧಿಸಿತು. ಮಾದಂಡ ಮತ್ತು ಮದ್ರೀರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಮಾದಂಡ ತಂಡ ಜಯ ಸಾಧಿಸಿತು. ಪಳಂಗಂಡ ಮತ್ತು ಮೇಚಿಯಂಡ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 5-4 ಗೋಲುಗಳ ಅಂತರದಲ್ಲಿ ಮೇಚಿಯಂಡ ಜಯ ಸಾಧಿಸಿತು.

ಬೊಳ್ಳಂಡ ಮತ್ತು ವಾಟೇರಿರ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಬೊಳ್ಳಂಡ ತಂಡ ಜಯ ಸಾಧಿಸಿತು. ಕೆಚೇಟಿರ (ಕಡಗದಾಳು) ಮತ್ತು ಬೊಟ್ಟೋಳಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಬೊಟ್ಟೋಳಂಡ ಗೆಲುವು ದಾಖಲಿಸಿತು. ಕನ್ನಂಡ ಮತ್ತು ಕೋಡೀರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕನ್ನಡ ತಂಡ ಜಯ ಸಾಧಿಸಿತು. ಕನ್ನಂಡ ತಂಡದ ಪರ ಶರಣ್ ಕಾವೇಪ್ಪ 1 ಗೋಲು ದಾಖಲಿಸಿದರು. ಚೇಂದಂಡ ಮತ್ತು ಬಡುವಮಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೇಂದಂಡ ತಂಡ ಜಯ ಸಾಧಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌