ವಾಹನ ಚಾಲಕರು ಸುರಕ್ಷಿತವಾಗಿ ಸಂಚರಿಸಬೇಕು ಹಾಗೂ ವಾಯು ಮಾಲಿನ್ಯ ತಡೆಗೆ ಸೈಕಲ್ ಸವಾರಿಗೆ ಮಹತ್ವ ನೀಡಬೇಕು ಎಂಬ ಸಂದೇಶ ಸಾರುತ್ತ ಮಹಾರಾಷ್ಟ್ರ ಕಲ್ಯಾಣ-ಮುಂಬೈದಿಂದ ತಮಿಳುನಾಡಿನ ಊಟಿಯವರೆಗೆ ಸೈಕಲ್ ಮೇಲೆ ಪ್ರವಾಸ ಪ್ರವಾಸ ಕೈಗೊಂಡಿದ್ದಾರೆ.
ಇಳಕಲ್ಲ: ವಾಹನ ಚಾಲಕರು ಸುರಕ್ಷಿತವಾಗಿ ಸಂಚರಿಸಬೇಕು ಹಾಗೂ ವಾಯು ಮಾಲಿನ್ಯ ತಡೆಗೆ ಸೈಕಲ್ ಸವಾರಿಗೆ ಮಹತ್ವ ನೀಡಬೇಕು ಎಂಬ ಸಂದೇಶ ಸಾರುತ್ತ ಮಹಾರಾಷ್ಟ್ರ ಕಲ್ಯಾಣ-ಮುಂಬೈದಿಂದ ತಮಿಳನಾಡಿನ ಊಟಿಯವರೆಗೆ ಸೈಕಲ್ ಮೇಲೆ ಪ್ರವಾಸ ಪ್ರವಾಸ ಕೈಗೊಂಡಿದ್ದಾರೆ. ನಗರದ ವಾಯು ವಿಹಾರ ಬಳಗದವರು ಬೆಳಗ್ಗೆ ವಾಯುವಿಹಾತಕ್ಕೆ ಹೋಗಿದ್ದಾಗ ಮಹಾರಾಷ್ಟ್ರದ ಈ ಪ್ರವಾಸಿಗರು ಎದುರಾದರು. ಕುತೂಹಲದಿಂದ ಅವರನ್ನು ವಿಚಾರಿಸಿದಾಗ ತಮ್ಮ ಪ್ರವಾಸದ ಉದ್ದೇಶ ತಿಳಿಸಿದರು. ಮುಂಬೈ ಬೈಕ್ ಸ್ಪೋರ್ಟ್ ಕ್ಲಬ್‌ನವರು ಇಂತಹ ಪ್ರವಾಸಗಳನ್ನು ಪ್ರತಿ ವರ್ಷ ಏರ್ಪಡಿಸುತ್ತಿದ್ದು, ಈ ವರ್ಷ ಕಲ್ಯಾಣ-ಮುಂಬೈದಿಂದ ಊಟಿಯವರೆಗೆ ೧೫ ಜನರಿಗೆ ಇಂತಹ ಅವಕಾಶ ಒದಗಿಸಿದೆ. ಪ್ರತಿದಿನ ೨೦೦ಕೀ.ಮೀ ಸೈಕಲ್ ಮೇಲೆ ಸಂಚರಿಸುತ್ತಿದ್ದು, ನಮ್ಮ ಮುಂದಿನ ವಸತಿ ಚಿತ್ರದುರ್ಗದಲ್ಲಿ ಮಾಡುವುದಾಗಿ ತಿಳಿಸಿದರು.ವಾಯು ವಿಹಾರ ಬಳಗದ ಹಿರಿಯರಾದ ಶರಣಪ್ಪಣ್ಣ ಅಕ್ಕಿ, ಸಿ.ಸಿ. ಚಂದ್ರಾಪಟ್ಟಣ ಸೇರಿದಂತೆ ಇತರರು ಅವರಿಗೆ ಶುಭಕೋರಿ ಬೀಳ್ಕೊಟ್ಟರು.