ಮುದ್ನಾಳ್‌ ಅಭಿವೃದ್ಧಿಪರ ನಾಯಕ : ಪ್ರಭು ಚವ್ಹಾಣ

KannadaprabhaNewsNetwork |  
Published : Sep 23, 2024, 01:22 AM IST
ಮಾಜಿ ಸಚಿವ, ಔರಾದ್‌ ಹಾಲಿ ಶಾಸಕ ಪ್ರಭು ಚವ್ಹಾಣ್‌ ಅವರು ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಅವರ ಯಾದಗಿರಿ ನಿವಾಸಕ್ಕೆ ಭೇಟಿ ನೀಡಿ, ಪುತ್ರ ಮಹೇಶರಡ್ಡಿ ಮುದ್ನಾಳ ಮತ್ತು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. | Kannada Prabha

ಸಾರಾಂಶ

ಔರಾದ್‌ ಹಾಲಿ ಶಾಸಕ ಪ್ರಭು ಚವ್ಹಾಣ್‌ ಅವರು ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಅವರ ಯಾದಗಿರಿ ನಿವಾಸಕ್ಕೆ ಭೇಟಿ ನೀಡಿ, ಪುತ್ರ ಮಹೇಶರಡ್ಡಿ ಮುದ್ನಾಳ ಮತ್ತು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ ಅವರು ಸದಾ ಅಭಿವೃದ್ಧಿಗಾಗಿ ಚಿಂಚಿಸುತ್ತಿದ್ದ ನಾಯಕರಾಗಿದ್ದರು. ಅವರ ನಿಧನದಿಂದ ಕ್ಷೇತ್ರ ಅಷ್ಟೇ ಅಲ್ಲ ಜಿಲ್ಲೆಗೆ, ಪಕ್ಷಕ್ಕೆ ನಷ್ಟವಾಗಿದೆ ಎಂದು ಔರಾದ್‌ ಶಾಸಕ ಪ್ರಭು ಚವ್ಹಾಣ ಸಂತಾಪ ವ್ಯಕ್ತಪಡಿಸಿದರು.

ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಅವರ ನಿವಾಸಕ್ಕೆ ಭೇಟಿ ನೀಡಿ, ಪುತ್ರ ಮಹೇಶರಡ್ಡಿ ಮುದ್ನಾಳ ಮತ್ತು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ನಂತರ ಮಾಧ್ಯಮಗಳವರೊಂದಿಗೆ ಮಾತನಾಡಿದ ಅವರು, ವೆಂಕಟರಡ್ಡಿ ಅವರ ಜೊತೆಗೆ ಕೆಲಸ ಮಾಡಿದ ದಿನಗಳು ಮೆಲುಕು ಹಾಕಿದರು.

ಅಭಿವೃದ್ಧಿ ವಿಷಯಕ್ಕೆ ಜಗಳವಾಡುತ್ತಿದ್ದ ಅವರು ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಏಕೈಕ ಕಾರಣಕ್ಕೆ ಅವರು ಹಟ ಹಿಡಿದು ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧ ಕಾರ್ಯಗಳನ್ನು ಮಾಡಿಸಿಕೊಂಡಿದ್ದರು. ಇಂತಹ ಜನಪರ ನಿಲುವಿನ ನಾಯಕನ ಅಗಲಿಕೆ ತುಂಬಲಾರದ ನಷ್ಟ ಎಂದು ಶೋಕ ವ್ಯಕ್ತಪಡಿಸಿದರು.

ಈ ವೇಳೆ ವೆಂಕಟರೆಡ್ಡಿ ಮುದ್ನಾಳ್‌ರ ಸಹೋದರರಾದ ಹಣಮಂತರಡ್ಡಿ ಮುದ್ನಾಳ, ರಾಚಣ್ಣಗೌಡ ಮುದ್ನಾಳ, ದೇವಿಂದ್ರನಾಥ ನಾದ, ಖಂಡಪ್ಪ ದಾಸನ, ವೆಂಕಟರೆಡ್ಡಿ ಅಬ್ಬೆತುಮಕೂರು, ಗುರು ಕಾಮಾ, ರುದ್ರಗೌಡ ಪಾಟೀಲ್, ಮಹಾದೇವಪ್ಪ ಯಲಸತ್ತಿ, ರಮೇಶ್ ದೊಡಮನಿ, ಮಲ್ಲು ಸ್ವಾಮಿ ಗುರುಸುಣಗಿ, ಲಕ್ಷ್ಮಿಪುತ್ರ ಮಾಲಿಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ