ಮೂಲ್ಕಿ: ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ವರ್ಷ ಜಾತ್ರಾ ಮಹೋತ್ಸವ ವೇಳೆ ರಥದ ಅವಘಡದ ಹಿನ್ನಲೆಯಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯ ಚಿಂತನ ಪೂರ್ವಕವಾಗಿ, ಸರ್ವದುರಿತ ನಿವಾರಣೆ ಹಾಗೂ ಸಾನಿಧ್ಯ ಅಭಿವೃದ್ಧಿ ಕಾರ್ಯಗಳ ಮುನ್ನುಡಿಯಾಗಿ ಬುಧವಾರ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಪವಿತ್ರ ಪಾಣಿ ಅತ್ತೂರು ಬೈಲು ವೆಂಕಟರಾಜ ಉಡುಪ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಪ್ರಾರ್ಥನೆಯೊಂದಿಗೆ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ ಮಹಾ ಸಂಕಲ್ಪ, ಮೃತ್ತಿಕಾ ಸ್ನಾನ, ತ್ರಿಂಶತ್ ಪ್ರಾಜಾಪತ್ಯ ಕೃಚ್ಚಾಚರಣೆ, ಸುಕೃತ ಹೋಮ, ಪವಮಾನ ಹೋಮ, ಬ್ರಹ್ಮಕೂರ್ಚ ಹೋಮ, ಗೋದಾನ, ಗಣಹೋಮ, ಪರಿಷತ್ ವರಣೆ, ದ್ವಾದಶಮೂರ್ತಿ ಆರಾಧನೆ, ಸಂಜೆ ದುರ್ಗಾ ನಮಸ್ಕಾರ, ಸುಕೃತ ಹೋಮ ನಡೆಯಿತು.