ಸರ್ಕಾರ, ಅಧಿಕಾರಿಗಳ ಧೋರಣೆಯಿಂದ ಕನ್ನಡ ಶಾಲೆ ಅವನತಿ: ಉಮಾನಾಥ ಕೋಟ್ಯಾನ್‌

KannadaprabhaNewsNetwork |  
Published : Mar 04, 2026, 03:00 AM IST
ಕಟೀಲು ಕುದ್ರುವಿನಲ್ಲಿ ಮೂಲ್ಕಿ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ | Kannada Prabha

ಸಾರಾಂಶ

ಸರ್ಕಾರ ಮತ್ತು‌ ಅಧಿಕಾರಿಗಳ ಧೋರಣೆಯಿಂದ ಕನ್ನಡ ಶಾಲೆಗಳು ಅವನತಿಯತ್ತ ಸಾಗುತ್ತಿದ್ದು ಸಮ್ಮೇಳನ ಸಾಹಿತಿಗಳಿಗೆ ಮಾತ್ರವಲ್ಲದೆ ಎಲ್ಲರಿಗೂ‌ ಮುಟ್ಟುವಂತಾಗಬೇಕು. ದ.ಕ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ನಾಮಕರಣ ಮಾಡಬೇಕೆಂಬ ಕೂಗು ಕೇಳಿಬರುತ್ತಿದ್ದು, ಈ ಬಗ್ಗೆ ವಿಧಾನ ಸಭೆಯಲ್ಲಿ ಧ್ವನಿ ಎತ್ತಿದ್ದೇನೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು. ಸರ್ಕಾರ ಮತ್ತು‌ ಅಧಿಕಾರಿಗಳ ಧೋರಣೆಯಿಂದ ಕನ್ನಡ ಶಾಲೆಗಳು ಅವನತಿಯತ್ತ ಸಾಗುತ್ತಿದ್ದು ಸಮ್ಮೇಳನ ಸಾಹಿತಿಗಳಿಗೆ ಮಾತ್ರವಲ್ಲದೆ ಎಲ್ಲರಿಗೂ‌ ಮುಟ್ಟುವಂತಾಗಬೇಕು. ದ.ಕ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ನಾಮಕರಣ ಮಾಡಬೇಕೆಂಬ ಕೂಗು ಕೇಳಿಬರುತ್ತಿದ್ದು, ಈ ಬಗ್ಗೆ ವಿಧಾನ ಸಭೆಯಲ್ಲಿ ಧ್ವನಿ ಎತ್ತಿದ್ದೇನೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

ಮೂಲ್ಕಿ: ಸರ್ಕಾರ ಮತ್ತು‌ ಅಧಿಕಾರಿಗಳ ಧೋರಣೆಯಿಂದ ಕನ್ನಡ ಶಾಲೆಗಳು ಅವನತಿಯತ್ತ ಸಾಗುತ್ತಿದ್ದು ಸಮ್ಮೇಳನ ಸಾಹಿತಿಗಳಿಗೆ ಮಾತ್ರವಲ್ಲದೆ ಎಲ್ಲರಿಗೂ‌ ಮುಟ್ಟುವಂತಾಗಬೇಕು. ದ.ಕ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ನಾಮಕರಣ ಮಾಡಬೇಕೆಂಬ ಕೂಗು ಕೇಳಿಬರುತ್ತಿದ್ದು, ಈ ಬಗ್ಗೆ ವಿಧಾನ ಸಭೆಯಲ್ಲಿ ಧ್ವನಿ ಎತ್ತಿದ್ದೇನೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ತಾಲೂಕು ಘಟಕದ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಸಹಕಾರದೊಂದಿಗೆ ಕಟೀಲು ದೇವಳದ ನಂದಿನಿ ನದಿಯ ಕುದ್ರುವಿನಲ್ಲಿ ನಡೆದ ಮೂಲ್ಕಿ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರು ಮಾತನಾಡಿ ಕುವೆಂಪು ಮತ್ತು ಇನ್ನಿತರ ಜನಪ್ರಿಯ ಬರಹಗಾರು ಪ್ರಕೃತಿ‌ ಮತ್ತು ಅಧ್ಯಾತ್ಮವನ್ನೇ ಕೇಂದ್ರವಾಗಿಸಿಕೊಂಡೇ ಸಾಹಿತ್ಯ ರಚಿಸಿದ್ದೇ ಹೊರತು ಕೇವಲ ಕಾವ್ಯವನ್ನಷ್ಟೇ ರಚಿಸಿದಲ್ಲ, ನಮ್ಮಲ್ಲಿನ ಪ್ರಭುತ್ತ ನಂಬಿಕೆಗಳು ಮತ್ತು ಆಚರಣೆಗಳ ಮೇಲೆ ಸಾಹಿತ್ಯ ನಿಂತಿದೆ. ಆರಾಧನಾ ರಂಗಭೂಮಿ‌ಯು ವಿಭಿನ್ನ ಮತ್ತು ಪ್ರಮುಖವಾದ ರಂಗಭೂಮಿ, ಶಾಲೆಗಳಲ್ಲಿ ಕನ್ನಡದ ವಾತಾವರಣ ಸೃಷ್ಟಿಸುವುದು ನಮ್ಮದೇ ಜವಾಬ್ದಾರಿ, ಇಂತಹ ಕನ್ನಡ ಪರ ಒಲವಿನಿಂದ ಮುಂದುವರಿಯೋಣವೆಂದು ಹೇಳಿದರು. ಕಟೀಲು ರಥಬೀದಿಯಿಂದ ಸಮ್ಮೇಳನ‌ ನಡೆಯುವ ಕುದ್ರುವರೆಗೆ ನಡೆದ ಕನ್ನಡ ಭುವನೇಶ್ವರಿಯ ಸಾಹಿತ್ಯ ಮೆರವಣಿಗೆಗೆ ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಚಾಲನೆ ನೀಡಿದರು. ಸಮನಾಂತಾರ ವೇದಿಕೆಯನ್ನು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ರಾಷ್ಟ್ರ ಧ್ವಜವನ್ನು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಪರಿಷತ್‌ ಧ್ವಜವನ್ನು ಎಂ.ಪಿ.ಶ್ರೀನಾಥ್, ಕನ್ನಡ ಧ್ವಜವನ್ನು ಮೂಲ್ಕಿ ತಾಲೂಕು ಕಸಾಪದ ಅಧ್ಯಕ್ಷ ಮಿಥುನ್ ಕೊಡೆತ್ತೂರು ಧ್ವಜಾರೋಹಣಗೈದರು. ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಚಿತ್ರಕೂಟಕ್ಕೆ ಚಾಲನೆ ನೀಡಿದರು. ಪಟ್ಟಂಗಕಟ್ಟೆಯ ಉದ್ಘಾಟನೆಯನ್ನು ಮಂಗಳೂರು ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲು ಉದ್ಘಾಟಿಸಿದರು. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಶ್ರೀನಾಥ್ ಆಶಯ ನುಡಿಗ್ಯೆದರು. ವಿದ್ವಾಂಸ ಅಜಾರು ನಾಗರಾಜ ರಾಯರು ಸಮ್ಮೇಳನಕ್ಕೆ ನುಡಿ ಸೇಸೆಗ್ಯೆದರು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್, ಖ್ಯಾತ ಕಥೆಗಾರ ಹಂಝ ಮಲಾರ್, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಪದ್ಮಲತಾ ರಾವ್, ದೊಡ್ಡಯ್ಯ ಮೂಲ್ಯ, ಸ್ವರಾಜ್ ಶೆಟ್ಟಿ, ಪ್ರಕಾಶ್ ಆಚಾರ್ಯ, ಹೆರಿಕ್ ಪಾಯಸ್, ದೇವದಾಸ್ ಮಲ್ಯ, ವೀಣಾ ಶಶಿಧರ್, ಮೂಲ್ಕಿ ಹೋಬಳಿ ಘಟಕದ ಅಧ್ಯಕ್ಷ ಜೊಸ್ಸಿ ಪಿಂಟೋ ವಿವಿಧ ತಾಲೂಕು ಅಧ್ಯಕ್ಷರಾದ ಕೆ ಶೇಷಪ್ಪ ರೈ, ಚಂದ್ರಶೇಖರ ಪೇರಾಲು, ಡಿ. ಉದಯಪತಿಗೌಡ, ವಿಶ್ವನಾಥ, ಮಂಜುನಾಥ ಎಸ್ ರೇವಣಕರ್, ಡಾ ಧನಂಜಯ ಕುಂಬ್ಳೆ, ಪುತ್ತೂರು ಉಮೇಶ್ ನಾಯಕ್, ವೆಣುಗೋಪಾಲ ಶೆಟ್ಟಿ ಕೆ, ಮತ್ತಿತರರು ಉಪಸ್ಥಿತರಿದ್ದರು. ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು, ದೊಡ್ಡಯ್ಯ ಮೂಲ್ಯ ವಂದಿಸಿದರು. ಕಿರಣ್ ಕುಮಾರ್ ಅತ್ತೂರು, ರಾಜಶೇಖರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಮಲಾದೇವಿ‌ಪ್ರಸಾದ್ ಆಸ್ರಣ್ಣರ ಯಕ್ಷಾಕೃತಿ, ಉದಯಕುಮಾರ್ ಹಬ್ಬು ಅವರ ಅನುವಾದಿತ ಕೃತಿನೆರೂದಾನ ಇಪ್ಪತ್ತು ಪ್ರೇಮಗೀತೆಗಳು, ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಜೀವನ‌ಚರಿತ್ರೆ ಮತ್ತು ಕಲಿಕೆ, ಹೇಮಲತಾ ಶರ್ಮ ಅವರ ಎಕ್ಕಾರು ಗ್ರಂಥಾಲಯದ ಸಂಚಿಕೆ ಪುಸ್ತಕ ಮನೆ, ಸೋಂದಾ ಬಾಸ್ಕರ ಭಟ್ ಅವರ ಶ್ಲೋಕ ಸಾಗರ ಬಿಡುಗಡೆಗೊಂಡಿತು. ಯಕ್ಷಚಿತ್ರ ರಚನೆ, ಸಾಹಿತಿಗಳ ನೆನಪು

ಸುಮಾರು ಮೂವತ್ತಕ್ಕೂ ಹೆಚ್ಚಿನ‌ ಕಲಾವಿದರು ಪರಿಸರ ಮತ್ತು ಶ್ರೀಕ್ಷೇತ್ರ ಹಾಗೂ ಯಕ್ಷಗಾನಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ಸಮ್ಮೇಳನದಲ್ಲಿ ಪಾವಂಜೆ ಲಕ್ಷ್ಮೀ ನಾರಾಯಣಪ್ಪಯ್ಯರ ನೆನಪನ್ನು ಸಾಹಿತಿ ಬಿ ಜನಾರ್ದನ ಭಟ್‌, ಬಾಗಲೋಡಿ ದೇವರಾಯರ ನೆನಪನ್ನು ವಿದ್ವಾಂಸ ಅರವಿಂದ ಹೆಬ್ಬಾರ್‌, ಎಂ ಎನ್‌ ಕಾಮತ್‌ ರ ನೆನಪನ್ನು ಬರಹಗಾರ ದೇವು ಹನೇಹಳ್ಳಿ, ಎಂ ವ್ಯಾಸರ ನೆನಪನ್ನು ಸಾಹಿತಿ ವರದರಾಜ ಚಂದ್ರಗಿರಿ, ಸೇಡಿಯಾಪು ಕೃಷ್ಣ ಭಟ್ಟರ ನೆನಪನ್ನು ಸಾಹಿತಿ ಪಾದೇಕಲ್ಲು ವಿಷ್ಣು ಭಟ್‌ ಮಾಡಿದರು. ದಿನೇಶ್‌ ಕೊಡೆತ್ತೂರು, ಶಶಿಕಲಾ ಕೆಮ್ಮಡೆ, ಗ್ರೀಷ್ಮ ಕಟೀಲು ಮತ್ತಿತರರಿಂದ ಕಾವ್ಯ ಗಾಯನ ನಡೆಯಿತು. ಸಮ್ಮೇಳನಕ್ಕೆ ಬಂದವರಿಗೆ ಕನ್ನಡ ಶಾಲು, ಪುಸ್ತಕ, ತರಕಾರಿ ಗಿಡ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಸ್ವಾಸ್ಥ್ಯ ಕಾಪಾಡಿದ ಮಠಗಳು
ಸ್ವಯಂ ಅಧ್ಯಯನ ಶೀಲತೆಯಿಂದ ಉತ್ತಮ ಅಂಕ ಗಳಿಕೆ: ಕೃಷ್ಣಪ್ಪ