ಕನ್ನಡಪ್ರಭ ವಾರ್ತೆ ಮೂಲ್ಕಿ
ಲಯನ್ಸ್ ಇಂಟರ್ ಕ್ಲಬ್ ನ್ಯಾಶನಲ್ ಪ್ರಾಂತ್ಯ 10ರ ವಲಯ 1 ಹಾಗೂ ಮೂಲ್ಕಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಪ್ರಾಯೋಜಕತ್ವದಡಿ ಮಾನಂಪಾಡಿ ಪೆರ್ಮಾರಿ ಗುತ್ತು ಬಳಿ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಮನೆ ಹಸ್ತಾಂತರ ಮಾಡಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಲ್ಫಿ ಡಿಕೋಸ್ಟ ವಹಿಸಿದ್ದರು. ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯೆ ವಂದನಾ ಕಾಮತ್, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್, ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ನಿಯೋಜಿತ ಗವರ್ನರ್ ಕುಡ್ಪಿ ಅರವಿಂದ ಶೆಣೈ, ನಿಯೋಜಿತ ಉಪ ರಾಜ್ಯಪಾಲರಾದ ತಾರನಾಥ ಎಚ್.ಎಂ., ಗೋವರ್ಧನ ಶೆಟ್ಟಿ, ಪ್ರಾಂತೀಯ ಆಧ್ಯಕ್ಷ ಸುಜಿತ್ ಸಾಲ್ಯಾನ್, ವಲಯಾಧ್ಯಕ್ಷೆ ಶೀತಲ್ ಸುಶೀಲ್, ಚಂದ್ರಶೇಖರ್ ನಾನಿಲ್, ವೆಂಕಟೇಶ ಹೆಬ್ಬಾರ್, ಲಿಯೋ ಅಧ್ಯಕ್ಷ ಸಿಂಚನ ಸನಿಲ್ ಮತ್ತಿತರರು ಉಪಸ್ಥಿತರಿದ್ದರು. ಉದಯ ಅಮೀನ್ ಮಟ್ಟು ನಿರೂಪಿಸಿದರು.