ಬೀದಿನಾಯಿ ಸೆರೆಹಿಡಿದ ಮಹಾನಗರ ಪಾಲಿಕೆ ಸಿಬ್ಬಂದಿ

KannadaprabhaNewsNetwork |  
Published : May 07, 2026, 03:15 AM IST
ಬಾಲಕನನ್ನು ಕಚ್ಚಿದ್ದ ಬೀದಿನಾಯಿಯನ್ನು ಸೆರೆಹಿಡಿದ ಮಹಾನಗರ ಪಾಲಿಕೆ ಸಿಬ್ಬಂದಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ರಾಜಕುಮಾರ ಲೇಔಟ್‌ನಲ್ಲಿ ಮಂಗಳವಾರ ಸಂಜೆ ಮೂರು ವರ್ಷದ ಬಾಲಕ ವಿರಾಜ ಬಿರಾದಾರ ಎಂಬಾತನ ಮೇಲೆ ದಾಳಿ ಮಾಡಿದ್ದ ಬೀದಿ ನಾಯಿಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ಬೆಳಗ್ಗೆ ಸೆರೆ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ರಾಜಕುಮಾರ ಲೇಔಟ್‌ನಲ್ಲಿ ಮಂಗಳವಾರ ಸಂಜೆ ಮೂರು ವರ್ಷದ ಬಾಲಕ ವಿರಾಜ ಬಿರಾದಾರ ಎಂಬಾತನ ಮೇಲೆ ದಾಳಿ ಮಾಡಿದ್ದ ಬೀದಿ ನಾಯಿಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ಬೆಳಗ್ಗೆ ಸೆರೆ ಹಿಡಿದಿದ್ದಾರೆ.

ಬಾಲಕನ ಬೆನ್ನಿಗೆ ಹಾಗೂ ತೊಡೆಗೆ ಕಚ್ಚಿ ಗಾಯಗೊಳಿಸಿದ್ದ ಬೀದಿ ನಾಯಿಯನ್ನು ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಸೆರೆ ಹಿಡಿದರು. ಸೆರೆ ಹಿಡಿಯುವ ವೇಳೆ ಬೀದಿನಾಯಿ ಪಾಲಿಕೆ ಸಿಬ್ಬಂದಿಗೂ ಕಚ್ಚಲು ಪ್ರಯತ್ನಿಸಿದ ಘಟನೆ ಜರುಗಿತು. ಬಳಿಕ ಬೀದಿ ನಾಯಿಯ ಬಾಯಿ ಹಾಗೂ ಕಾಲುಗಳನ್ನು ಕಟ್ಟಿ ಹಾಕಿ ಪಾಲಿಕೆ ವಾಹನದಲ್ಲಿ ಶೆಲ್ಟರ್‌ಗೆ ಸಾಗಿಸಲಾಯಿತು.

ಕಳೆದ ಹಲವು ದಿನಗಳಿಂದ ರಾಜಕುಮಾರ ಲೇಔಟ್ ನಲ್ಲಿ ಜನರಿಗೆ ತಲೆ ನೋವಾಗಿದ್ದ ಬೀದಿ ನಾಯಿಯನ್ನು ಇಂದು ಸೆರೆ ಹಿಡಿಯಲಾಗಿದೆ. ಆದರೆ, ಏನಾದರೂ ಅನಾಹುತಗಳು ಜರುಗಿದಾಗ ಮಾತ್ರ ಬರುವ ಪಾಲಿಕೆಯವರು ಅವಘಡಕ್ಕೂ ಮೊದಲೇ ನಿರಂತರವಾಗಿ ಕಾರ್ಯಾಚರಣೆ ಮಾಡಿದರೆ ಬೀದಿನಾಯಿಗಳ ಕಾಟಕ್ಕೆ ತಡೆ ಹಾಕಬಹುದು ಎಂಬುವುದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

24ಕ್ಕೆ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಠೇವಣಿ ಹಣ ನೀಡಲು ಆಗ್ರಹಿಸಿ ಪ್ರತಿಭಟನೆ