ಪರಶಿವಮೂರ್ತಿ ದೋಟಿಹಾಳ
ಕೋಟ್ಯಂತರ ರುಪಾಯಿ ವ್ಯಯಿಸಿ ನಿರ್ಮಿಸಿರುವ ಪಟ್ಟಣದ ಹೈಟೆಕ್ ಬಸ್ ನಿಲ್ದಾಣವೂ ಸ್ವಚ್ಛತೆ, ಕುಳಿತುಕೊಳ್ಳಲು ಆಸನ ಸೇರಿದಂತೆ ಅನೇಕ ಸೌಕರ್ಯಗಳಿಂದ ವಂಚಿತವಾಗಿದೆ.
ತಾಲೂಕು ಕೇಂದ್ರಸ್ಥಾನದಲ್ಲಿರುವ ಇಲ್ಲಿನ ಬಸ್ ನಿಲ್ದಾಣದಿಂದ ನೂರಾರು ಬಸ್‌ಗಳು ನಿತ್ಯ ಕಾರ್ಯಾಚರಣೆ ನಡೆಸುತ್ತವೆ. ಸಾವಿರಾರು ಪ್ರಯಾಣಿಕರು ತಮ್ಮ ಗಮ್ಯ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಆದರೆ, ಅವರಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳು ಇಲ್ಲದೆ ಸಂಕಷ್ಟ ಅನುಭವಿಸುವಂತೆ ಆಗಿದೆ.₹ 4 ಕೋಟಿ ವೆಚ್ಚ:
ಪ್ರಯಾಣಿಕರಿಗೆ ಅಗತ್ಯವಿರುವಷ್ಟು ಆಸನಗಳ ವ್ಯವಸ್ಥೆಯಲ್ಲಿ ನಿಲ್ದಾಣದಲ್ಲಿ ಮಾಡಿಲ್ಲ. ಕೇವಲ ಸಿಮೆಂಟ್ ಬೆಂಚ್ ಹಾಕಲಾಗಿದೆ. ಇದರಿಂದ ಗರ್ಭಿಣಿಯರು, ಅಂಗವಿಕಲರು ಕುಳಿಕುಕೊಳ್ಳಲು ತೀವ್ರ ಸಮಸ್ಯೆಯಾಗಿದೆ. ಹೀಗಾಗಿ ನೆಲದ ಮೇಲೆ ಕುಳಿತುಕೊಳ್ಳಬೇಕಾಗಿದೆ. ಹೊಸ ಶೌಚಾಲಯ ನಿರ್ಮಿಸುವ ಬದಲು ಹಳೆಯ ಶೌಚಾಲಯಗಳನ್ನೆ ದುರಸ್ತಿಗೊಳಿಸಿದ್ದು ನಿರ್ವಹಣೆ ಕೊರತೆಯಿಂದ ನಲುಗಿವೆ. ಜತೆಗೆ ದುರ್ವಾಸನೆ ಬೀರುತ್ತಿದ್ದು ಅತ್ತ ಯಾರೊಬ್ಬರು ಹೋಗುತ್ತಿಲ್ಲ. ಪ್ರಯಾಣಿಕರು ಸೇರಿದಂತೆ ಸಾರಿಗೆ ಸಿಬ್ಬಂದಿ ಸಹ ತಮ್ಮ ದೇಹಬಾಧೆ ತೀರಿಸಿಕೊಳ್ಳಲು ಬಯಲನ್ನೇ ಆಶ್ರಯಿಸಬೇಕಿದೆ.
ಸಾರಿಗೆ ಸಂಸ್ಥೆಯ ನಿಲ್ದಾಣದೊಳಗೆ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಪ್ರವೇಶಿಸಿದರೆ ದಂಡ ವಿಧಿಸಲಾಗುವುದು ಎಂದು ಸಿಬ್ಬಂದಿ ಹೇಳುತ್ತಾರೆ. ಆದರೆ, ಸಾರಿಗೆ ಸಂಸ್ಥೆಯ ಬಸ್‌ಗಳಿಂತ ಖಾಸಗಿ ವಾಹನಗಳ ಓಡಾಟವೇ ಹೆಚ್ಚಾಗಿದೆ. ಇವುಗಳಿಗೆ ಬ್ರೇಕ್ ಹಾಕಬೇಕಿದ್ದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಹಲವು ಬಾರಿ ಸಣ್ಣ ಪುಟ್ಟ ಅಪಘಾತವೂ ಆಗಿದೆ.
ಬಸವರಾಜ ಗಾಣಿಗೇರ ಸಾಮಾಜಿಕ ಹೋರಾಟಗಾರ ಕುಷ್ಟಗಿಶೌಚಾಲಯಗಳ ಸಂಖ್ಯೆ ಹೆಚ್ಚಿಸಬೇಕು. ಕುಡಿಯುವ ನೀರಿನ ಘಟಕ ದೂರದಲ್ಲಿದ್ದು ಪರ್ಯಾಯ ವ್ಯವಸ್ಥೆ ಮಾಡಬೇಕು. ನಿಲ್ದಾಣದ ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡಬೇಕಿದೆ.
ಸುಂದರಗೌಡ ಪಾಟೀಲ ಡಿಪೋ ಮ್ಯಾನೇಜರ ಕುಷ್ಟಗಿ