ರಿಯಾಜಅಹ್ಮದ ಎಂ. ದೊಡ್ಡಮನಿ
ಈಗಾಗಲೇ ಅಲಾಯಿ ದೇವರು ಸ್ಥಾಪನೆ ಆಗಿದ್ದು, ಗುರುವಾರ ತಡರಾತ್ರಿ ಅಲಾಯಿ ದೇವರು ಸವಾರಿ ಮಾಡುತ್ತಾರೆ. ಅಲ್ಲದೆ ಕೆಲವು ಭಾಗದಲ್ಲಿ ಮೊಹರಂ ಹಬ್ಬ ಅತ್ಯಂತ ವೈಶಿಷ್ಟ್ಯತೆಯಿಂದ ಜರುಗುತ್ತಿದ್ದು, ಕೆಲವು ಗ್ರಾಮದಲ್ಲಿ ಮುಸ್ಲಿಮರು ಇಲ್ಲದಿದ್ದರೂ ಹಿಂದೂಗಳೇ ಆಚರಿಸುತ್ತಾರೆ. ಆಲಾಯಿ ದೇವರ ಸ್ಥಾಪಿಸುತ್ತಾರೆ.
ಡಂಬಳ ಗ್ರಾಮದಲ್ಲಿ ಅಲಾಯಿ ದೇವರ ಸ್ಥಾಪನೆಯನ್ನು ಬೀಬಿಫಾತಿಮಾ, ಗೌಳಗೇರ ದೇವರು, ಕಾಸಿಂ ದೇವರು, ಚಾಂದಪೀರಾ, ಸರ್ಕಾವಾಸ, ವಲ್ಲೇನವರ ಅಲಾಯಿ ದೇವರು ಹೀಗೆ ಆರು ಕಡೆಗಳಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಅಲ್ಲದೆ ಪ್ರತಿ ವರ್ಷದಂತೆ ಗ್ರಾಮದ ಗೌಳಗೇರ ಅಲಯಿ ನಿಮಿತ್ತವಾಗಿ ಗುರುವಾರ ದತ್ತರಶಾವಲಿ ದರಗಾದಲ್ಲಿ ಗಂಜಿ ಮತ್ತು ಅನ್ನಸಂತರ್ಪಣೆ ಜರುಗುತ್ತದೆ.ಕರ್ಬಲಾ ಯುದ್ಧ ಹಝ್ರತ್ ಹುಸೈನ್‌ರ ಹತ್ಯೆ: ಮೊಹರಂ ತಿಂಗಳಲ್ಲಿ ನಡೆದ ಇನ್ನೊಂದು ಘಟನೆ ಕರ್ಬಲಾ ಯುದ್ಧ. ಪ್ರವಾದಿ ಮುಹಮ್ಮದ್ ಅವರ ಮರಣದ ಬಳಿಕ ಆಬೂಬಕರ್, ಉಮರ್‌ಬಿನ್ ಖತ್ತಾಬ್, ಉಸ್ಮಾನ್ ಬಿನ್ ಅಫ್ಘಾನ್ ಹಾಗೂ ಅಲೀ ಬಿನ್ ಅಬೀತಾಲಿಬ್ ಅರೇಬಿಯಾದಲ್ಲಿ ಆಳ್ವಿಕೆ ನಡೆಸುತ್ತಾರೆ. ಅವರ ಆಡಳಿತವು ಖಲೀಫಾ ಆಡಳಿತ ಎಂದೇ ಖ್ಯಾತಿ ಗಳಿಸಿತ್ತು. ಅವರ ಆಡಳಿತ ಕೊನೆಗೊಂಡ ಬಳಿಕ ಮುಆವಿಯಾ ಎಂಬುವರು ಅಧಿಕಾರಕ್ಕೇರುತ್ತಾರೆ. ಮುಅವಿಯಾ ಪ್ರಜಾಸತ್ತಾತ್ಮಕ, ಸರ್ವ ಧರ್ಮಕ್ಕೂ ಸಮಾನತೆ ಸಾರುವ ಆಡಳಿತವನ್ನು ನಡೆಸಿ, ಇತರರಿಗೆ ಮಾದರಿಯಾಗುತ್ತಾರೆ.
ಹುಲಿ ವೇಷಧಾರಣೆ: ಅಲಾಯಿ ಹಬ್ಬ ಬಂತೆಂದರೆ ಹುಲಿವೇಷಧಾರಿಗಳಾದ ಯುವಕರು, ಮಕ್ಕಳನ್ನು ಕಾಣಬಹುದು. ಅಲಾಯಿ ದೇವರಿಗೆ ಹರಕೆ ಹೊತ್ತುಕೊಂಡ ಜನರು ಹುಲಿ ವೇಷ ಧರಿಸಿ ತಮ್ಮ ಹರಕೆ ತೀರಿಸುತ್ತಾರೆ. ಸಂಪ್ರದಾಯಕ್ಕಾಗಿ ಹುಲಿವೇಷ ಧರಿಸುವವರು ಒಂದುಕಡೆಯಾದರೆ ಇನ್ನು ಮನರಂಜನೆ, ಹೊಟ್ಟೆಪಾಡಿಗಾಗಿ ಹುಲಿವೇಷ ಧರಿಸುವ ತಕ ವರೂ ಇದ್ದಾರೆ. ಹುಲಿವೇಷ ಧರಿಸಿದವರು ಬಿಸಿಲು, ಮಳೆ, ಚಳಿಯಲ್ಲಿ ಬರಿಮೈಯಲ್ಲಿ ನಿಂತು ಕುಣಿದು ಕುಪ್ಪಳಿಸುತ್ತಾರೆ.
ರಾತ್ರಿ ಬರುವ ದೇವರು: ಅಲಾಯಿ ದೇವರು ತಡರಾತ್ರಿ ಮಸೀದಿಯಿಂದ ಹೊರಗಡೆ ಬಂದು ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತವೆ. ರಾತ್ರಿ ಜನರು ದೇವರು ಹೊರಗಡೆ ಬರುವುದನ್ನು ಕಾಯುತ್ತಾ ಇರುತ್ತಾರೆ. ಕೆಲವು ಕಡೆ ಅಲಾಯಿ ದೇವರು ಹೊರಗಡೆ ಬಂದ ನಂತರ ಬೆಂಕಿಯಲ್ಲಿ ಹಾರುವುದು, ನಾನಾ ಪವಾಡಗಳು ಜರುಗುತ್ತವೆ. ಇನ್ನೂ ಕೆಲವು ಕಡೆ ಜನರು ಅಲಾಯಿ ದೇವರನ್ನು ತಮ್ಮ ಕಷ್ಟ, ನಷ್ಟಗಳಿಗೆ ಪರಿಹಾರ ಕೋರಿ ಹರಕೆ ಸಹ ಹೊರುತ್ತಾರೆ.