ಕನ್ನಡಪ್ರಭ ವಾರ್ತೆ ಮಡಿಕೇರಿ
2026-27 ನೇ ಸಾಲಿನ ಜನಗಣತಿ ಕರ್ತವ್ಯದಿಂದ ಪ್ರೌಢಶಾಲಾ ಶಿಕ್ಷಕರಿಗೆ ವಿನಾಯಿತಿ ಕೋರಿ ಕೊಡಗು ಜಿಲ್ಲಾಧಿಕಾರಿ ಸೋಮಶೇಖರ್ ಅವರಿಗೆ ಕೊಡಗು ಪ್ರೌಢಶಾಲಾ ಸಹಶಿಕ್ಷಕರ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಹತ್ತನೇ ತರಗತಿಯ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಒತ್ತಡವಿದ್ದು ಪರೀಕ್ಷಾ ಕಾರ್ಯ ಮತ್ತು ಮೌಲ್ಯ ಮಾಪನ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ, ಪ್ರೌಢಶಾಲಾ ಶಿಕ್ಷಕರಿಗೆ ವಿನಾಯಿತಿ ನೀಡಬೇಕು. ಅನಿವಾರ್ಯವಿದ್ದರೆ, ಮೇಲ್ವಿಚಾರಕರು ಮತ್ತು ನೋಡಲ್ ಅಧಿಕಾರಿಗಳಾಗಿ, ನೇಮಿಸಬೇಕು, ಆನಾರೋಗ್ಯವಿದ್ದವರಿಗೆ, ನಿವೃತ್ತಿ ಅಂಚಿನಲ್ಲಿ ಇರುವವರನ್ನು ಜನಗಣತಿಯಿಂದ ಕೈಬಿಡಬೇಕು ಎಂದು ಮನವಿ ಮಾಡಲಾಯಿತು. ಬೇರೆ ಇಲಾಖೆಯವರನ್ನು ಗಣತಿ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಕೋರಲಾಯಿತು. ಇದೇ ಸಂದರ್ಭ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಮತ್ತು ಪರಿಶಿಷ್ಟ ಜಾತಿ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಗಳಿಕೆ ರಜೆ ಮಂಜೂರು ಮಾಡಬೇಕೆಂದು ಮನವಿ ಮಾಡಲಾಯಿತು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪ್ರೌಢಶಾಲಾ ಶಿಕ್ಷಕರಿಗೆ ಕೇಡರ್ ಗೆ ತಕ್ಕಂತೆ ಮೇಲ್ವಿಚಾರಕರು ಮತ್ತು ನೋಡಲ್ ಆಗಿ ನೇಮಿಸುವ ಭರವಸೆ ನೀಡಿದರು. ಕೊಡಗು ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ಕಾರ್ಯಕ್ಷಮತೆ ಬಗ್ಗೆ ಪ್ರಶಂಸಿದರು. ಎರಡು ಗಣತಿ ದಾರರಿಗೂ, ಗಳಿಕೆ ನೀಡಲು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದು ಹೇಳಿದರು,
ಅದೇ ರೀತಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜ್, ಹಿಂದುಳಿದ ವರ್ಗಗಳ ಪ್ರಭಾರಿ ಜಿಲ್ಲೆಯ ಅಧಿಕಾರಿ ಕವಿತಾ, ಕೊಡಗು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು,ಕೊಡಗು ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಹೆಚ್. ಜಿ. ಕುಮಾರ್, ಜಿಲ್ಲಾ ಕಾರ್ಯದರ್ಶಿ, ಎಂ. ಎಸ್. ಮಹೇಂದ್ರ, ಮಡಿಕೇರಿ ತಾಲೂಕಿನ ಸಹಶಿಕ್ಷಕರ ಸಂಘ ಅಧ್ಯಕ್ಷ ಪಿ. ಎಸ್, ರವಿಕೃಷ್ಣ, ಸೋಮವಾರ ಪೇಟೆ ತಾಲೂಕಿನ ಸಹಶಿಕ್ಷಕರ ಸಂಘದ ತಾಲೂಕು ಸಂಘದ ಅಧ್ಯಕ್ಷರಾದ, ಕೆ.ಆರ್.ರತ್ನಕುಮಾರ್, ಜಿಲ್ಲಾ ಸಂಘದ ಪದಾಧಿಕಾರಿ, ಸಿ. ಹೆಚ್. ಲೋಕೇಶ್, ಸೋಮವಾರಪೇಟೆ ತಾಲೂಕು ಸಂಘದ ಯಶವಂತ್ ಕುಮಾರ್, ಸೋಮವಾರಪೇಟೆ ತಾಲೂಕು ಸಂಘದ ಪದಾಧಿಕಾರಿ ವಿಜಯ್ ಕುಮಾರ್ ಭಾಗವಹಿಸಿದ್ದರು. ಕೊಡಗು ಜಿಲ್ಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಪ್ರೌಢಶಾಲಾ ಶಿಕ್ಷಕರು ಬೆಳಿಗ್ಗೆ, 8 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಿಶೇಷ ತರಗತಿ ನಡೆಸಿ ವಿದ್ಯಾರ್ಥಿಗಳ ಉತ್ತೀರ್ಣಕ್ಕಾಗಿ ಬಹಳ ಶ್ರಮಿಸುತ್ತಿದ್ದಾರೆ. ಮೂರು ಪೂರ್ವಭಾವಿ ಪರೀಕ್ಷೆಗಳು ಜರುಗಿದ್ದು, ಮಾರ್ಚ್ 18 ರಿಂದ ಏಪ್ರಿಲ್ 2 ರ, ತನಕ ಪರೀಕ್ಷೆಗಳು ಜರುಗಲಿವೆ, ಪ್ರೌಢಶಾಲಾ ಶಿಕ್ಷಕರು ಪರೀಕ್ಷಾ ಕಾರ್ಯಗಳು ಮತ್ತು ಮೌಲ್ಯ ಮಾಪನ, ಸ್ಥಳೀಯ ಚುನಾವಣೆ ಇರುವ ಕಾರಣ ಪ್ರೌಢಶಾಲಾ ಶಿಕ್ಷಕರಿಗೆ 2026-27 ರ, ಜನಗಣತಿಯ ಕಾರ್ಯದಿಂದ ವಿನಾಯಿತಿ ನೀಡುವ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ.
ಹೆಚ್. ಜಿ. ಕುಮಾರ್, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಕೊಡಗು ಜಿಲ್ಲೆ