ಹುಬ್ಬಳ್ಳಿ:
ಈ ಸಭೆಯಲ್ಲಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಸೇರಿದಂತೆ 40ಕ್ಕೂ ಅಧಿಕ ಲಿಂಗಾಯತ ಮಠಾಧೀಶರು ಪಾಲ್ಗೊಂಡಿದ್ದರು. ಆದರೆ, ಮೂರುಸಾವಿರ ಮಠದ ಶ್ರೀಗಳು ಶುಕ್ರವಾರ ಸಂಜೆ ಅಧಿಕೃತ ಪ್ರಕಟಣೆ ಹೊರಡಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಪತ್ರದಲ್ಲೇನಿದೆ:ಪ್ರಹ್ಲಾದ ಜೋಶಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದ ಮೂಜಗು, ಶ್ರೀಮಠವು ಯಾವಾಗಲೂ ರಾಜಕೀಯ ಅಂತರ ಕಾಯ್ದುಕೊಂಡು ಬಂದಿದೆ. ಎಲ್ಲ ರಾಜಕೀಯ ಪಕ್ಷಗಳನ್ನು ಸಮನಾಗಿ ಕಾಣುತ್ತಾ ಬಂದಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಶ್ರೀಮಠಕ್ಕೆ ಆಗಮಿಸಿ ಆಶೀರ್ವಾದ ತೆಗೆದುಕೊಂಡು ಹೋಗುತ್ತಾರೆ. ಸರ್ವರನ್ನು ಸಮಭಾವದಿಂದ ಕಾಣುವುದು ಶ್ರೀಮಠದ ಸದ್ಭಾವನೆಯಾಗಿದೆ. ಯಾವಾಗಲೂ ಮಠವು ರಾಜಕೀಯ ಪ್ರೇರಿತ ಹೇಳಿಕೆ ಕೊಟ್ಟಿಲ್ಲ ಮತ್ತು ಕೊಡುವುದೂ ಇಲ್ಲ. ಇಂದಿಗೂ ಅದನ್ನು ನಾವು ಕಾಯ್ದುಕೊಂಡು ಬಂದಿದ್ದೇವೆ. ಯಾವುದೇ ಒಂದು ರಾಜಕೀಯ ಪಕ್ಷದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದರೆ ಆ ಪಕ್ಷದ ಕಾರ್ಯಕರ್ತರು ಮತ್ತು ವರಿಷ್ಠರಿಗೆ ಸಂಬಂಧಪಟ್ಟದ್ದು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆಯ್ಕೆಗೆ ವಿರೋಧ ಮಾಡಿಲ್ಲ. ಅವರ ಮತ್ತು ನಮ್ಮ ನಡುವೆ ವೈಯಕ್ತಿಕವಾಗಿ ಬಾಂಧವ್ಯವು ತುಂಬಾ ಚೆನ್ನಾಗಿರುತ್ತದೆ. ಪ್ರಹ್ಲಾದ ಜೋಶಿ ಅವರು ಕೂಡಾ ಶ್ರೀಮಠದೊಡನೆ ಸೌಹಾರ್ದಯುತವಾಗಿ ಸದಾ ಭಕ್ತಿ ಭಾವದಿಂದ ನಡೆದುಕೊಂಡಿದ್ದಾರೆ ಎಂದು ಅಧಿಕೃತವಾಗಿರುವ ಪತ್ರ ಶ್ರೀಮಠದಿಂದ ಬಿಡುಗಡೆಯಾಗಿದೆ.