ಮುಕ್ಕ ಮಿತ್ರಪಟ್ಣ ಯುವಕ ಮಂಡಲ ವಿದ್ಯಾರ್ಥಿ ವೇತನ ವಿತರಣೆ

KannadaprabhaNewsNetwork |  
Published : May 28, 2025, 12:01 AM ISTUpdated : May 28, 2025, 12:02 AM IST
ಮುಕ್ಕ ಮಿತ್ರಪಟ್ಣ ಯುವಕ ಮಂಡಲ ವಿದ್ಯಾರ್ಥಿ ವೇತನ ವಿತರಣೆ  | Kannada Prabha

ಸಾರಾಂಶ

ಮುಕ್ಕದ ಮಿತ್ರಪಟ್ಣ ಯುವಕ ಮಂಡಲದ ವತಿಯಿಂದ ಮಿತ್ರಪಟ್ಣ ಜ್ಞಾನ ದೇಗುಲದ ಸಭಾಂಗಣದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಗೌರವಾರ್ಪಣಾ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಉನ್ನತ ಶಿಕ್ಷಣ ಪಡೆಯುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆಗಳ ಹಾಗೂ ಸಮಾಜದ ಪ್ರೋತ್ಸಾಹ ಸಿಕ್ಕಿದಲ್ಲಿ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಮಾಜಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕೂರಾಡಿ ಹೇಳಿದ್ದಾರೆ.

ಮುಕ್ಕದ ಮಿತ್ರಪಟ್ಣ ಯುವಕ ಮಂಡಲದ ವತಿಯಿಂದ ಮಿತ್ರಪಟ್ಣ ಜ್ಞಾನ ದೇಗುಲದ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಗೌರವಾರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಿತ್ರಪಟ್ಣ ಯುವಕ ಮಂಡಲದ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿ ಆಕಾಶ್ ಜಿ.ಕರ್ಕೇರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಸಮಾಜಕ್ಕಾಗಿ ದುಡಿದು, ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ರವೀಂದ್ರ ಕರ್ಕೇರ, ವಿಠ್ಠಲ್ ಶ್ರೀಯಾನ್, ಹರೀಶ್ ಸಾಲ್ಯಾನ್ ಅವರನ್ನು ಗೌರವಿಸಲಾಯಿತು.

ಸುಮಾರು 73 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯೆ ಶೋಭಾ ರಾಜೇಶ್, ಉದ್ಯಮಿ ದಿನಕರ ಎಂ., ಮುಕ್ಕ ಪ್ರೋಟೀನ್ಸ್ ಲಿಮಿಟೆಡ್‌ ಸಂಸ್ಥೆಯ ಮ್ಯಾನೇಜರ್ ಜಗನ್ನಾಥ ಕೋಟ್ಯಾನ್ ಸಸಿಹಿತ್ಲು, ಮಿತ್ರಪಟ್ಣ ಮೊಗವೀರ ಸಂಘದ ಉಪಾಧ್ಯಕ್ಷ ಪುರಂದರ ಬಂಗೇರ, ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ಪ್ರದೀಪ್ ಕುಂದರ್, ಮಹಿಳಾ ಸಂಘದ ಅಧ್ಯಕ್ಷೆ ಕವಿತಾ ಶರತ್, ಯಶವಂತ ಪೂಜಾರಿ, ಮಿತ್ರಪಟ್ಣ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಸಂತ ಸುವರ್ಣ, ಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಪುತ್ರನ್, ಭಜನಾ ಮಂದಿರ ಉಪಾಧ್ಯಕ್ಷ ಪುಷ್ಪರಾಜ್ ಕರ್ಕೇರ, ಸುನೀಲ್ ಸಾಲ್ಯಾನ್, ಮೊಗವೀರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಆರ್ ಮತ್ತಿತರರಿದ್ದರು.ಪುರುಷೋತ್ತಮ ಸುವರ್ಣ ಸ್ವಾಗತಿಸಿದರು, ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಪುತ್ರನ್ ವಂದಿಸಿದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ