- ಅಧಿಕಾರಿಗಳ ನಿರ್ಲಕ್ಷ್ಯ: ರಸ್ತೆಗಳೆಲ್ಲ ಅಧ್ವಾನ, ಎಲ್ಲೆಂದರಲ್ಲಿ ಕಸದ ರಾಶಿ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ
ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಪಟ್ಟಣದ ರಸ್ತೆಗಳೆಲ್ಲ ಗುಂಡಿ, ಹೊಂಡಗಳಿಂದ ತುಂಬಿವೆ. ಪ್ರಸ್ತುತ ಮಳೆಗಾಲ ಆಗಿದ್ದರಿಂದ ರಸ್ತೆಗಳೆಲ್ಲ ಕೆಸರುಮಯವಾಗಿವೆ. ಓಡಾಡಲು ಸಹ ಬಾರದಷ್ಟು ದುಸ್ಥಿತಿ ನಿರ್ಮಾಣವಾಗಿದೆ. ಪಟ್ಟಣ ಸ್ವಚ್ಛತೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ನಾಗರಿಕರು ಪುರಸಭೆ ಆಡಳಿತ ನಿರ್ಲಕ್ಷವನ್ನು ಖಂಡಿಸಿದ್ದಾರೆ.ಬಸ್ ನಿಲ್ದಾಣದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಮುಂಭಾಗದ ನೆಲಹಾಸು ಹಾಳಾಗಿದೆ. ಅಲ್ಲಿ ನೀರು ನಿಂತುಕೊಂಡು ಕಸ ಕಟ್ಟಿಕೊಂಡು ದುರ್ವಾಸನೆ ಬೀರುತ್ತಿದೆ. ಬಸ್ ನಿಲ್ದಾಣದ ಎಡಭಾಗದ ಚರಂಡಿಯಲ್ಲೂ ಕಸ ಕಟ್ಟಿಕೊಂಡು ಪ್ರಯಾಣಿಕರಿಗೆ ದುರ್ವಾಸನೆ ಮಿತಿಮೀರಿದೆ. ನಿಲ್ದಾಣದ ಮಳಿಗೆಗಳ ಪಕ್ಕದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಆದರೆ, ಪಟ್ಟಣವನ್ನು ಸ್ವಚ್ಛವಾಗಿಸಿ, ನಾಗರಿಕರ ಆರೋಗ್ಯ ಕಾಪಾಡಬೇಕಾದ ಪುರಸಭೆ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ.
ಈ ಬಗ್ಗೆ ಹಲವಾರು ಬಾರಿ ಕೆಲ ನಾಗರಿಕರು ಪುರಸಭೆ ಮುಖ್ಯಾಧಿಕಾರಿ ಹಾಗೂ ಸಂಬಂಧಪಟ್ಟ ವಿಭಾಗಗಳ ನೌಕರರಿಗೆ ತಿಳಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಪುರಸಭೆಯ ಆಡಳಿತ ನಿರ್ಲಕ್ಷ್ಯದಿಂದ ನಾಗರಿಕರು, ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂಬುದು ಪಟ್ಟಣದ ಚಂದ್ರಣ್ಣ, ರುದ್ರಣ್ಣ, ಮಹೇಶ್ವರಪ್ಪ, ಅಶ್ವತ್ ನಾರಾಯಣ್, ಮಾಚನಾಯ್ಕನಹಳ್ಳಿ ಅಂಗಡಿ ಪರಮೇಶ ಎಂಬವರ ಆರೋಪ.- - -
ಕೋಟ್‌ಚನ್ನಗಿರಿ ಪುರಸಭೆಯಲ್ಲಿ ಅಧ್ಯಕ್ಷರು- ಉಪಾಧ್ಯಕ್ಷರ ಅಧಿಕಾರ ಅವಧಿ ಮುಗಿದ ಮೇಲೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಚುನಾವಣೆ ನೀತಿ ಸಂಹಿತೆ ಇದೆ. ಆದ್ದರಿಂದ ಸದಸ್ಯರ ಸಭೆಯನ್ನು ಅಧಿಕಾರಿಗಳು ಕರೆದಿಲ್ಲ. ಚನ್ನಗಿರಿ ಪಟ್ಟಣದ ಸ್ವಚ್ಛತೆಯಲ್ಲಿ ಭಾರೀ ಹಿನ್ನಡೆ ಆಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದೇನೆ- ಅಮೀರ್ ಅಹಮದ್, ಹಾಲಿ ಸದಸ್ಯ, ಮಾಜಿ ಅಧ್ಯಕ್ಷ, ಪುರಸಭೆ
- - - -21ಕೆಸಿಎನ್‌ಜಿ3: ಚನ್ನಗಿರಿ ಮುಖ್ಯ ಬಸ್ ನಿಲ್ದಾಣ ವಾಣಿಜ್ಯ ಮಳಿಗೆಗಳ ಪಕ್ಕದಲ್ಲಿರುವ ಕಸದ ರಾಶಿ.-21ಕೆಸಿಎನ್‌ಜಿ4: ಮುಖ್ಯ ಬಸ್ ನಿಲ್ದಾಣದ ಕುಡಿಯುವ ನೀರಿನ ಟ್ಯಾಂಕ್ ಪಕ್ಕದಲ್ಲಿ ಅವ್ಯವಸ್ಥೆ.
-21ಕೆಸಿಎನ್‌ಜಿ5: ಮುಖ್ಯ ಬಸ್ ನಿಲ್ದಾಣ ಪಕ್ಕದ ಚರಂಡಿಯಲ್ಲಿ ತುಂಬಿರುವ ಕಸದ ರಾಶಿ.