ಕನ್ನಡಪ್ರಭ ವಾರ್ತೆ ಮೂಲ್ಕಿ
ದೈವಸ್ಥಾನ ಮತ್ತು ಭಂಡಾರ ಛಾವಡಿ ಸಂಪೂರ್ಣ ಜೀರ್ಣೋದ್ದಾರಗೊಳ್ಳುತ್ತಿದ್ದು, ಸುಮಾರು ೫ ಕೋಟಿ ರುಪಾಯಿ ವೆಚ್ಚದಲ್ಲಿ ಅರಸು ಕುಂಜರಾಯ ದೈವದ ಪ್ರಧಾನ ಮಾಡದ ಗುಂಡ, ದೈವಗಳ ನೇಮೋತ್ಸವದ ಕೊಡಿ ಅಡಿ, ನೂತನ ಧ್ವಜ ಮರ, ದೈವಸ್ಥಾನದ ಮೂಡು ಗೋಪುರ, ದೈವಸ್ಥಾನದ ಪಡುಗೋಪುರ, ತೆಂಕು ಗೋಪುರ, ಬಡಗು ಗೋಪುರ, ಮಕರ ತೋರಣ, ದೈವಸ್ಥಾನದ ಮುಂಭಾಗದ ಪ್ರಾಂಗಣ ನಿರ್ಮಾಣ, ಶ್ರೀ ಕರ‍್ದಬ್ಬು ದೈವದ ಕಟ್ಟೆ ಮತ್ತು ಮೇಲ್ಛಾವಣಿ, ಈಶಾನ್ಯ ಕೊಠಡಿ, ನೈವೇದ್ಯ ಕೊಠಡಿ, ಕೊಡಿ ಅಡಿ ಸಾಮಾನುಗಳ ಕೊಠಡಿ, ಆಡಳಿತ ಕಚೇರಿ, ನೂತನ ಸಿಂಹಾಸನ ಕಟ್ಟೆ, ನೂತನ ಬಾವಿ, ನೂತನ ಭಂಡಾರ ಛಾವಡಿ ಹೀಗೆ ಮತ್ತಿತರ ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿವೆ. ಪ್ರತಿದಿನ ನೂರಾರು ಕಾರ್ಯಕರ್ತರು ಕರಸೇವೆಯಲ್ಲಿ ಭಾಗಿಯಾಗುತ್ತಿದ್ದು, ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸುತ್ತಿವೆ. ಒಟ್ಟು ೧೪ ದಿನ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಬ್ರಹ್ಮಕಲಶೋತ್ಸವ ಅಂಗವಾಗಿ ನಾಳೆ ಫೆ.1೬ರಂದು ಸಂಜೆ 3 ಗಂಟೆಗೆ ಬಿಸಿರೋಡಿನ ಕೈಕಂಬ ಪೊಳಲಿ ದ್ವಾರದಿಂದ ಕ್ಷೇತ್ರದ ವರೆಗೆ ಹಸಿರುವಾಣಿ ಹೊರೆ ಕಾಣಕೆ ಮೆರವಣಿಗೆ ನಡೆಯಲಿದೆ. ಹಸಿರುಹೊರೆಕಾಣಿಕೆ ಮೆರವಣಿಗೆಯನ್ನು ಶ್ರೀ ರಾಮಕೃಷ್ಣ ತಪೋವನ ಪೊಳಲಿ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಕುರಿಯಾಳ ರಘನಾಥ ಪಯ್ಯಡೆ ಹಾಗೂ ಉದ್ಯಮಿ ರಘ ಸಪಲ್ಯ ಅವರು ಉದ್ಘಾಟಿಸಲಿದ್ದಾರೆ. 60 ಕ್ಕೂ ಅಧಿಕ ವಾಹನಗಳು ಹಸಿರು ಹೊರೆಕಾಣಿಕೆಯಲ್ಲಿ ಭಾಗವಹಿಸಲಿದೆ ಎಂದು ಅವರು ತಿಳಿಸಿದರು. ಫೆ. 16 ರಿಂದಫೆ.23 ರವರೆಗೆ ನಿತ್ಯ ವೈಧಿಕ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆಯಲಿದೆ ಎಂದು ಅವರು ತಿಳಿಸಿದರು.