ಎರಡು ಸುತ್ತಿನ ಕೋಟೆ ಗೋಡೆಗೆ ಧಕ್ಕೆ। ಇತಿಹಾಸ ಪ್ರೀಯರ ಆಕ್ರೋಶ
ಕನ್ನಡಪ್ರಭ ವಾರ್ತೆ ಮುದಗಲ್ಐತಿಹಾಸಿಕ ಮುದಗಲ್ ಮೊಹರಂಗೆ ದಿನಗಣನೆ ಆರಂಭವಾಗಿದ್ದು ಈಗಾಗಲೇ ಪುರಸಭೆ ಆಡಳಿತ ಮಂಡಳಿ ಪಟ್ಟಣದ ನಾನಾ ವಾರ್ಡ್‌ಗಳಲ್ಲಿ ಆಲಂಗಳ ಪ್ರತಿಷ್ಠಾಪನೆಗೊಳ್ಳಲಿರುವ ಪ್ರಮುಖ ದರ್ಗಾ ಮತ್ತು ಗೂಡಂಗಡಿಗಳ, ಜೋಕಾಲಿ ಸಾಮಾಗ್ರಿಗಳಿಗೆ ಸ್ಥಳ ನಿಗದಿ ಮಾಡಿ ಅದರ ಸ್ವಚ್ಛತೆ ಕಾರ್ಯಕ್ಕೆ ಮುಂದಾಗಿದೆ. ಪ್ರಾಚ್ಯವಸ್ತು ಇಲಾಖೆ ಅಧೀನದಡಿಯಲ್ಲಿರುವ ಐತಿಹಾಸಿಕ ಎರಡು ಸುತ್ತಿನ ಕೋಟೆ ಕಂದಕದ ಒಳಾಂಗಣದಲ್ಲಿ ಜೋಕಾಲಿ ಮತ್ತು ಆಟೋಟಗಳ ಸಾಮಾಗ್ರಿ ಹಾಕಲು ಪುರಾತತ್ವ ಇಲಾಖೆ ಪರವಾನಗಿ ಮತ್ತು ಪ್ರಾಚ್ಯವಸ್ತು ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿದ ಪುರಸಭೆ ಅನಧೀಕೃತವಾಗಿ ಹರಾಜು ಪ್ರಕ್ರಿಯೆಯಲ್ಲಿ 15 ಲಕ್ಷ ಹಣ ಪಡೆದು ಭೂಬಾಡಿಗೆ ನೀಡಿದ್ದಾರೆ. ಸ್ಥಳ ಸ್ವಚ್ಛತೆ ಮಾಡಿಕೊಡುವ ನೆಲದಲ್ಲಿ ತಮ್ಮ ಸ್ವಾಧೀನದಲ್ಲಿಲ್ಲದ ಜಾಗೆ ಸ್ವಛ್ಛಗೊಳಿಸುವ ನೆಪದಲ್ಲಿ ಕೋಟೆ ಗೋಡೆ ಕುಸಿಯತೊಡಗಿದೆ. ಸ್ವಚ್ಛತೆ ಕಾರ್ಯ ಆರಂಭವಾಗುತ್ತಿದ್ದಂತೆ ಕೊಟೆ ಗೋಡೆ ಕುಸಿದಿದ್ದು ಇತಿಹಾಸ ಪ್ರಿಯರ ಆಕ್ರೋಶಕ್ಕೆ ಕಾರಣವಗಿದೆ. ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ವ್ಯಾಪ್ತಿಗೆ ಒಳಪಡುವ ಮುದಗಲ್ಲ ಕೋಟೆ ಏಳು ರಾಜರ ಆಡಳಿತ ಕಂಡಿರುವ ಎರಡು ಸುತ್ತಿನ ಕೋಟೆಯಾಗಿದೆ. ಐತಿಹಾಸಿಕ ಕೋಟೆ ಮುಂಭಾಗದ ಕಂದಕವನ್ನು ಮಣ್ಣಿನಿಂದ ಮುಚ್ಚಿರುವ ಪುರಸಭೆ ಅಧಿಕಾರಿಗಳು ಪಕ್ಕದಲ್ಲಿದ್ದ ಕೋಟೆ ಗೋಡೆಯನ್ನು ಕೆಡವಿ ಅದರ ದೊಡ್ಡ ಗಾತ್ರದ ಕಲ್ಲುಗಳನ್ನು ಮಣ್ಣಲ್ಲಿ ಹಾಕಿ ಶುಕ್ರವಾರ ನೆಲಸಮ ಮಾಡಿದ್ದಾರೆ.! ಪ್ರಾಚ್ಯ ವಸ್ತು ಸಂರಕ್ಷಣ ನಿಯಮದ ಪ್ರಕಾರ ಪುರಾತನ ಕಟ್ಟಡ ಹಾಗೂ ಐತಿಹಾಸಿಕ ಸ್ಥಳದಿಂದ 300 ಅಡಿ ಯಾವುದೆ ನಿವೇಶನ ಮತ್ತು ಕಟ್ಟಡ ಅಥವಾ ಯಾವುದೆ ಕೆಲಸ ಮಾಡುವಂತಿಲ್ಲ. ಆದರೆ ಪುರಾತನ ಹಾಗೂ ಐತಿಹಾಸಿಕ ಕೋಟೆಯನ್ನು ರಕ್ಷಣೆ ಮಾಡಬೇಕಾದ ಸರ್ಕಾರದ ಅಧಿಕಾರಿಗಳೆ ಜೆಸಿಬಿ ಮೂಲಕ ಕೋಟೆಯ ಗೋಡೆ ಕೆಡವಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದಲ್ಲಿ ಪ್ರತಿ ವರ್ಷ ಆಚರಿಸುವ ಮೋಹರಂದಲ್ಲಿ ವಿವಿಧ ಅಂಗಡಿ ಹಾಗೂ ಆಟಕಿಯ ಸಾಮಗ್ರಿಗಳು ಅಳವಡಿಕೆ ಮಾಡಲು15 ದಿನಗಳಿಗೆ ಪುರಸಭೆಯಿಂದ ಬಹಿರಂಗ ಸವಾಲು ಮೂಲಕ ಹರಾಜು ನೀಡಲಾಗುತ್ತದೆ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ₹15ಲಕ್ಷ ಕ್ಕೆ ಸವಾಲು ಮಾಡಲಾಗಿದೆ. ಇದರಿಂದ ಆಸೆಗೆ ಬಿದ್ದಂತೆ ಪುರಸಭೆ ಅಧಿಕಾರಿಗಳು ಟ್ರಾಕ್ಟರ್ ಮೂಲಕ ಬೇರೆ ಕಡೆಯಿಂದ ಮಣ್ಣು ತಂದು ಕೋಟೆ ಮುಂಬಾಗದ ಕಂದಕವನ್ನು ಮುಚ್ಚಿಸಿದ್ದಾರೆ. ಅಲ್ಲದೆ ಕೋಟೆ ಗೋಡೆಯ ಕಲ್ಲುಗಳನ್ನು ಕಿತ್ತಿ ಕಂದಕದ ಮಣ್ಣಿನ ಜೊತೆಗೆ ಮುಚ್ಚಿಹಾಕಿದ್ದಾರೆ.ಪುರಸಭೆಯಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲದೆ ಲಿಂಗಸುಗೂರು ಸಹಾಯಕ ಆಯುಕ್ತರಾದ ಶಿಂಧೆ ಅವಿನಾಶ (ಐಎಎಸ್) ರವರೆ ಆಡಳಿತಾಧಿಕಾರಿಯಾಗಿದ್ದು ಐತಿಹಾಸಿಕ ಕೋಟೆ ಕೆಡವಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಪ್ರಾಚ್ಯವಸ್ತು ಸಂರಕ್ಷಣ ಇಲಾಖೆ ಹಾಗೂ ಸಂಬಂದಿಸಿದ ಇಲಾಖೆಯ ಮೇಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.