ಅವಧಿ ಮುಕ್ತಾಯ ಹಿನ್ನಲೆಯಲ್ಲಿ ₹22,530, ₹17, 200 ಕ್ಕೆ ಬಹಿರಂಗ ಹರಾಜು
ಕನ್ನಡಪ್ರಭ ವಾರ್ತೆ,ಬೀರೂರು.ವಾಣಿಜ್ಯ ಮಳಿಗೆ ಬಾಡಿಗೆದಾರರ ಅವಧಿ ಮುಕ್ತಾಯದ ಹಿನ್ನಲೆಯಲ್ಲಿ ಸೋಮವಾರ ಪುರಸಭೆ ಸಭಾಂಗಣದಲ್ಲಿ ಪುರಸಭೆ ಪ್ರಭಾರ ಅಧ್ಯಕ್ಷ ಎನ್.ಎಂ.ನಾಗರಾಜ್ ಅಧ್ಯಕ್ಷತೆಯಲ್ಲಿ ವಾಣಿಜ್ಯ ಮಳಿಗೆಗಳು ದಾಖಲೆ ಬೆಲೆಗೆ ಹರಾಜಾದವು.12 ವರ್ಷಗಳ ಅವಧಿಗೆಗೆ ಬಾಡಿಗೆ ಆಧಾರದಲ್ಲಿ ಹರಾಜು ನಡೆಯುವ ವೇಳೆ ಪರಿಶಿಷ್ಟ ಜಾತಿಗೆ ಮೀಸಲಿದ್ದ ಮಳಿಗೆಗೆಗಳ ಹರಾಜಿಲ್ಲಿ ಪರಿಶಿಷ್ಠ ಜಾತಿಯವರ ಜಾತಿ ಪ್ರಮಾಣ ಪಡೆದು ಬೇರೊಬ್ಬರು ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿದ ಬಿಡ್‌ದಾರ ಗಣೇಶ್ ಎಸ್ಸಿ ಸಮುದಾಯಕ್ಕೆ ಮಾತ್ರ ಹರಾಜಿನಲ್ಲಿ ಬಿಡ್ ಮಾಡಲು ಸೂಚಿಸಬೇಕು ಇಲ್ಲವಾದರೇ ಮೀಸಲಾತಿ ನಮಗೇಕೆ ಬೇಕು ಎಂದು. ಸಂವಿಧಾನ ನೀಡಿರುವ ಮೀಸಲಾತಿಯಂತೆ ಹರಾಜು ನಡೆಸುವುದಿಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಮುಖ್ಯಾಧಿಕಾರಿ ಜಿ.ಪ್ರಕಾಶ್, ಬಿಡ್ ನಲ್ಲಿ ಎಸ್ಸಿ ಮೀಸಲಾತಿಯವರಿಂದ ಬಿಡ್ ಮಾಡಲು ಹಣಕಟ್ಟಿಸಿಕೊಳ್ಳುವ ಸಮಯದಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲಾಗಿದೆ. ಹಣ ಕಟ್ಟಿದ ವ್ಯಕ್ತಿ ಎಸ್ಸಿ ಜಾತಿಗೆ ಸೇರಿದ್ದರೇ ಮಾತ್ರ ಬಿಡ್ ಮಾಡಲು ಸಾಧ್ಯ. ಆ ವ್ಯಕ್ತಿಯ ಪರವಾಗಿ ಬೇರೆಯವರು ಬಿಡ್ ಮಾಡಲು ಅನುಮತಿ ಇಲ್ಲ ಎಂದಿದಕ್ಕೆ ಪುರಸಭೆ ಅಧ್ಯಕ್ಷ ನಾಗರಾಜ್ ಹಾಗೂ ಸದಸ್ಯರು ಬೆಂಬಲ ಸೂಚಿಸಿ ಹರಾಜು ಮುಂದುವರಿಯಿತು.ತದ ನಂತರ ವಿಕಲಚೇತನರಿಗೆ ಮೀಸಲಿದ್ದ ಮಳಿಗೆ ಹರಾಜಿನಲ್ಲೂ ವಿಕಲಚೇತನರು ಹರಾಜಿಗೆ ಬಂದಿಲ್ಲ, ಅವರ ಪರವಾಗಿ ಬೇರೆಯವರು ಬಂದಿದ್ದಾರೆ. ಹರಾಜು ನಿಲ್ಲಿಸಿ ಎಂದು ಕೆಲವು ವಿಕಲಚೇತನ ಬಿಡ್ ದಾರರು ಹೇಳಿದರು. ಇನ್ನು ಕೆಲವರು ನೀವು ಮಹಡಿಯಲ್ಲಿ ಹರಾಜು ನಡೆಸುತ್ತಿದ್ದೀರಿ, ಅವರೇಗೆ ಹತ್ತುವುದು, ಹಣ ಕಟ್ಟಿಸಿಕೊಳ್ಳುವಾಗ ಇಂತಹ ನಿಬಂಧನೆ ಏಕೆ ಹಾಕಿಲ್ಲ, ಅವರ ಅಂಗವೈಕಲ್ಯತೆ ಪ್ರಮಾಣ ಪತ್ರ ನೀಡಿದ್ದೇವೆ. ಯಾರೇ ಅವರ ಹೆಸರಿನಲ್ಲಿ ಹರಾಜು ಕೂಗಿದರು ಅವರ ಹೆಸರಿಗೆ ತಾನೆ ನೀವು ಸ್ಥಿರಾಂಕ ನಿಗದಿ ಪಡಿಸುವುದು ಎಂದರು. ಪ್ರಭಾರಿ ಅಧ್ಯಕ್ಷ ನಾಗರಾಜ್ ಮಾತನಾಡಿ ಹರಾಜು ನಿಲ್ಲಿಸುವುದಿಲ್ಲ. ವಿಕಲಚೇತನರ ಪರವಾಗಿ ಅವರ ರಕ್ತಸಂಬಂಧಿಗಳು ಮಾತ್ರ ಬಿಡ್ ಮಾಡಬಹುದು ಎಂದಾಗ ಒಪ್ಪಿದ ಬಿಡ್ ದಾರರು ಹರಾಜು ಮುಂದುವರಿಸಿದರು.ಪುರಸಭೆ ಮುಂಭಾಗದ 10 ವಾಣಿಜ್ಯ ಮಳಿಗೆಗಳ ಪೈಕಿ7 ಜನ ಮಳಿಗೆ ಮಾಲೀಕರು ಹಲವು ವರ್ಷಗಳಿಂದ ನಾವು ಇಲ್ಲಿಯೇ ಇದ್ದು ಈ ಮಳಿಗೆಯನ್ನೆ ನಂಬಿ ಜೀವನ ಸಾಗಿಸುತ್ತಿದ್ದೇವೆ. ಇದನ್ನು ನಮಗೆ ಮಾಡಿಕೊಡಿ ಎಂದು ಘನ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಅದರಂತೆ ನ್ಯಾಯಾಲಯ, ಹರಾಜಿನಲ್ಲಿ ಭಾಗವಹಿಸಿ ಹರಾಜು ಮುಗಿದ ನಂತರ ಶೇ. 5ರಷ್ಟು ಹೆಚ್ಚಿಗೆ ನಿಗದಿ ಪಡಿಸಿ ಮಳಿಗೆ ಬಾಡಿಗೆ ಪಡೆಯಲು ಅವಕಾಶ ಕಲ್ಪಿಸುವಂತೆ ಪುರಸಭೆಗೆ ಸೂಚನೆ ನೀಡಿತ್ತು. ಅದರಂತೆ ಪಾಲ್ಗೊಂಡ ಸಾಮಾನ್ಯ ವರ್ಗಕ್ಕೆ ಸೇರಿದ ಮಳಿಗೆ ಸಂಖ್ಯೆ ,3,5,6,7,8,9,10 ಮಾಲೀಕರಲ್ಲಿ ಕೆಲವರು ಇಷ್ಟೊಂದು ಹಣ ಬಾಡಿಗೆ ಕಟ್ಟಲು ಸಾಧ್ಯವಿಲ್ಲವೆಂದು ತಮ್ಮ ಮಳಿಗೆಗಳನ್ನು ಬಿಡ್ ಪಡೆದವರಿಗೆ ಬಿಟ್ಟು ಕೊಟ್ಟ ಘಟನೆ ನಡೆಯಿತು.ಸಾಮಾನ್ಯ ವರ್ಗಕ್ಕೆ ನಡೆಯಬೇಕಾದ ಹರಾಜು ಪೈಪೋಟಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ 2 ಮಳಿಗೆಗಳಲ್ಲಿ ಭರತ್ ನಾಯ್ಕ್ ಮಾಸಿಕ ಬಾಡಿಗೆ ₹22,530 ರು.ಗೆ ತಮ್ಮದಾಗಿಸಿಕೊಂಡರೆ ಇನ್ನೊಂದು ಮಳಿಗೆಯನ್ನು ಗಣೇಶ್ ಎಂಬುವರು ₹17, 200 ಕ್ಕೆ ಕೂಗಿ ಪಡೆದರು. ಪುರಸಭೆ ದಾಖಲೆ ಬೆಲೆಯ ಹರಾಜು ಪ್ರಕ್ರಿಯೆ ಪಟ್ಟಿಗೆ ಸೇರಿಕೊಂಡಿತ್ತು. ಉಳಿದಂತೆ ಸಾಮಾನ್ಯ ವರ್ಗಕ್ಕೆ ಸೇರಿದ ಮಳಿಗೆಗಳು ಸಹ ₹20ಸಾವಿರ ಒಳಗೆ ಹರಾಜಾಗಿದ್ದು ಕಂಡು ಬಂತು. ಹಲವು ವರ್ಷಗಳಿಂದ ಪುರಸಭೆ ಮಳಿಗೆ ಗಳನ್ನು ನಮಗೇ ನೀಡಬೇಕು ಎಂದು ಪುರಸಭೆ ಆಡಳಿತ ಮಂಡಳಿ ವಿರುದ್ದ ಘನ ನ್ಯಾಯಲಯಕ್ಕೆ ದಾವೆ ಹೂಡಿದ್ದ 7ಜನ ಬಾಡಿಗೆದಾರರ ಪೈಕಿ 3ಜನ ಪ್ರಕಾಶ್ ಕುಮಾರ್ ಗೆ 2 ಮಳಿಗೆ ಮಾಲತೇಶ್, ಹಾಗೂ ಶ್ರೀನಿವಾಸ್ ಅವರು ಶೇ. 5ರಷ್ಟು ಹೆಚ್ಚಿನ ಬಾಡಿಗೆ ಪಾವತಿಸಲು ಹಾಗೂ ಷರತ್ತಿಗೆ ಒಳಪಟ್ಟು ಒಪ್ಪಿ ತಮ್ಮದಾಗಿಸಿಕೊಂಡರು.ಮಳಿಗೆ ಖಾಲಿ ಮಾಡಿಸಿ ಕೊಡಲು ಬಿಡ್ ಪಡೆದವರಿಂದ ಒತ್ತಾಯ:ಹರಾಜಿನಲ್ಲಿ ನಾವೇನು ಪಾಲ್ಗೊಂಡು ಬಿಡ್ ಮಾಡಿ ಹರಾಜು ತಮ್ಮದಾಗಿಸಿಕೊಂಡಿದ್ದು, ಈ ಹಿಂದೆ ಇದ್ದ ಮಳಿಗೆ ಮಾಲೀಕರನ್ನು ಖಾಲಿ ಮಾಡಿಕೊಡಿ ಎಂದು ಮುಖ್ಯಾಧಿಕಾರಿಗಳನ್ನು ಒತ್ತಾಹಿಸಿದರು.ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಜಿ.ಪ್ರಕಾಶ್, ಹರಾಜು ಇಸ್ತಿಯಾರ್ ಷರತ್ತಿನಂತೆ ನಿಗಧಿತ ಠೇವಣಿ 15 ದಿನಗಳಲ್ಲಿ ಪಾವತಿಸಿ, ಬಾಡಿಗೆ ಕರಾರು ಪತ್ರ ಮಾಡಿಸಿ, ಜಿಲ್ಲಾಧಿಕಾರಿಗಳಿಂದ ಹರಾಜು ಸ್ಥಿರಿಕರಣವಾದ ನಂತರ ಮಳಿಗೆಯನ್ನು ತಮಗೆ ವಹಿಸಿಕೊಡಲಾಗುವುದು ಎಂದರು.ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯರಾದ ಬಿ.ಕೆ.ಶಶಿಧರ್, ಮೋಹನ್ ಕುಮಾರ್, ರಾಜು, ಮಾನಿಕ್ ಭಾಷ ಸೇರಿದಂತೆ ಮತ್ತಿತರ ಬಿಡ್ ದಾರರು ಮತ್ತು ಪುರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.30 ಬೀರೂರು 1ಬೀರೂರು ಪುರಸಭೆ ಸಭಾಂಗಣದಲ್ಲಿ ಸೋಮವಾರ ಪುರಸಭೆ ಪ್ರಭಾರ ಅಧ್ಯಕ್ಷ ಎನ್.ಎಂ.ನಾಗರಾಜ್ ಅಧ್ಯಕ್ಷತೆಯಲ್ಲಿ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ನಡೆಯಿತು. ಮುಖ್ಯಾಧಿಕಾರಿ ಜಿ.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಮತ್ತಿತರಿದ್ದರು.