- ನಗರಸಭೆ ವಾರ್ಡ್‌ಗಳಲ್ಲಿ ಪರಿಸರ ಸ್ವಚ್ಛತಾ ಕಾರ್ಯ
ನಗರದಲ್ಲಿ ಬೆಳ್ಳಂಬೆಳಗ್ಗೆಯೇ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ನಗರಸಭೆ ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರ ತಂಡದೊಂದಿಗೆ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ವಚ್ಛತಾ ವ್ಯವಸ್ಥೆ ಪರಿಶೀಲಿಸಿದರು.
ವಿದ್ಯಾನಗರದ ಚರಂಡಿ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಿದ್ದ ಕಳೆಗಿಡಗಳು, ಚರಂಡಿಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ವಸ್ತುಗಳನ್ನು ಸ್ವಚ್ಛತೆಗೊಳಿಸಲು ಕ್ರಮ ಕೈಗೊಂಡರು.ಈ ಸಂದರ್ಭ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಡೆಂಘೀ, ಚಿಕೂನ್ ಗುನ್ಯಾ ಸೇರಿದಂತೆ ಹಲವಾರು ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಜನರು ಭಯಗೊಂಡಿದ್ದಾರೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸ್ವಚ್ಛತೆ ಕಾರ್ಯಕ್ಕೆ ಮೊದಲು ಆದ್ಯತೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಮುಂದೆ ಪ್ರತಿದಿನವೂ ಮುಂಜಾನೆ ವಾರ್ಡ್‌ಗಳಿಗೆ ಭೇಟಿ ನೀಡುವುದು, ಸ್ವಚ್ಛತೆ ಕಾರ್ಯವನ್ನು ಮಾಡಿಸುವುದು ನನ್ನ ಮೊದಲ ಗುರಿಯಾಗಿದೆ. ನಾಗರೀಕರು ನಗರವನ್ನು ಸುಂದರ ಮತ್ತು ಉತ್ತಮ ಪರಿಸರ ನಿರ್ಮಾಣ ಮಾಡುವುದಕ್ಕೆ ನಗರಸಭಾ ಅಧಿಕಾರಿಗಳು ಪೌರಕಾರ್ಮಿಕರೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷ್ ನಾಯ್ಕ್. ಅಮ್ರಿನ್. ಹೆಲ್ತ್ ಟ್ರೇನರ್ ಸೌಜನ್ಯ. ಪೌರಕಾರ್ಮಿಕರಾದ ಸದಾಶಿವ, ಸೋಮನಾಥ್, ರಾಜಪ್ಪ, ಮಲ್ಲಿಕಾರ್ಜುನ, ಡಿ ಹನುಮಂತಪ್ಪ, ಸ್ಥಳೀಯ ನಿವಾಸಿಗಳಾದ ಚಂದ್ರಕಾಂತ್, ಶಶಿಕುಮಾರ್, ಇತರರು ಇದ್ದರು.
ಹರಿಹರದಲ್ಲಿ ಬೆಳ್ಳಂಬೆಳಗ್ಗೆ ನಗರದಲ್ಲಿ ನಗರಸಭೆ ವಿವಿಧ ವಾರ್ಡ್‌ಗಳಿಗೆ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಭೇಟಿ ನೀಡಿ, ಸಿಬ್ಬಂದಿ ಮುಖೇನ ಪರಿಸರ ಸ್ವಚ್ಛತೆ ಕಾರ್ಯಗಳನ್ನು ನಡೆಸಿದರು.